fbpx
ಸಮಾಚಾರ

ಆಸ್ಕರ್ ನಾಮಿನೇಷನ್ ಲಿಸ್ಟ್ ನಿಂದ ದೂರ ಉಳಿದ ‘ದಿ ಕಾಶ್ಮೀರ್ ಫೈಲ್ಸ್’ !ಬಾಯ್ಕಾಟ್ ಆಸ್ಕರ್ ಎಂದ ಫ್ಯಾನ್ಸ್

ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ನಡೆದ ಆಸ್ಕರ್ ಪ್ರಶಸ್ತಿಯ ನಾಮ ನಿರ್ದೇಶನ ಘೋಷಣೆ ಕಾರ್ಯಕ್ರಮ ಭಾರತೀಯ ಕಾಲಮಾನದ ಪ್ರಕಾರ ನೆನ್ನೆ ಸಂಜೆ 7 ಘಂಟೆಗೆ ನಡೆದಿದೆ. ಭಾರತದ ಹಲವು ಸಿನಿಮಾಗಳು ಇದರಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಅದರಲ್ಲೂ ಬಹು ನಿರೀಕ್ಷಿತ “ದಿ ಕಾಶ್ಮೀರಿ ಫೈಲ್ಸ್” ಸಿನಿಮಾ ಈ ಪಟ್ಟಿಯಲ್ಲಿ ಇರುತ್ತದೆ ಎಂದು ಎಲ್ಲರು ಭಾವಿಸಿದ್ದರು. ಆದರೆ ಇದೀಗ ಅದು ಸುಳ್ಳಾಗಿದೆ.

ಈ ಬಾರಿ ಆಸ್ಕರ್ ಪ್ರಶಸ್ತಿಗೆ ಭಾರತದ ಹಲವಾರು ಸಿನಿಮಾಗಳು ಆಯ್ಕೆಯಾಗಿದ್ದವು. ಅದರಲ್ಲೂ ನಮ್ಮ ಕನ್ನಡದ ಕಾಂತಾರ, ವಿಕ್ರಾಂತ್ ರೋಣ, ತೆಲುಗಿನ RRR, ತಮಿಳಿನಿಂದ ಇರುವಿನ್ ನಿಲಳ್ ಹಾಗೂ ರಾಕೆಟ್ರಿ ದಿ ನಂಭಿ ಎಫೆಕ್ಟ್, ಹಿಂದಿಯಿಂದ ಗಂಗೂಬಾಯಿ ಕಾಠಿಯಾವಾಡಿ ಹಾಗೂ ದಿ ಕಾಶ್ಮೀರ್ ಫೈಲ್ಸ್, ಗುಜರಾತಿನಿಂದ ಛೆಲ್ಲೋ ಶೋ ಹೀಗೆ ಹಲವಾರು ಸಿನಿಮಾಗಳು ಸ್ಪರ್ಧೆಯಲ್ಲಿತ್ತು. ಆದರೆ ಇದರಲ್ಲಿ ಕೇವಲ 3 ಸಿನಿಮಾಗಳು ಮಾತ್ರ ಆಯ್ಕೆಯಾಗಿದೆ.

ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಮತ್ತು ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರ್ಸ್‍ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆದರೆ ಇದರಲ್ಲಿ ಬಹು ನಿರೀಕ್ಷಿತ “ದಿ ಕಾಶ್ಮೀರಿ ಫೈಲ್ಸ್” ಸಿನಿಮಾ ಇರಲಿಲ್ಲ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಆಸ್ಕರ್ ಹ್ಯಾಶ್ ಟ್ಯಾಗ್ ಮೂಲಕ ಬಹಿಷ್ಕರಿಸಿ ಎಂದು ಅಭಿಮಾನ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಆಸ್ಕರ್ ಸಂಸ್ಥೆ ” ಈ ಬಾರಿಯ ಪ್ರಶಸ್ತಿಗಾಗಿ ಒಟ್ಟು ಮುನ್ನೂರು ಸಿನಿಮಾಗಳನ್ನು ಆಯ್ಕೆ ಮಾಡಲಾಗಿತ್ತು. ಮುನ್ನೂರು ಸಿನಿಮಾಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ನಾಮಿನೇಷನ್ ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಆಸ್ಕರ್ ಪ್ರಶಸ್ತಿಗಾಗಿ ಆಯ್ಕೆ ನಡೆಯುತ್ತದೆ. ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳನ್ನು ಮಾರ್ಚ್ 12ರಂದು ಘೋಷಿಸಲಾಗುವುದು. ಇಂದು ಕೇವಲ ನಾಮ ನಿರ್ದೇಶನಗೊಂಡ ಸಿನಿಮಾಗಳನ್ನು ಮಾತ್ರ ಘೋಷಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top