ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ರಿಲಯನ್ಸ್ ಒಡೆತನದ ಜಿಯೋ ನೆಟ್ವರ್ಕ್ ಡೌನ್ ಆಗಿದೆ. ರಿಲಯನ್ಸ್ ಜಿಯೋ ಬಳಕೆದಾರರು ಕರೆ ಮಾಡುವ ಮತ್ತು ಕರೆಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
No volte sign since morning & so unable to make any calls. Is this how you are planning to provide 5g services when normal calls are having issues? @reliancejio @JioCare #Jiodown
— Pratik Malviya (@Pratikmalviya36) November 29, 2022
ಅನೇಕ ಜಿಯೋ ಬಳಕೆದಾರರಿಗೆ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಹಾಗೂ SMS ಬಳಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ನವೆಂಬರ್ 29 ರಂದು ಮುಂಜಾನೆ 6 ರಿಂದ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಸ್ಥಗಿತಗೊಂಡಿತು ಮತ್ತು 9 ರವರೆಗೆ ಎಲ್ಲಾ ರೀತಿಯಲ್ಲಿ ಮುಂದುವರೆಯಿತು.
ಈ ಬಗ್ಗೆ ವರದಿ ಮಾಡಿರುವ ಡೌನ್ಡಿಟೆಕ್ಟನ್, ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಜಿಯೋ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದಾರಂತೆ. ಈ ಸಮಯದಲ್ಲಿ ಶೇ. 37 ರಷ್ಟು ಜನರಿಗೆ ಜಿಯೋ ಸಿಗ್ನಲ್ ಕಾಣಿಸುತ್ತಿರಲಿಲ್ಲ. ಶೇ. 26 ರಷ್ಟು ಮಂದಿಗೆ ಮೆಸೇಜ್ (Message) ಕಳುಹಿಸುವಾಗ ಎರಾರ್ ಬಂದಿದೆ. ದೆಹಲಿ, ಅಹ್ಮದಾಬಾದ್, ಮುಂಬೈ, ಚೆನ್ನೈ, ಬೆಂಗಳೂರು ಹಾಗೂ ಕೋಲ್ಕತ್ತಾದಲ್ಲಿ ಈ ಸಮಸ್ಯೆ ಕಂಡುಬಂದಿದೆ.
ಭಾರತದಲ್ಲಿ ಜಿಯೋ ಬಳಕೆದಾರರು ಎದುರಿಸಿದ ಇದೇ ರೀತಿಯ ಸರ್ವರ್ ಡೌನ್ ವರ್ಷದಲ್ಲಿ ಹಲವಾರು ಬಾರಿ ವರದಿಯಾಗಿದೆ. 2022 ರಲ್ಲಿ ಅಕ್ಟೋಬರ್, ಜೂನ್ ಮತ್ತು ಫೆಬ್ರವರಿಯಲ್ಲಿ ಡೇಟಾ ಮತ್ತು ಕರೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
