ವಾಹನ ಸವಾರರಿಗೆ ಇದೀಗ ಒಂದು ಶುಭ ಸುದ್ದಿ. ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ಇಂದಿಗೂ ಸಹ ದಂಡ ಕಟ್ಟಿಲ್ವಾ? ಹಾಗಿದ್ದರೆ ಚಿಂತಿಸಬೇಡಿ ಇದೀಗ ನಿಮಗೆ ಒಂದು ಅವಕಾಶವಿದೆ. ನೀವು 50% ರಿಯಾಯಿತಿಯೊಂದಿಗೆ ಇದೀಗ ದಂಡವನ್ನು ಪಾವತಿಸಬಹುದು.
ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ಸರ್ಕಾರಕ್ಕೆ ದಂಡ ಕಡಿತಗೊಳಿಸುವ ಕುರಿತು ಮನವಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ, ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ನ್ಯಾ ಬಿ.ವೀರಪ್ಪರವರ ನೇತೃತ್ವದಲ್ಲಿ ಜ.27 ರಂದು ಸಭೆ ನಡೆಸಲಾಗಿತ್ತು. ಹೀಗಾಗಿ ಈ ಸಭೆಯಲ್ಲಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಇದ್ದರೆ 50 % ರಿಯಾಯಿತಿಯೊಂದಿಗೆ ದಂಡ ಕಟ್ಟಬಹುದು ಎಂದು ಆದೇಶ ಹೊರಡಿಸಿತು.
ಈ ಆಫರ್ ಬಹಳ ದಿನಗಳ ಕಾಲ ಇಲ್ಲ. ಫೆ.11ರ ಒಳಗೆ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿ ಆದೇಶ ಪ್ರಕಟಿಸಲಾಗಿದೆ. ಹೀಗಾಗಿ ಫೆಬ್ರವರಿ 11 ರ ವೊಳಗೆ ನೀವು ನಿಮ್ಮ ದಂಡವನ್ನು ಪಾವತಿಸಬೇಕು. ಇಲ್ಲವಾದರೆ ಮುಂದೆ ದುಪ್ಪಟ್ಟು ದಂಡ ಕಟ್ಟಬೇಕಾದ ಅನಿವಾರ್ಯ ಎದುರಾಗಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
