ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡುತ್ತಿದ್ದು, ಇದೀಗ ಬಾಕ್ಸ್ ಆಫೀಸ್ ಅನ್ನು ಸಹ ಕೊಳ್ಳೆ ಹೊಡೆದಿದೆ. ಪಠಾಣ್ ಸಿನಿಮಾದ ಯಶಸ್ಸು ಎಷ್ಟರಮಟ್ಟಿಗೆ ಇದೆ ಎಂದರೆ ಇತ್ತೀಚಿಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಠಾಣ್ ಸಿನಿಮಾದ ಯಶಸ್ಸನ್ನು ಪ್ರಶಂಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಚರ್ಚೆವೇಳೆ ನೆನ್ನೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ, ಜಮ್ಮು ಕಾಶ್ಮೀರದಲ್ಲಿ ಬದಲಾಗುತ್ತಿರುವ ಸನ್ನಿವೇಶಗಳ ಕುರಿತು ಮಾತನಾಡುತ್ತಿದ್ದರು. ಅದರಲ್ಲಿ ದಶಕಗಳ ಬಳಿಕ ಶ್ರೀನಗರದ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ತೋರಿಸುತ್ತಿದೆ ಎಂದು ಹೇಳಿದರು. ಆದರೆ ಇದರಲ್ಲಿ ಅವರು ಯಾವ ಸಿನಿಮಾ ಎಂದು ಮಾತ್ರ ತಿಳಿಸಲಿಲ್ಲ.
ಇದೀಗ ಶಾರುಖ್ ಖಾನ್ ಅಭಿಮಾನಿಗಳು ಮಾತ್ರ ಪ್ರಧಾನಿ ಲೋಕಸಭೆಯಲ್ಲಿ ಮಾತನಾಡಿದ್ದು ಪಠಾಣ್ ಸಿನಿಮಾದ ಯಶಸ್ಸನ್ನು ಕುರಿತು ಎಂದು ಮೋದಿ ಭಾಷಣದಾದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಏಕೆಂದರೆ ಇತ್ತೀಚಿಗೆ ಬಾಲಿವುಡ್ ಚಿತ್ರರಂಗದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಸಿನಿಮಾ ಎಂದರೆ ಅದು ಪಠಾಣ್ ಮಾತ್ರ. ಹೀಗಾಗಿ ಮೋದಿ ಪಠಾಣ್ ಸಿನಿಮಾದ ಸಕ್ಸಸ್ ಕುರಿತು ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಲೇ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದ್ದು 800 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
