18 ಮಹಾಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ, ಗರ್ಭಧಾರಣೆಯ ಸಮಯ ಮತ್ತು ನಿಯಮವನ್ನು ವಿವರಿಸಲಾಗಿದ್ದು, ಅವುಗಳನ್ನು ಅನುಸರಿಸಿ ದಂಪತಿಗಳು ಶ್ರೇಷ್ಠ ಮಗುವನ್ನು ಪಡೆಯಬಹುದು ಎಂದು ಹೇಳಲಾಗಿದೆ.
ಮುಟ್ಟಿನ ಶುದ್ಧೀಕರಣದ ಬಳಿಕ ಎಂಟನೇ ಮತ್ತು ಹದಿನಾಲ್ಕನೇ ದಿನವನ್ನು ಗರ್ಭಧಾರಣೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಂತಹ ಮಕ್ಕಳು ಕೇವಲ ಸಮರ್ಥರಾಗಿರದೆ ಸದ್ಗುಣಶೀಲರು, ಅದೃಷ್ಟವಂತರು ಮತ್ತು ಉತ್ತಮ ನಡವಳಿಕೆಯನ್ನು ಹೊಂದಿರುತ್ತಾರೆ.
ಮುಟ್ಟಿನ ಶುದ್ಧೀಕರಣದ ಬಳಿಕ ಮಹಿಳೆ ಏಳು ದಿನಗಳವರೆಗೆ ಗರ್ಭಿಣಿಯಾಗಬಾರದು. ಈ ದಿನಗಳಲ್ಲಿ ಗರ್ಭಿಣಿಯಾಗಿರುವುದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎನ್ನಲಾಗಿದೆ.
ಗರುಡ ಪುರಾಣದ ಪ್ರಕಾರ, ಮಹಿಳೆ ಋತುಮತಿಯಾದಾಗ, ಅವಳನ್ನು ಗೌರವದಿಂದ ನೋಡಿಕೊಳ್ಳಿ ಮತ್ತು ದಂಪತಿಗಳು ಈ ಅವಧಿಯಲ್ಲಿ ಬ್ರಹ್ಮಚರ್ಯವನ್ನು ಆಚರಿಸಬೇಕು. ಇದು ಅತ್ಯುತ್ತಮ ಮಗುವಿಗೆ ಜನ್ಮ ನೀಡಲು ಸಹಕರಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
