ರಾಮಭಕ್ತರ ಕನಸು, ಹೋರಾಟದ ಧ್ಯೇಯ ಈಗ ಸಾಕಾರವಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ, ದಿವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ.
2022ರ ಜನವರಿ 14ರ ಮಕರ ಸಂಕಾಂತ್ರಿಯಂದೇ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದ ಮೊದಲ ಹಂತವಾದ ತಳಪಾಯ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ರಾಮಮಂದಿರ ನಿರ್ಮಾಣ ಮಾಡುತ್ತಿರುವ ಜಾಗದ ಮಣ್ಣು ಸಡಿಲವಾಗಿತ್ತು. ಈ ಕಾರಣದಿಂದ ಹೆಚ್ಚು ಆಳದವರೆಗೆ ಮಣ್ಣು ತೆಗೆದು ಭದ್ರವಾದ ತಳಪಾಯ ನಿರ್ಮಿಸಲಾಗುತ್ತಿದೆ. ತಳಪಾಯವು ಗಟ್ಟಿಮುಟ್ಟಾಗಿರುವಂತೆ ನಿರ್ಮಾಣ ಮಾಡಲಾಗುತ್ತಿದೆ.
ರಾಮಮಂದಿರದ ತಳಪಾಯವು ಸಮುದ್ರ ಮಟ್ಟಕ್ಕಿಂತ 107 ಮೀಟರ್ ಎತ್ತರದಲ್ಲಿದೆ. ಮಂದಿರ ತಳಪಾಯ ನಿರ್ಮಾಣದಲ್ಲಿ ಸಿಮೆಂಟ್ ಅನ್ನು ಹೆಚ್ಚಾಗಿ ಬಳಸುತ್ತಿಲ್ಲ. ಸಿಮೆಂಟ್ ಬಳಸಿದರೇ, ಆ ಜಾಗದಲ್ಲಿ ಹೀಟ್ ಜಾಸ್ತಿಯಾಗುತ್ತೆ. ಹೀಗಾಗಿ ಸಿಮೆಂಟ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಪ್ರಬಲ ಭೂಕಂಪವನ್ನು ತಡೆದುಕೊಳ್ಳುವ ಸಾಮರ್ಥ್ಯ ಇರುವಂತೆ ತಳಪಾಯ ನಿರ್ಮಿಸಿರುವುದು ವಿಶೇಷ. ತಳಪಾಯದಲ್ಲಿ ಮೊದಲು 44 ಪದರಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಆದರೆ ಅಂತಿಮವಾಗಿ 48 ಪದರಗಳನ್ನು ನಿರ್ಮಿಸಲಾಗಿದೆ.
ತಳಪಾಯದ ಬಳಿಕ ಬೇಸ್ ಪಿಲ್ಲತ್ ನಿರ್ಮಾಣ ಕಾರ್ಯ ನಡೆದಿದೆ. ಇದಕ್ಕೆ 3 ಲಕ್ಷ ಕ್ಯೂಬಿಕ್ ಅಡಿ ಕಲ್ಲು ಬೇಕು. 20 ಅಡಿ ಎತ್ತರದ ಬೇಸ್ ಪಿಲ್ಲತ್ ನಿರ್ಮಾಣ ಮಾಡಲಾಗುತ್ತೆ. 300 ಅಡಿ ಉದ್ದ ಹಾಗೂ 400 ಅಡಿ ಅಗಲದ ವಿಶಾಲ ಸ್ಥಳದಲ್ಲಿ ಬೇಸ್ ಪಿಲ್ಲತ್ ನಿರ್ಮಾಣ ಮಾಡಲಾಗಿದೆ.
ಮಂದಿರ ನಿರ್ಮಾಣಕ್ಕೆ 17 ಸಾವಿರ ಕಲ್ಲುಗಳು ಬೇಕು. ಈಗಾಗಲೇ ಒಂದು ಸಾವಿರ ಕಲ್ಲುಗಳು ಅಯೋಧ್ಯೆಗೆ ಬಂದಿವೆ. ಪಿಲ್ಲತ್ 21 ಅಡಿ ಎತ್ತರ ಇರಲಿದೆ. 21 ಅಡಿ ಎತ್ತರದ ಪಿಲ್ಲತ್ ಮೇಲೆ ಕಲ್ಲಿನ ಪಿಲ್ಲರ್ ಗಳನ್ನು ಬಳಸಿ ಮಂದಿರ ನಿರ್ಮಿಸಲಾಗುತ್ತೆ. ಮಂದಿರದ ಪ್ರತಿಯೊಂದು ಮಹಡಿಯೂ 20 ಅಡಿ ಎತ್ತರ ಇರಲಿದೆ.
ಬೇಕಾದ ಕಲ್ಲುಗಳನ್ನು ನಮ್ಮ ಕರ್ನಾಟಕದ ಬೆಂಗಳೂರು ಬಳಿಯ ಸಾದಹಳ್ಳಿ ಗೇಟ್ ಹಾಗೂ ಉತ್ತರ ಪ್ರದೇಶದ ಮಿರ್ಜಾಪುರದಿಂದ ತರಿಸಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
