ದೇಶ ಎಷ್ಟು ಅಭಿವೃದ್ಧಿಯಾಗುತ್ತಿದ್ರೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಈ ಪೈಕಿ ಮಕ್ಕಳ ಮೇಲೂ ಅನೇಕ ಲೈಂಗಿಕ ದೌರ್ಜನ್ಯ ಅಥವಾ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿರುತ್ತವೆ. ಹೀಗೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಾಗೂ ಇತರೇ ಪ್ರಕಾರದ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ 2012ರಲ್ಲಿ ಜಾರಿಗೆ ಬಂದಿದ್ದೇ ಪೋಕ್ಸೋ ಕಾಯ್ದೆ (POCSO Act) ಜಾರಿ ಮಾಡಲಾಯಿತು.
ಈ ಪೋಕ್ಸೋ ಕಾಯ್ದೆ ಎಂದರೇನು? ಇದರ ಅಡಿಯಲ್ಲಿ ಶಿಕ್ಷೆ ಹೇಗಿರುತ್ತದೆ? ಇದು ಮಕ್ಕಳಿಗೆ ಹೇಗೆ ರಕ್ಷಣೆ ನೀಡುತ್ತದೆ? ಈ ಬಗ್ಗೆ ಸರಳ ಮಾಹಿತಿ ಇಲ್ಲಿದೆ
ಲೈಂಗಿಕ ಹಾಗೂ ಎಲ್ಲಾ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ 2012ರಲ್ಲಿ ಜಾರಿಗೆ ಬಂದಿದ್ದೆ ಪೋಕ್ಸೋ ಕಾಯ್ದೆ. POCSO ಅಂದರೆ The Protection of Children from Sexual Offences ಅಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ.
ಪೋಕ್ಸೋ ಕಾಯ್ದೆ 2012ನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ‘ಮಗು’ ಎಂದು ವ್ಯಾಖ್ಯಾನಿಸುತ್ತದೆ. ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರತೀ ಹಂತದಲ್ಲಿಯೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ.
16 ರಿಂದ 18 ವರ್ಷ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಕನಿಷ್ಠ 10 ವರ್ಷಗಳ ಸೆರೆವಾಸವು ಜೀವಾವಧಿ ಶಿಕ್ಷೆ ಮತ್ತು ದಂಡಕ್ಕೆ ವಿಸ್ತರಿಸಬಹುದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಕನಿಷ್ಠ 20 ವರ್ಷಗಳ ಸೆರೆವಾಸ, ಜೀವನದ ಉಳಿದ ಅವಧಿಗೆ ಜೈಲು ಶಿಕ್ಷೆ ಮತ್ತು ದಂಡಕ್ಕೆ ವಿಸ್ತರಿಸಬಹುದು.
ಐಪಿಸಿಯ ಸೆಕ್ಷನ್ 354 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 8 ಹೊರತುಪಡಿಸಿ, ಉಳಿದೆಲ್ಲ ಸೆಕ್ಷನ್‌ಗಳು ಜಾಮೀನು ಪಡೆಯುತ್ತವೆ. ಅದರ ಹೊರತಾಗಿ ಪೋಕ್ಸೊ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಿಗೆ ದಾಖಲಿಸಲಾದ ಎಫ್‌ಐಆರ್ ಅನ್ನು ರಾಜಿ ಆಧಾರದ ಮೇಲೆ ರದ್ದುಗೊಳಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ ತಡವಾಗುವ ಮೊದಲು ಎಫ್ಐಆರ್ ರದ್ದುಗೊಳಿಸುವ ಅರ್ಜಿಯನ್ನು ಸಲ್ಲಿಸಬಹುದು. ಹೈಕೋರ್ಟ್‌ನ ರದ್ದುಗೊಳಿಸುವ ಅಧಿಕಾರವು ನ್ಯಾಯಾಲಯದ ವಿವೇಚನಾ ಅಧಿಕಾರವಾಗಿದೆ. ದಂಡ ವಿಧಿಸುವ ಮತ್ತು ಎಫ್‌ಐಆರ್ ರದ್ದುಗೊಳಿಸುವ ಅಧಿಕಾರ ಹೈಕೋರ್ಟ್‌ಗೆ ಇದೆ.
ಈ ಕಾಯ್ದೆಯಡಿ ಯಾವ ಅಪರಾಧ ಎಸಗಲಾಗಿದೆ ಅಥವಾ ಅಪರಾಧ ಎಸಗಲಿದ್ದಾರೆ ಎಂಬ ಆತಂಕದಲ್ಲಿರುವ ಯಾವುದೇ ವ್ಯಕ್ತಿ ತಕ್ಷಣದ ಮತ್ತು ಸೂಕ್ತ ಕ್ರಮಕ್ಕಾಗಿ ಈ ಮಾಹಿತಿಯನ್ನು ವಿಶೇಷ ಬಾಲಾಪರಾಧಿ ಪೊಲೀಸ್ ಘಟಕ ಅಥವಾ ಸ್ಥಳೀಯ ಪೊಲೀಸರಿಗೆ ಒದಗಿಸಬೇಕು. ಪೋಷಕರು, ವೈದ್ಯರು, ಶಾಲಾ ಸಿಬ್ಬಂದಿ ಮತ್ತು / ಅಥವಾ ಸ್ವತಃ ಮಗು / ಸ್ವತಃ ಯಾರಾದರೂ ಸೇರಿದಂತೆ ದೂರು ಸಲ್ಲಿಸಬಹುದು
POCSO ಕಾಯಿದೆಯ ಅಡಿಯಲ್ಲಿ ಯಾವುದೇ ಅಪರಾಧವನ್ನು ತನಿಖೆ ಮಾಡುವಾಗ ಮಗುವಿನ ಹೇಳಿಕೆಯನ್ನು ಅವನ/ಅವಳ ವಾಸಸ್ಥಳದಲ್ಲಿ ಮತ್ತು ಸಾಮಾನ್ಯವಾಗಿ ಮಹಿಳಾ ಪೊಲೀಸ್ ಅಧಿಕಾರಿಯಿಂದ ದಾಖಲಿಸಬೇಕು. ಮಗುವಿನ ಹೇಳಿಕೆ ದಾಖಲಿಸಬೇಕಾದ ಅಧಿಕಾರಿ ಸಮವಸ್ತ್ರ ಧರಿಸಬಾರದು. ಪರೀಕ್ಷೆಯ ಸಮಯದಲ್ಲಿ ಮಗು ಆರೋಪಿಗಳ ಸಂಪರ್ಕಕ್ಕೆ ಬರದಂತೆ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು.
ಮಗುವಿನ ಗುರುತು ಬಹಿರಂಗವಾಗದಂತೆ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು. ಮಗುವಿನ ಹೇಳಿಕೆಯನ್ನು ಮಗುವಿಗೆ ನಂಬಿಕೆ ಇರುವ ವ್ಯಕ್ತಿಯ ಉಪಸ್ಥಿತಿಯಲ್ಲಿ ದಾಖಲಿಸಬೇಕು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
