ಬೆಂಗಳೂರಿನ ವಿದ್ಯಾರ್ಥಿ ಭವನ್ ಮಸಾಲೆ ದೋಸೆ ಸಿಕ್ಕಾಪಟ್ಟೆ ಫೇಮಸ್ ಅನ್ನೋ ವಿಚಾರ ಎಲ್ಲರಿಗು ಗೊತ್ತಿರುವಂತದ್ದೇ. ಅಲ್ಲಿನ ವೈಟರ್ ನ ದೋಸೆ ತರುವ ಶೈಲಿ ಕೂಡ ಮಸಾಲೆ ದೋಸೆಯಷ್ಟೇ ಹೆಸರುವಾಸಿ. ಒಮ್ಮೆಗೆ ಒಂದರ ಮೇಲೊಂದರಂತೆ ಹಲವಾರು ಪ್ಲೇಟ್ ದೋಸೆ ತಂದು ನೀಡುವುದು ವಿದ್ಯಾರ್ಥಿ ಭವನ್ ನ ವಿಶೇಷತೆ. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಉದ್ಯಮಿ ಆನಂದ್ ಮಹೀಂದ್ರ ಅವರು ಬೆಂಗಳೂರಿನ ವಿಖ್ಯಾತ ವಿದ್ಯಾರ್ಥಿ ಭವನದ ವೇಯ್ಟರ್‌ಗಳ ಕೌಶಲವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಒಂದರ ಮೇಲೊಂದರಂತೆ ಮಸಾಲೆ ದೋಸೆಯ ಪ್ಲೇಟ್‌ಗಳನ್ನು ಕೈಯಲ್ಲಿ ಪೇರಿಸಿಕೊಂಡು ಗ್ರಾಹಕರಿಗೆ ಸರ್ವ್ ಮಾಡುವ ವೇಯ್ಟರ್‌ಗಳ ವಿಡಿಯೋವನ್ನು ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. “ನಾವು ‘ವೇಟರ್ ಉತ್ಪಾದನಾ ಸಾಮರ್ಥ್ಯ’ವನ್ನು ಒಲಿಂಪಿಕ್ ಕ್ರೀಡೆಯಾಗಿ ನೋಡಬೇಕು. ಈ ಆಟದಲ್ಲಿ ಈ ಸಂಭಾವಿತ ಚಿನ್ನದ ಸ್ಪರ್ಧಿಯಾಗುತ್ತಾರೆ’ ಎಂದು ಕ್ಯಾಪ್ಶನ್ ಬರೆದು ಆನಂದ್ ಮಹೀಂದ್ರಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
We need to get ‘Waiter Productivity’ recognised as an Olympic sport. This gentleman would be a contender for Gold in that event… pic.twitter.com/2vVw7HCe8A
— anand mahindra (@anandmahindra) January 31, 2023
ಆನಂದ್ ಮಹಿಂದ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋ ಸಹಜವಾಗಿಯೇ ಈಗ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಈಗಾಗಲೇ 1.5 ಮಿಲಿಯನ್ ಜನರು ನೋಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
