fbpx
ಸಮಾಚಾರ

ಫೆಬ್ರವರಿ 09: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಫಿಬ್ರವರಿ 9, 2023 ಗುರುವಾರ
ವರ್ಷ : 1944, ಶೋಭಾಕೃತ
ತಿಂಗಳು : ಮಾಘ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಚತುರ್ಥೀ : Feb 09 06:23 am – Feb 10 07:58 am
ನಕ್ಷತ್ರ : ಉತ್ತರ: Feb 08 08:14 pm – Feb 09 10:27 pm; ಹಸ್ತ: Feb 09 10:27 pm – Feb 11 12:18 am
ಯೋಗ : ಸುಕರ್ಮ: Feb 08 04:30 pm – Feb 09 04:45 pm; ಧೃತಿ: Feb 09 04:45 pm – Feb 10 04:44 pm
ಕರಣ : ಬಾವ: Feb 09 06:23 am – Feb 09 07:13 pm; ಬಾಲವ: Feb 09 07:14 pm – Feb 10 07:58 am

Time to be Avoided
ರಾಹುಕಾಲ : 2:00 PM to 3:26 PM
ಯಮಗಂಡ : 6:47 AM to 8:14 AM
ದುರ್ಮುಹುರ್ತ : 10:38 AM to 11:24 AM, 03:15 PM to 04:01 PM
ವಿಷ : 07:30 AM to 09:13 AM
ಗುಳಿಕ : 9:40 AM to 11:07 AM

Good Time to be Used
ಅಮೃತಕಾಲ : 02:35 PM to 04:20 PM
ಅಭಿಜಿತ್ : 12:10 PM to 12:56 PM

Other Data
ಸೂರ್ಯೋದಯ : 6:47 AM
ಸುರ್ಯಾಸ್ತಮಯ : 6:19 PM

 

 

 
 

ಮೇಷ (Mesha)

 

 

ಕೆಲಸದಲ್ಲಿ ನಿರಾಸಕ್ತಿ. ಮಕ್ಕಳೊಡನೆ ಸಮಯ ಕಳೆಯುವುದರಿಂದ ಚೈತನ್ಯಶಾಲಿಯಾಗುವಿರಿ. ಅನಗತ್ಯ ವಿಷಯಗಳ ಬಗ್ಗೆ ಚಿಂತೆಬೇಡ. ವಿದ್ಯೆಯಲ್ಲಿ ಆತಂಕ, ಆರ್ಥಿಕ ಪರಿಸ್ಥಿಯಲ್ಲಿ ಆಕಸ್ಮಿಕ ಏರಿಳಿತಗಳು ಕಂಡುಬರುವುದು. ಉದ್ಯೋಗದಲ್ಲಿ ಹಿನ್ನಡೆ.

 

ವೃಷಭ (Vrushabha)

ನಿಮ್ಮ ಮನಸ್ಸನ್ನು ಕೊರೆಯುತ್ತಿರುವ ವಿಷಯ ಬಗೆಹರಿಸಿಕೊಳ್ಳಲು ಇಂದು ಶುಭ ದಿನ. ಸಂಗಾತಿಯ ನೆರವು ಪಡೆಯಿರಿ. ಬೆಳ್ಳಗಿದ್ದುದ್ದೆಲ್ಲ ಹಾಲಲ್ಲ. ಹಾಗಾಗಿ ಇತರರ ಸಲಹೆ, ಸಹಕಾರಗಳನ್ನು ಎಚ್ಚರಿಕೆಯಿಂದ ಪಾಲಿಸಿರಿ. ಕೌಟುಂಬಿಕ ವಿಷಯದಲ್ಲಿ ಭಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಿರಿ.

 

ಮಿಥುನ (Mithuna)

ಉದ್ಯೋಗದಲ್ಲಿ ಪ್ರಗತಿ. ಹಮ್ಮಿಕೊಂಡ ಕಾರ್ಯದಲ್ಲಿ ಯಶಸ್ಸು. ಸಂತೋಷದಿಂದ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳುವಿರಿ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕೋರ್ಟು ಕಚೇರಿಯ ಕೆಲಸಗಳಲ್ಲಿ ಪ್ರಚಂಡ ಜಯ. ಸಮಾಜದಲ್ಲಿ ಮಾನ-ಸನ್ಮಾನಗಳು ನಡೆಯುವವು.

 

ಕರ್ಕ (Karka)

ಕೌಟುಂಬಿಕ ಜೀವನದಲ್ಲಿ ವಿರಸದ ಛಾಯೆ ಕಂಡುಬರುವುದು. ಹನುಮಾನ್ ಚಾಲೀಸ್ ಪಠಿಸುವುದು ಒಳ್ಳೆಯದು. ಕೆಲವೊಮ್ಮೆ ಸ್ವಾರ್ಥವೂ ಒಳಿತನ್ನು ತರುತ್ತದೆ. ಎಲ್ಲವನ್ನೂ ಇನ್ನೊಬ್ಬರಿಗೆ ಬಿಟ್ಟುಕೊಟ್ಟು ಕೊರಗುವುದನ್ನು ಬಿಡಿರಿ.

 

ಸಿಂಹ (Simha)

 

ಆತ್ಮವಿಶ್ವಾಸ ಹೆಚ್ಚಿರುವುದರಿಂದ ಇನ್ನೊಬ್ಬರ ಬಳಿ ಹೇಳಿ ಕೆಲಸ ಮಾಡಿಸುವಿರಿ. ಉತ್ತಮ ನಾಯಕನ ಗುಣ ತೋರುವುದರಿಂದ ಸಂತಸ. ಉದ್ಯೋಗ-ನೌಕರಿಯಲ್ಲಿ ಪ್ರಗತಿ. ವಾದ ಸ್ಪರ್ಧೆಯಲ್ಲಿ ಯಶಸ್ಸು. ದೂರದ ಪ್ರವಾಸಗಳನ್ನು ಹಮ್ಮಿಕೊಳ್ಳುವಿರಿ.

 

ಕನ್ಯಾರಾಶಿ (Kanya)

ನಿಮ್ಮ ಹೃದಯದ ಮಾತುಗಳನ್ನು ಹಿಡಿತದಲ್ಲಿಡಿ. ಈಗ ನೀವು ಜವಾಬ್ದಾರಿಯುತ ಸ್ಥಾನದಲ್ಲಿರುವಿರಿ. ನಿಮ್ಮ ನಡೆ-ನುಡಿಗಳನ್ನು ಇತರರರು ಗಂಭೀರವಾಗಿ ಪರಿಗಣಿಸುವರು. ಹಾಗಾಗಿ ಗಾಂಭೀರ್ಯದಿಂದ ವರ್ತಿಸಿರಿ. ನಿಮ್ಮ ಗೌರವ ಹೆಚ್ಚಾಗುವುದು.

 

ತುಲಾ (Tula)

 

ಉದ್ಯೋಗದಲ್ಲಿ ಬದಲಾವಣೆ. ಹಮ್ಮಿಕೊಂಡ ಕಾರ್ಯಗಳಲ್ಲಿ ಈ ದಿನ ವಿಘ್ನಗಳು ಬಹಳ. ಕೈಕೆಳಗಿನ ಕೆಲಸಗಾರರು ಮುಷ್ಕರ ಹೂಡುವ ಸಾಧ್ಯತೆ. ಕಾರ್ಮಿಕ ವರ್ಗದವರ ವಿಶ್ವಾಸ ಗಳಿಸಿಕೊಳ್ಳಿರಿ. ಮುಂದಿನ ದಿನಗಳು ಉತ್ತಮವಾಗಿರುವುದು.

 

ವೃಶ್ಚಿಕ (Vrushchika)

 

ಶನಿ ಮಹಾರಾಜರು ಹೇಗಲೇರಿ ಕುಳಿತಿರಲು ಆತ್ಮಸ್ಥೈರ್ಯವೇ ಉಡುಗಿ ಹೋದಂತೆ ಆಗಿದೆ. ಅದಕ್ಕೆ ಚಿಂತಿಸುವ ಪ್ರಮೇಯವಿಲ್ಲ. ತನ್ನನ್ನು ಆರಾಧಿಸುವವರಿಗೆ ಶನಿಮಹಾರಾಜರು ಒಳಿತನ್ನೇ ಮಾಡುವರು. ವಿಶ್ವಾಸವಿಡಿ ಒಳಿತಾಗುವುದು.

 

ಧನು ರಾಶಿ (Dhanu)

 

ಗುರು ಮತ್ತು ಶನಿಗ್ರಹದ ಬಲವಿಲ್ಲದ ಕಾರಣ ಸಮಾಜದಲ್ಲಿ ಯಾರೂ ನಿಮ್ಮನ್ನು ಗೌರವಿಸುತ್ತಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆ. ಆದರೆ ಇದು ತಾತ್ಕಾಲಿಕ. ಪುನಃ ಫಿನೀಕ್ಸ್ ಪಕ್ಷಿಯಂತೆ ಮರು ಹುಟ್ಟುಪಡೆದು ನಿಮ್ಮ ಕಾರ್ಯಗಳನ್ನು ಪೂರೈಸಿಕೊಳ್ಳುವಿರಿ.

ಮಕರ (Makara)

 

ಉದ್ಯೋಗಕ್ಕಿಂತಲೂ ಆರ್ಥಿಕ ದೃಷ್ಟಿಯಿಂದ ಶನಿ ಮಹಾರಾಜರೂ ಅನುಕೂಲತೆಯನ್ನು ಮಾಡಿಕೊಡುವರು. ಬಹುಮುಖಗಳಿಂದ ಧನಾರ್ಜನೆ ಉಂಟಾಗುವುದು. ಆಕಸ್ಮಿಕ ಧನಯೋಗ. ಬೆಲೆಯುಳ್ಳ ವಸ್ತುಗಳ ಖರೀದಿ.

 

ಕುಂಭರಾಶಿ (Kumbha)

ಉದ್ಯೋಗದಲ್ಲಿ ಯಶಸ್ಸು. ಜೀವನದ ಎಲ್ಲ ರಂಗದಲ್ಲಿಯೂ ಯಶಸ್ಸನ್ನು ಕಾಣುವಿರಿ. ಕುಹಕದ ಮಾತುಗಳಿಗೆ ಬೆಲೆ ನೀಡದಿರಿ. ಕೋಪವನ್ನು ನಿಯಂತ್ರಿಸಿಕೊಳ್ಳಿರಿ. ನೂತನ ವಸ್ತ್ರವನ್ನು ಖರೀದಿಸುವಿರಿ.

 

ಮೀನರಾಶಿ (Meena)

ನಿಮಗಾಗಿ ಸಮಯವನ್ನು ಮೀಸಲಿಡದೆ ಎಷ್ಟೋ ದಿನಗಳಾದವು. ಈ ದಿನ ನಿಮಗೆ ವಿಶ್ರಾಂತಿಯ ಅಗತ್ಯವಿದೆ. ಕೆಲಸಕ್ಕೆ ರಜೆ ಹಾಕಿ ಮಕ್ಕಳೊಂದಿಗೆ ಬೆರೆಯಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top