fbpx
ಸಮಾಚಾರ

ಹರಿಪ್ರಿಯಾ-ವಸಿಷ್ಠ ಸಿಂಹ ನಡುವೆ ಪ್ರೀತಿ ಚಿಗುರಲು ಈ ತೆಲುಗು ಸಿನಿಮಾ ಕಾರಣ

ಕಳೆದ ಎರಡು ಮೂರು ದಿನಗಳಿಂದ ಚಂದನವನದ ತುಂಬೆಲ್ಲಾ ಬರೀ ಹರಿಪ್ರಿಯ- ವಶಿಷ್ಠ ಸಿಂಹ ಲವ್ ಸ್ಟೋರಿಯದ್ದೇ ಸುದ್ದಿ. ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದ್ವೆ ಆಗ್ತಾರೆ ಅನ್ನೋ ಗಾಸಿಪ್ ಎಲ್ಲಾ ಕಡೆ ಹರಿದಾಡುತ್ತಿದೆ. ಡಿಸೆಂಬರ್ ನಲ್ಲಿ ಈ ಜೋಡಿ ನಿಶ್ಚಿತಾರ್ಥ ಆಗ್ತಾರೆ, ಮುಂದಿನ ವರ್ಷ ಮದ್ವೆ ಕೂಡ ಆಗ್ತಾರೆ ಅನ್ನೋ ಮಾತಿದೆ.. ಅದ್ರೆ ಈ ವಿಚಾರ ನಿಜಾನೋ ಸುಳ್ಳೋ ಅನ್ನೋದರ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ..

ಈ ಮಧ್ಯೆ ಯಾವುದೇ ಇದ್ದಕ್ಕಿದ್ದಂತೆ ಇಂಥದ್ದೊಂದು ಸುದ್ದಿಯಾಗಲು ಭೇಟಿಯಾಗಿದ್ದು ಎಲ್ಲಿ? ಇಬ್ಬರಿಗೂ ಲವ್ ಸ್ಟಾರ್ಟ್ ಆಗಿದ್ದು ಹೇಗೆ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಇತ್ಯಾದಿ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಅಷ್ಟಕ್ಕೂ ಇವರಿಬ್ಬರೂ ಪರಸ್ಪರ ಪ್ರೇಮಿಸೋಕೆ ತೆಲುಗು ಸಿನಿಮಾವೊಂದು ಕಾರಣ ಎಂದು ಹೇಳಲಾಗುತ್ತಿದೆ.

ಹೌದು, ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಈಚೆಗೆ ಒಂದು ತೆಲುಗು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆ ಸಿನಿಮಾಗಿನ್ನೂ ಹೆಸರಿಟ್ಟಿಲ್ಲ.. ಈ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.. ಈ ಸಿನಿಮಾ ವೇಳೆ ಇಬ್ಬರಿಗೂ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರೂ ಪರಸ್ಪರ ಅರ್ಥ ಮಾಡಿಕೊಂಡರು ಎಂದು ಹೇಳಲಾಗುತ್ತಿದೆ. ಅಲ್ಲದೇ, ಗೆಳೆತನ ಗಟ್ಟಿಯಾಗಿ ಆ ನಂತರವಷ್ಟೇ ಮದುವೆ ಆಗುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎಂದು ಆಪ್ತ ವಲಯ ಹೇಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top