fbpx
ಸಮಾಚಾರ

ಗಾಯಕಿ ರೆಮೋ ಬದುಕಿನಲ್ಲಿ ಬಿರುಗಾಳಿ! ಸೂಪರ್ ಕ್ವೀನ್ ವೇದಿಕೆಯ ಮೇಲೆ ತಮ್ಮ ಜೀವನದ ಕಷ್ಟದ ದಿನಗಳನ್ನು ಹಂಚಿಕೊಂಡ ಗಾಯಕಿ

ರೆಮೋ ಈ ಹೆಸರು ಕೇಳಿದ್ ತಕ್ಷಣ ನೆನಪು ಆಗುವುದು ಮಜಾ ಟಾಕೀಸ್. ಮಜಾ ಟಾಕೀಸ್ ವೇದಿಕೆಯ ಮೇಲೆ ಸೃಜನ್ ಲೋಕೇಶ್ ಇವರನ್ನು ಎಷ್ಟು ಕಾಲು ಎಳೆದರು ಸಹ ಸ್ವಲ್ಪವೂ ಮನಸಿಗೆ ಬೇಸರ ಮಾಡಿಕೊಳ್ಳದೆ ಸದಾ ನಗುಮುಖದಿಂದ ಪ್ರತಿಕ್ರಯಿಸುತ್ತಿದ್ದರು. ಆದರೆ ಇವರ ಜೀವನ ಇವರ ನಗುವಿನಷ್ಟು ಸುಂದರವಾಗಿರಲಿಲ್ಲ. ಇವರು ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಇದರ ಕುರಿತು ಸೂಪರ್ ಕ್ವೀನ್ (Super Queen) ವೇದಿಕೆಯ ಮೇಲೆ ಹಂಚಿಕೊಂಡಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ರೆಮೋ ಸಕತ್ ಸ್ಟ್ರಾಂಗ್ ಹುಡುಗಿ. ಜೀವನದಲ್ಲಿ ಇಂತಹ ಕಷ್ಟ ಬಂದರು ಅದನ್ನು ಗಟ್ಟಿಯಾಗಿ ಎದುರಿಸುತ್ತಿದ್ದರು. ಇವರ ಕುಟುಂಬದಲ್ಲಿ ಅಪ್ಪ, ಅಮ್ಮ, ಅಣ್ಣ, ಮತ್ತು ರೆಮೋ ಇದ್ದರು. ಹೀಗಾಗಿ ಇವರದ್ದು ಸಣ್ಣ ಕುಟುಂಬ. ಬಹಳ ಖುಷಿಯಿಂದ ಜೀವನ ಸಾಗಿಸುತ್ತಿದ್ದ ರೆಮೋ ಬದುಕಿನಲ್ಲಿ ಪ್ರೀತಿ ದೊಡ್ಡ ಬಿರುಗಾಳಿಯನ್ನೇ ಬೀಸಿತ್ತು.

ರೆಮೋ ತಮಗಿಂತ 13 ವರ್ಷ ದೊಡ್ಡವರನ್ನು ಮದುವೆಯಾದರು. ಮೊದಲಿಗೆ ರೆಮೋ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು. ಅಲ್ಲಿ ಪರಿಚಯವಾಗಿದ್ದ ವ್ಯಕ್ತಿಯಿಂದ ಸ್ನೇಹ ಬೆಳೆದು ನಂತರ ಸ್ನೇಹ ಪ್ರೀತಿಗೆ ತಿರುಗಿತು. ಹೀಗಾಗಿ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದರು. ಆದರೆ ಇದಕ್ಕೆ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಮನೆಯವರ ವಿರೋಧ ಕಟ್ಟಿಕೊಂಡು ಇವರಿಬ್ಬರು ಮದುವೆಯಾದರು.

ಮದುವೆಯ ನಂತರ ರೆಮೋ ಜೀವನದಲ್ಲಿ ಹಲವಾರು ತೊಂದರೆಗಳು ಶುರುವಾದವು. ಮೊದಲಿಗೆ ಇವರಿಗೆ ಗಂಡನ ಮನೆಯಲ್ಲಿ ಹೇಳಿಕೊಳ್ಳುವಷ್ಟು ಪ್ರೀತಿ ಸಿಗಲಿಲ್ಲ. ಗಂಡನ ಮನೆಯವರು ಇವರನ್ನು ಮೂಲೆ ಗುಂಪು ಮಾಡಿದ್ದರು. ಆದರೂ ಸಹ ಹಲವಾರು ಕಷ್ಟಗಳನ್ನು ಇವರು ಅನುಭವಿಸುತ್ತಾ ಬಂದರು. ಆದರೆ ಯಾವಾಗ ಇವರಿಗೆ ಕಷ್ಟ ಹೆಚ್ಚಾಗತೊಡಗಿತೋ ಅವಾಗ ಇವರು ಒಂದು ಗಟ್ಟಿಯಾದ ನಿರ್ಧಾರ ಕೈಗೊಂಡರು. 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದರು.

ಇಂತಹ ಪರಿಸ್ಥಿತಿಯಲ್ಲಿ ಇವರ ಬಳಿ ಒಂದು ರೂಪಾಯಿ ಕೂಡ ಹಣವಿರಲಿಲ್ಲ. ಆದರೂ ಛಲ ಬಿಡದ ಇವರು ಹಗಲು ರಾತ್ರಿ ಹಾಡು ಹಾಡುತ್ತಾ ಹಣ ಸಂಪಾದಿಸಿದ್ದರು. ರಾತ್ರಿ ಮಗಳನ್ನು ಮಲಗಿಸಿ ತಾನು ಮಲಗುವಾಗ ತನ್ನ ಬದುಕನ್ನು ನೆನೆದು ಕಣ್ಣೀರು ಬರುತ್ತಿತ್ತು. ಸದ್ದಿಲ್ಲದೇ ಅಳುತ್ತಾ ಮರುದಿನ ಎಂದಿನಂತೆ ಎದ್ದು ಹಾಡಲು ಹೋಗುತ್ತಿದ್ದರು. ತಾನೀಗ ಬದುಕಿರುವುದೇ ಮಗಳಿಗಾಗಿ. ಮಗಳ ಜೀವನ ಚೆನ್ನಾಗಿರಬೇಕು ಎಂದು ವೇದಿಕೆಯ ಮೇಲೆ ತಮ್ಮ ಅಳಲನ್ನು ತೋಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top