ಕೃಷ್ಣ ಎಂದರೆ ನೆನಪಾಗುವುದು ಬೆಣ್ಣೆ, ಕೊಳಲು, ನವಿಲುಗರಿ. ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಹಾಗಾದ್ರೆ ಯಾವ ಕಾರಣಕ್ಕೆ ಕೃಷ್ಣನಿಗೆ ಬೆಣ್ಣೆ ಎಂದರೆ ಇಷ್ಟ ಎಂಬುದು ಇಲ್ಲಿದೆ.
ಕೃಷ್ಣನು ಬೆಣ್ಣೆಯನ್ನು ಪ್ರೀತಿಸುತ್ತಿದ್ದನು. ಅವನು ‘ಗೋಪಿಗಳಿಂದ’ ಬೆಣ್ಣೆಯನ್ನು ಕದಿಯುತ್ತಿದ್ದುದರಿಂದ ಅವನಿಗೆ ‘ಮಖನ್ ಚೋರ್ ಅಥವ ಬೆಣ್ಣೆ ಕಳ್ಳ’ ಎಂಬ ಹೆಸರು ಬಂದಿತು. ಅವರು ಮಖನ್ ಮಿಶ್ರಿ(ಬೆಣ್ಣೆ ಮತ್ತು ಸಕ್ಕರೆ)ಯನ್ನೂ ಪ್ರೀತಿಸುತ್ತಿದ್ದರು. ಮೊಸರನ್ನು ಕಡೆದು ತೆಗೆದ ಬೆಣ್ಣೆಗೆ ಸಕ್ಕರೆ ಹಾಕಿದರೆ ತಿನ್ನಲು ಹೆಚ್ಚು ರುಚಿಯೂ ಎಷ್ಟು ಪರಿಮಳವೋ ನಮ್ಮ ಬದುಕು ಕೂಡ ಮಖನ್ ಮಿಶ್ರಿಯಂತೆ ಬೆರೆತು ಮಧುರತೆಯನ್ನು ಒದಗಿಸಬೇಕು.
ಕೃಷ್ಣ ಗೋಕುಲದಲ್ಲಿ ಬೆಳೆದಿದ್ದು, ಅಲ್ಲಿ ಹಾಲು, ಮೊಸರು, ಬೆಣ್ಣೆಗೆ ಯಾವುದೇ ರೀತಿ ಕಡಿಮೆ ಇಲ್ಲ. ಎಷ್ಟು ಬೇಕೋ ಅಷ್ಟು ಅಲ್ಲಿ ಲಭ್ಯವಿರುತ್ತಿತ್ತು. ಹಾಗಾಗಿ ಕೃಷ್ಣನಿಗೆ ಬೆಣ್ಣೆ ಎಂದರೆ ಬಹಳ ಇಷ್ಟ. ಅಲ್ಲದೇ, ಈ ಬೆಣ್ಣೆಗೆ ಆಧ್ಯಾತ್ಮಿಕ ಮಹತ್ವ ಸಹ ಇದೆ. ಬೆಣ್ಣೆಯು ಹಗುರವಾಗಿರುತ್ತದೆ, ಇದು ನಮ್ಮ ಮನದ ಭಾವನೆಯನ್ನು ಪ್ರತಿನಿಧಿಸುತ್ತದೆ. ನಮ್ಮಲ್ಲಿ ಒಳ್ಳೆಯ ಭಾವನೆ ಇದ್ದರೆ ಯಾವುದೇ ಹಮ್ಮು ಬಿಮ್ಮು ಇರುವುದಿಲ್ಲ. ಹಗುರವಾಗಿರುತ್ತೇವೆ ಎಂದರ್ಥ. ಮೊಸರನ್ನು ಕಡೆದು ಹೇಗೆ ಬೆಣ್ಣೆಯನ್ನು ನಾನು ಪಡೆಯುತ್ತೇವೆಯೋ ಹಾಗೆಯೇ ಕೆಟ್ಟ ಅಂಶಗಳನ್ನು ಕಡೆದು, ಒಳ್ಳೆಯ ಅಂಶಗಳನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ ಬೆಣ್ಣೆಯಂತೆಯೇ ನಮ್ಮ ಹೃದಯವೂ ಮೃದುವಾಗಿರಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
