fbpx
ಸಮಾಚಾರ

ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆಯಿತು ಅಚ್ಚರಿಯ ನಾಮಿನೇಷನ್! ರೂಪೇಶ್ ರಾಜಣ್ಣ ಹೊರೆತುಪಡಿಸಿ ಎಲ್ಲರೂ ನಾಮಿನೇಟ್

ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ 9 ವಾರಗಳು ಕಳೆದಿದೆ. ದಿನದಿಂದ ದಿನಕ್ಕೆ ಮನೆಯ ಸದಸ್ಯರಿಗೆ ಢವ ಢವ ಶುರುವಾಗುತ್ತಿದೆ. ಮನೆಯ ಮಂದಿಗೆ ಹೆಚ್ಚಾಗಿ ತಲೆ ಕೆಡಿಸುವುದು ನಾಮಿನೇಷನ್ ಪ್ರಕ್ರಿಯೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ವಿಶೇಷ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನೀಡಿದ್ದರು. ಇದರಲ್ಲಿ ರೂಪೇಶ್ ರಾಜಣ್ಣ ಅವರನ್ನು ಹೊರತುಪಡಿಸಿ ಪ್ರತಿಯೊಬ್ಬರೂ ನಾಮಿನೇಟ್ ಆಗಿದ್ದಾರೆ.

ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದರು. ಕ್ಯಾಪ್ಟನ್ ರಾಕೇಶ್ ಹೊರತುಪಡಿಸಿ.. ಇರುವ 10 ಸ್ಪರ್ಧಿಗಳು 5 ಜೋಡಿಗಳಾಗಬೇಕಿತ್ತು. ಇದರ ಅನುಸಾರ ದಿವ್ಯಾ ಉರುಡುಗ – ಅಮೂಲ್ಯ ಗೌಡ, ರೂಪೇಶ್ ಶೆಟ್ಟಿ – ರೂಪೇಶ್ ರಾಜಣ್ಣ,ಅರುಣ್ ಸಾಗರ್ – ಕಾವ್ಯಶ್ರೀ ಗೌಡ, ಆರ್ಯವರ್ಧನ್ ಗುರೂಜಿ – ಅನುಪಮಾ ಗೌಡ, ಪ್ರಶಾಂತ್ ಸಂಬರಗಿ – ದೀಪಿಕಾ ದಾಸ್ ಜೋಡಿಯಾದರು.

ಇದಾದ ನಂತರ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಿ ಜೋಡಿ ಪೈಕಿ ಒಬ್ಬರನ್ನು ಸೇಫ್ ಮಾಡಬಹುದಿತ್ತು. ಜೋಡಿ ಪೈಕಿ ಒಬ್ಬರು ಪಾರಾಗಲು ಇಚ್ಛಿಸಿದರೆ ತಮ್ಮದೇ ಫೋಟೋ ತೋರಿಸಬೇಕಿತ್ತು. ಇಬ್ಬರೂ ತೋರಿಸುವ ಭಾವಚಿತ್ರ ಒಂದೇ ಆಗಿದ್ದಲ್ಲಿ, ಭಾವಚಿತ್ರದಲ್ಲಿ ಇರುವವರು ಸೇಫ್ ಆಗುತ್ತಾರೆ. ಬೇರೆ ಬೇರೆ ಫೋಟೋ ಆಗಿದ್ದರೆ ಇಬ್ಬರೂ ನಾಮಿನೇಟ್ ಆಗುತ್ತಾರೆ ಎಂದು.

ಮೊದಲಿಗೆ ಅನುಪಮಾ ಮತ್ತು ಆರ್ಯವರ್ಧನ್ ಜೋಡಿ ಹೋದರು. ಹೀಗಾಗಿ ಇವರಿಬ್ಬರು ತಮ್ಮ ತಮ್ಮ ಫೋಟೋಗಳನ್ನು ತೋರಿಸಿದ್ದರಿಂದ ಇಬ್ಬರು ನಾಮಿನೇಟ್ ಆದರು. ಇದಾದ ನಂತರ ದಿವ್ಯಾ ಉರುಡುಗ ಮತ್ತು ಅಮೂಲ್ಯ ಗೌಡ.. ಇಬ್ಬರೂ ಒಬ್ಬರಿಗೊಬ್ಬರು ಸೇಫ್ ಮಾಡಲು ಮುಂದಾದರು. ಹೀಗಾಗಿ ಇಬ್ಬರದೂ ಬೇರೆ ಫೋಟೋ ಇದ್ದ ಕಾರಣ ಇಬ್ಬರು ನಾಮಿನೇಟ್ ಆದರು. ನಂತರ ಕಾವ್ಯಶ್ರೀ ಗೌಡ ಹಾಗೂ ಅರುಣ್ ಸಾಗರ್ ತಮ್ಮ ತಮ್ಮ ಫೋಟೋಗಳನ್ನೇ ತೋರಿಸಿದ್ರಿಂದ ನಾಮಿನೇಟ್ ಆದರು. ದೀಪಿಕಾ ದಾಸ್ ಮತ್ತು ಪ್ರಶಾಂತ್ ಸಂಭರ್ಗಿ ಜೋಡಿ ಪ್ರಶಾಂತ್ ಅವರ ಫೋಟೋ ತೋರಿಸಿದ್ದ ಕಾರಣ ಪ್ರಶಾಂತ್ ಸೇಫ್ ಆದರು. ನಂತರ ರೂಪೇಶ್ ಶೆಟ್ಟಿ ಮತ್ತು ರೂಪೇಶ್ ರಾಜಣ್ಣ ಜೋಡಿ ರಾಜಣ್ಣ ಅವರ ಫೋಟೋ ತೋರಿಸಿದ್ದರಿಂದ ರಾಜಣ್ಣ ಸೇಫ್ ಆದರು.

ಇದಾದ ಬಳಿಕ ಬಿಗ್ ಬಾಸ್ ಕ್ಯಾಪ್ಟನ್ ರಾಕೇಶ್ ಅವರಿಗೆ ಮನೆಯಲ್ಲಿ ನಾಮಿನೇಟ್ ಆದ ಸದಸ್ಯರನ್ನು ಹೊರೆತುಪಡಿಸಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿ ಎಂದು ಹೇಳಿದರು. ಹೀಗಾಗಿ ರಾಕೇಶ್ ಪ್ರಶಾಂತ್ ಸಂಭರ್ಗಿ ಅವರನ್ನು ನಾಮಿನೇಟ್ ಮಾಡಿದ್ದರು. ಹೀಗಾಗಿ ಈ ವಾರ ರೂಪೇಶ್ ರಾಜಣ್ಣ ಹೊರೆತುಪಡಿಸಿ ಮನೆಯ ಎಲ್ಲಾ ಸದಸ್ಯರು ನಾಮಿನೇಷನ್ ಲಿಸ್ಟ್ ನಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top