ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವಾಗ ಅವರು ಉಟ್ಟ ಸೀರೆ ಎಲ್ಲರ ಗಮನ ಸೆಳೆದಿದೆ. ಅದಕ್ಕಿಂತಲೂ ಮುಖ್ಯವಾಗಿ ಆ ಸೀರೆ ತಯಾರಾಗಿದ್ದು ನಮ್ಮ ರಾಜ್ಯದಲ್ಲಿ.
ಧಾರವಾಡ ನಗರದ ನಾರಾಯಣಪುರದಲ್ಲಿರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ನ ಮಹಿಳಾಮಣಿಗಳು ಸೇರಿಕೊಂಡು ಸೀರೆಯನ್ನು ಕಸೂತಿ ಹಾಕಿ ವಿಶೇಷವಾಗಿ ತಯಾರು ಮಾಡಿದ್ದಾರೆ. ಆರತಿ ಸುಮಾರು 210 ಜನ ಮಹಿಳೆಯರ ತಂಡವನ್ನು ತಯಾರು ಮಾಡಿ, ಅವರಿಗೆಲ್ಲ ಅಗತ್ಯವಿರುವ ಕಸೂತಿ ತರಬೇತಿ ನೀಡಿ, ಸ್ವಯಂ ಉದ್ಯೋಗ ನೀಡುತ್ತಿದ್ದಾರೆ
ಕಳೆದ ಬಾರಿ ಮೋದಿಜೀ ಹುಬ್ಬಳ್ಳಿಗೆ ಬಂದಾಗ ಮುಖ್ಯಮಂತ್ರಿಗಳು ಅವರಿಗೆ ಹಾಕಿದ ವಿಶೇಷ ವಿನ್ಯಾಸ ಮಾಡಿದ್ದ ಶಾಲು ನಮ್ಮ ಆರತಿ ಕ್ರಾಫ್ಟ್ ನದ್ದಾಗಿದೆ. ಹೀಗೆ ನಾನಾ ರಾಜಕೀಯ ಧುರಿಣರು ಹಾಗೂ ಸಾಕಷ್ಟು ಸೆಲೆಬ್ರೆಟಿಗಳು ಕಸೂತಿ ವಿನ್ಯಾಸದ ಶಾಲು, ಡಿಸೈನರ್ ಸೀರೆ ಹಾಗೂ ಉಡುಪುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಆರತಿ ಹಿರೇಮಠ್ ಅವರು ಕಳೆದ 28+ ವರ್ಷಗಳಿಂದ ಕಸೂತಿಯ ಹಿರಿಮೆ ಹೆಚ್ಚಿಸಲು ಶ್ರಮಿಸಿದ್ದಾರೆ. ಅವರು ಪ್ರಾಚೀನ ಕಸೂತಿ ಕಲೆಯನ್ನು ಪ್ರಪಂಚದಾದ್ಯಂತ ಕಸೂತಿ-ಪ್ರೈಡ್ ಆಫ್ ಕರ್ನಾಟಕ ಮೂಲಕ, ಆರತಿ ಕ್ರಾಪ್ಟ್ ಮೂಲಕ ಪಸರಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
