ತೆಲುಗು ಚಿತ್ರರಂಗದಲ್ಲಿ ಕೆಲ ಚಿತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದ ಸುಧೀರ್ ವರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಶಾಖಪಟ್ಟಣಂನಲ್ಲಿರುವ ಅವರ ನಿವಾಸದಲ್ಲಿ ನಟ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ವೈಯಕ್ತಿಕ ಕಾರಣಗಳಿಂದ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಇದೇ ತಿಂಗಳ 18 ರಂದು ಸುಧೀರ್ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಹೈದರಾಬಾದ್ನಲ್ಲಿ ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಕೊಂಡಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ತಿಂಗಳ 19ರವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಇದೀಗ ಆಸ್ಪತೆಯಿಂದ ಬಂದ ಒಂದೇ ವಾರದಲ್ಲಿ ನೇಣು ಹಾಕಿಕೊಳ್ಳುವುದ್ರ ಮೂಲಕ ಸುಧೀರ್ ಅವ್ರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Sudheer! @sudheervarmak Such a lovely and warm guy’ It was great knowing you and working with you brother! Can’t digest the fact that you are no more! Om Shanti!🙏🙏🙏 @iChandiniC @vara_mullapudi @anil_anilbhanu pic.twitter.com/Sw7KdTRkpG
— Sudhakar Komakula (@UrsSudhakarK) January 23, 2023
ಸುಧೀರ್ ವರ್ಮಾ ‘ಕುಂದನಪು ಬೊಮ್ಮ’, ‘ಸೆಕೆಂಡ್ ಹ್ಯಾಂಡ್’, ‘ಶೂಟೌಟ್ ಅಟ್ ಅಲ್ಲೇರು’ ಚಿತ್ರಗಳಲ್ಲಿ ಸುಧೀರ್ ನಟಿಸಿದ್ದರು. ಅವರ ನಿಧನಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸುಧೀರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ‘ಕುಂದನಪು ಬೊಮ್ಮ’ ಸಿನಿಮಾದಲ್ಲಿ ಅವರೊಂದಿಗೆ ನಟಿಸಿದ್ದ ಸುಧಾಕರ್ ಕೋಮಕುಲ ಅವರು ಸುಧೀರ್ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸುಧೀರ್ ಸಾವು ಆಘಾತ ತಂದಿದೆ.. ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
