ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ ನಿಮಗಾಗಿ ವಿಶೇಷ ಎಚ್ಚರಿಕೆಯ ಸಂದೇಶವಿದೆ. ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ, ಅದನ್ನು ಸರಿಪಡಿಸಲು ಪಾನ್ ನಂಬರ್ ಅಪ್ಡೇಟ್ ಮಾಡಿ ಅಂತಾ ಯಾವುದಾದರೂ ಮೆಸೇಜ್ ಅಥವಾ ಕರೆ ಬಂದರೆ ಅಪ್ಪಿತಪ್ಪಿಯೂ ಹಾಗೆ ಮಾಡಬೇಡಿ.
ನಿಮ್ಮ ಯೋನೋ ಖಾತೆ ಕ್ಲೋಸ್ ಆಗಿದೆ ಅದನ್ನು ಮರುಸಕ್ರಿಯಗೊಳಿಸಲು ನಿಮ್ಮ ಪಾನ್ ನಂಬರ್ ಅಪ್ಡೇಟ್ ಮಾಡಿ ಅಂತಾ ಹಲವರಿಗೆ ಈಗಾಗ್ಲೇ ಮೆಸೇಜ್ ಮತ್ತು ಕರೆಗಳು ಬಂದಿವೆ. ಇದಕ್ಕಾಗಿಯೇ ವಂಚಕರು ಲಿಂಕ್ ಒಂದನ್ನು ಸಹ ಕಳಿಸಿರ್ತಾರೆ. ಅವರು ಹೇಳಿದಂತೆ ಅಪ್ಡೇಟ್ ಮಾಡಲು ಹೋದ್ರೆ ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ವಂಚಕರ ಕೈಸೇರುತ್ತದೆ.
A #Fake message issued in the name of SBI is asking customers to update their PAN number to avoid their account from getting blocked#PIBFactCheck
▶️Never respond to emails/SMS asking to share your personal or banking details
▶️Report at👇
✉️ report.phishing@sbi.co.in
📞1930 pic.twitter.com/GiehqSrLcg
— PIB Fact Check (@PIBFactCheck) August 27, 2022
ಇದೊಂದು ಫೇಕ್ ಮೆಸೇಜ್. ಯಾವುದೇ ಕಾರಣಕ್ಕೂ ಇದಕ್ಕೆ ಪ್ರತಿಕ್ರಿಯಿಸಬೇಡಿ ಅಂತಾ ಸರ್ಕಾರದ ಫ್ಯಾಕ್ಟ್ ಚೆಕರ್, ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ. ಎಸ್‌ಬಿಐ ಯಾವುದೇ ಗ್ರಾಹಕರ ವೈಯಕ್ತಿಕ ವಿವರಗಳನ್ನು ಕೇಳುವುದಿಲ್ಲ ಅಂತಾ ಸ್ಪಷ್ಟಪಡಿಸಿದೆ. ಯಾವುದೇ ಅನುಮಾನಗಳಿದ್ದಲ್ಲಿ ಪಿಐಬಿ ವೆಬ್‌ಸೈಟ್ ಮೂಲಕ ಸಂಪರ್ಕಿಸಬಹುದು, ಅಥವಾ 1930 ಸಹಾಯವಾಣಿಗೆ ಗ್ರಾಹಕರು ಕರೆ ಮಾಡಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
