fbpx
ಸಮಾಚಾರ

ನಟಿ ಮೀನಾಗೆ 2ನೇ ಮದುವೆ?

ಇತ್ತೀಚೆಗಷ್ಟೇ ಹಿರಿಯ ನಟಿ ಮೀನಾ ಪತಿಯನ್ನು ಕಳೆದುಕೊಂಡಿರುವುದು ಗೊತ್ತೇ ಇದೆ. COVID-19 ನಂತರದ ಆರೋಗ್ಯ ಸಮಸ್ಯೆಗಳಿಂದಾಗಿ ಅವರ ಪತಿ ಇತ್ತೀಚೆಗೆ ನಿಧನರಾದರು. ಪತಿಗೆ ಕೇವಲ 50 ವರ್ಷ ವಯಸ್ಸಾಗಿರುವುದರಿಂದ ಚಿತ್ರರಂಗದ ಎಲ್ಲರಿಗೂ ಇದು ಆಘಾತವಾಗಿದೆ. ಇದೀಗ ಮೀನಾ 2ನೇ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿವೆ.

46 ವರ್ಷ ವಯಸ್ಸಿನ ಈ ನಟಿ ಈಗ ಮರುಮದುವೆಯಾಗುವಂತೆ ಮನೆಯವರು ಒತ್ತಡ ಹೇರುತ್ತಿದ್ದಾರೆ ಎನ್ನಾಗಿದೆ. ಗಂಡನ ನಿಧನದ ನಂತರ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಮೀನಾ ಇತ್ತೀಚಿಗೆ ಶೂಟಿಂಗ್‌ಗೆ ಹಾಜರಾಗುತ್ತಿದ್ದಾರೆ. ಕುಟುಂಬಸ್ಥರ ಒತ್ತಡದಿಂದಾಗಿ ಮೀನಾ ಕುಟುಂಬದ ಸ್ನೇಹಿತನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆ ವ್ಯಕ್ತಿಗೆ ಮೀನಾ ಕುಟುಂಬದೊಂದಿಗೆ ಬಹಳ ಹಿಂದಿನಿಂದಲೂ ಒಡನಾಟವಿದೆ ಎಂದು ವರದಿಯಾಗಿದೆ.

ಮೀನಾ 2009 ರಲ್ಲಿ ವಿದ್ಯಾಸಾಗರ್ ಅವರನ್ನು ವಿವಾಹವಾದರು. ಮೀನಾ ಅವರ ಪತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅನಾರೋಗ್ಯದ ಕಾರಣ ಈ ವರ್ಷ ಜೂನ್ 18 ರಂದು ನಿಧನರಾದರು. ಪತಿಯ ಮರಣದ ನಂತರ ಧೈರ್ಯ ಕಳೆದುಕೊಂಡ ಮೀನಾ ಅವರ ಎರಡನೇ ಮದುವೆ ಅವರ ಬದುಕನ್ನು ಬೆಳಗಲಿ ಎಂದು ಹಾರೈಸಿದ್ದಾರೆ ಕುಟುಂಬಸ್ಥರು. ಮೀನಾ ಈಗ ಫ್ಯಾಮಿಲಿ ಫ್ರೆಂಡ್ ಆಗಿರುವ ವ್ಯಕ್ತಿಯನ್ನು ಮದುವೆಯಾಗುವ ಯೋಚನೆಯಲ್ಲಿದ್ದಾರೆ.

ತನಗೆ ಎರಡನೇ ಮದುವೆಯಾಗಲು ಇಷ್ಟವಿಲ್ಲ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಆದರೆ ಕುಟುಂಬಸ್ಥರು ಮೀನಾ ಅವರ ಮದುವೆಗೆ ವಿನಂತಿಸುತ್ತಿದ್ದಾರೆ, ತನಗೆ ಗಂಡನ ಅಗತ್ಯವಿಲ್ಲದಿದ್ದರೂ, ಮಗಳಿಗೆ ತಂದೆ ಬೇಕು, ಆದ್ದರಿಂದ ಅವಳು ಮದುವೆಯಾಗಬೇಕು ಎಂದು ಹೇಳಿದ್ದಾರೆ. ಆದಾಗ್ಯೂ, ಪರಿಸ್ಥಿತಿ ಹೇಗೆ ಬದಲಾಗಲಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top