ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್ ಕೂಡ ಒಬ್ಬರು. ಇದೀಗ ಬಿಲ್ ಗೇಟ್ಸ್ ಭಾರತದ ಪ್ರಸಿದ್ಧ ತಿಂಡಿಗಳಲ್ಲಿ ಒಂದಾದ ರೊಟ್ಟಿಯನ್ನು ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಬಿಲ್‌ಗೇಟ್ಸ್ ರೊಟ್ಟಿ ಮಾಡೋದನ್ನು ಪ್ರಸಿದ್ಧ ಬಾಣಸಿಗ ಈಟನ್ ಬರ್ನಾಥ್ ಹೇಳಿಕೊಟ್ಟಿದ್ದು, ಈ ವಿಡಿಯೋವನ್ನು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ಇತ್ತೀಚೆಗೆ ಭಾರತಕ್ಕೆ ಬಂದಿದ್ದೇನೆ ಮತ್ತು ರೊಟ್ಟಿಗಳನ್ನು ಹೇಗೆ ಮಾಡಬೇಕೆಂದು ಕಲಿತಿದ್ದೇನೆ ಎಂದು ಬರ್ನಾಥ್ ಗೇಟ್ಸ್‌ಗೆ ಹೇಳುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ.
.@BillGates and I had a blast making Indian Roti together. I just got back from Bihar, India where I met wheat farmers whose yields have been increased thanks to new early sowing technologies and women from "Didi Ki Rasoi" canteens who shared their expertise in making Roti. pic.twitter.com/CAb86CgjR3
— Eitan Bernath (@EitanBernath) February 2, 2023
“ನಾವಿಬ್ಬರೂ ಒಟ್ಟಿಗೆ ಭಾರತೀಯ ಜನಪ್ರಿಯ ತಿಂಡಿ ರೊಟ್ಟಿಯನ್ನು ತಯಾರಿಸಿದ್ದೇವೆ. ನಾನು ಇತ್ತೀಚೆಗೆ ಭಾರತದ ಬಿಹಾರಕ್ಕೆ ಹೋಗಿದ್ದೆ. ಅಲ್ಲಿ ಗೋಧಿ ಬೆಳೆಯುವ ರೈತರನ್ನು ಭೇಟಿ ಮಾಡಿದೆ. ಹಾಗೆ ಉತ್ತಮವಾಗಿ ರೊಟ್ಟಿ ಮಾಡುವ “Didi Ki Rasoi” ಕ್ಯಾಂಟೀನ್‌ಗೆ ಭೇಟಿ ನೀಡಿದ್ದೆ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ದಲ್ಲಿ ಬಿಲ್ ಗೇಟ್ಸ್ ಕೂಡ ರೊಟ್ಟಿ ಮಾಡಲು ಪ್ರಯತ್ನಿಸಿದ್ದು, ಅದು ವಿಚಿತ್ರ ಅಂದರೆ ಅಮೀಬಾ ಆಕಾರದಲ್ಲಿ ಬಂದಿರುವುದನ್ನು ನಾವು ಕಾಣಬಹುದು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಕೇವಲ ಒಂದೇ ಒಂದು ದಿನದಲ್ಲಿ 1.3 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
