ಬಹುಭಾಷಾ ನಟರಲ್ಲಿ ಅತ್ಯಂತ ಹೆಸರು ಗಳಿಸಿರುವ ನಟರಲ್ಲಿ ಪ್ರಕಾಶ್ ರಾಜ್ ಕೂಡ ಒಬ್ಬರು. ವಿಲನ್ ಪಾತ್ರದಲ್ಲಿ ಇವರ ಅಭಿನಯಕ್ಕೆ ಅಭಿಮಾನಿಗಳು ಸಕತ್ ಫಿದಾ ಆಗಿದ್ದರು. ವಿಲನ್ ಪಾತ್ರದಲ್ಲಿ ಮಿಂಚಿದ್ದ ಪ್ರಕಾಶ್ ರಾಜ್ ಅವರ ಜೀವನ ಕೂಡ ಅತ್ಯಂತ ಕ್ರೂರವಾಗಿತ್ತು. ಒಂದು ಆಕ್ಸಿಡೆಂಟ್ ಇವರ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು.
ಪ್ರಕಾಶ್ ರಾಜ 1994 ರಲ್ಲಿ ದಕ್ಷಿಣದ ಪ್ರಸಿದ್ಧ ನಟಿ ಲಲಿತಾ ಕುಮಾರಿ ಅವರನ್ನು ವಿವಾಹವಾದರು. 1987-95 ಕಾಲದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ನಾಯಕಿ ಇವರು. ಈ ಜೋಡಿಗೆ ಮೇಘನಾ, ಪೂಜಾ ಮತ್ತು ಸಿದ್ದು ಎಂಬ ಮಕ್ಕಳಿದ್ದರು. ಆದರೆ ಇವರ ಜೀವನದಲ್ಲಿ ಆದ ಒಂದು ಆಕ್ಸಿಡೆಂಟ್ ಇವರ ಜೀವನವನ್ನು ಬದಲಾಯಿಸಿತು.
ಕೇವಲ 5ನೇ ವಯಸ್ಸಿನಲ್ಲಿ, ಪ್ರಕಾಶ್ ಮತ್ತು ಲಲಿತಾ ತಮ್ಮ ಮಗನನ್ನು ಕಳೆದುಕೊಂಡರು. ಚಿಕ್ಕ ವಯಸ್ಸಿನಲ್ಲಿ ಮಗನ ಕಳೆದುಕೊಂಡು ಈ ಜೋಡಿ ಬಹಳಷ್ಟು ನೋವನ್ನು ಪಟ್ಟಿತ್ತು. ಮಗನ ಸಾವಿನ ನಂತರ ಪ್ರಕಾಶ್ ರಾಜ್ ಮತ್ತು ಪತ್ನಿ ಲಲಿತಾ ನಡುವಿನ ಸಂಬಂಧ ಹದಗೆಡುತ್ತಾ ಬಂತು. ಕೊನೆಗೆ ಈ ಜೋಡಿ 15 ವರ್ಷಗಳ ವೈವಾಹಿಕ ಜೀವನಕ್ಕೆ ತೆರೆ ಎಳೆದು ವಿಚ್ಚೇದನ ಪಡೆದರು. ಇದಾಗಿ ಒಂದು ವರ್ಷದ ಬಳಿಕ ಪ್ರಕಾಶ್ ರಾಜ್ ಎರಡನೇ ಬಾರಿಗೆ ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರನ್ನು 2010 ರಲ್ಲಿ ವಿವಾಹವಾದರು. ಇವರು ಪ್ರಕಾಶ್ ರಾಜ್ ಕ್ಕಿಂತ ವಯಸ್ಸಿನಲ್ಲಿ 13 ವರ್ಷ ಚಿಕ್ಕವರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
