fbpx
ಸಮಾಚಾರ

ಪಿಕೆ ರೋಸಿಗೆ ಗೂಗಲ್​ ಡೂಡಲ್ ಗೌರವ; ಯಾರೀ ರೋಸಿ?? ಇವರು ಮಾಡಿದ ಸಾಧನೆಗಳೇನು?

ಮಲಯಾಳಂ ಚಿತ್ರರಂಗದ ಮೊದಲ ನಾಯಕಿ ಪಿಕೆ ರೋಸಿ ಅವರ 120ನೇ ಜನ್ಮದಿನದಂದು ಗೂಗಲ್ ವಿಶೇಷ ಡೂಡಲ್ ಅನ್ನು ಬಿಡುಗಡೆ ಮಾಡಿದೆ. 1903 ರಲ್ಲಿ ಈ ದಿನ, ರಾಜಮ್ಮ ಅಲಿಯಾಸ್ ಪಿಕೆ ರೋಸಿ ತಿರುವನಂತಪುರದಲ್ಲಿ ಜನಿಸಿದರು. ರೋಸಿ ಅವರ ಜೀವನಗಾಥೆ ಜಾತೀಯತೆ ಮತ್ತು ಸಾಮಾಜಿಕ ಅನ್ಯಾಯಗಳಿಂದ ಹೋರಾಡಲ್ಪಟ್ಟ ಮಲಯಾಳಂನ ಮೊದಲ ನಾಯಕಿಯ ಪರಿಸ್ಥಿತಿಯನ್ನು ನೆನಪಿಸುತ್ತದೆ.

‘ಸಮಾಜದ ಅನೇಕ ವಿಭಾಗಗಳಲ್ಲಿ, ವಿಶೇಷವಾಗಿ ಮಹಿಳೆಯರಿಗೆ ಕಲೆಯಲ್ಲಿ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ, ರೋಸಿ ಅವರು ತಮ್ಮ ಪಾತ್ರದ ಮೂಲಕ ಅಡೆತಡೆಗಳನ್ನು ಮುರಿದರು. ಅವರ ಕೆಲಸಕ್ಕೆ ಮನ್ನಣೆ ಸಿಗಲೇ ಇಲ್ಲ. ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿ’ ಎಂದು ಗೂಗಲ್ ಹೇಳಿದೆ.

ಪಿಕೆ ರೋಸಿ 1903 ರಲ್ಲಿ ತಿರುವನಂತಪುರದಲ್ಲಿ ಜನಿಸಿದರು. ಅವರ ನಿಜವಾದ ಹೆಸರು ರಾಜಮ್ಮ. ಮೂಲತಃ ದಲಿತ ಸಮುದಾಯಕ್ಕೆ ಸೇರಿದ್ದ ರೋಸಿ ಅವರು ವೃತ್ತಿ ಬದುಕಿನಲ್ಲಿ ಭಾರಿ ವಿರೋಧವನ್ನ ಅನುಭವಿಸಬೇಕಾಗಿತ್ತು. ಅವರು ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದನ್ನು ಗಮನಿಸಿದ ರೋಸಿಯ ಚಿಕ್ಕಪ್ಪ ಆಕೆಯನ್ನು ಪ್ರೋತ್ಸಾಹಿಸಿ ನಟನೆ ಮತ್ತು ಸಂಗೀತ ತರಬೇತಿ ನೀಡಿದರು.. ಮಹಿಳೆಯರು ಸಾರ್ವಜನಿಕ ರಂಗಕ್ಕೆ ಬರದ ಕಾಲದಲ್ಲಿ ಮಲಯಾಳಂ ಸಿನಿಮಾ ಜಗತ್ತಿಗೆ ದಿಟ್ಟತನದಿಂದ ಕಾಲಿಟ್ಟ ಮಹಿಳೆ ಪಿ. ಕೆ. ರೋಸಿ. ಜೆ.ಸಿ. ಡೇನಿಯಲ್ ನಿರ್ದೇಶನದ ಮಲಯಾಳಂ ಚಿತ್ರ ವಿಗತಕುಮಾರನ್ ನಲ್ಲಿ ಪಿಕೆ ಪಾದಾರ್ಪಣೆ ಮಾಡಿದರು. ರೋಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪಿಕೆ ರೋಸಿ ಮಲಯಾಳಂ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಲಿತ ಕ್ರಿಶ್ಚಿಯನ್ ಮಹಿಳಾ ನಾಯಕಿ ಕೂಡ.

ವಿಗತಕುಮಾರನ್ ಅವರ ಮೊದಲ ಪ್ರದರ್ಶನವು ನವೆಂಬರ್ 7, 1928 ರಂದು ತಿರುವನಂತಪುರಂನ ಕ್ಯಾಪಿಟಲ್ ಥಿಯೇಟರ್‌ನಲ್ಲಿತ್ತು. ನಾಯಕಿ ಸರೋಜಮ್ಮನಾಗಿ ಪಿ.ಕೆ.ರೋಸಿ ನಟಿಸಿದ್ದಾರೆ.ಚಿತ್ರದಲ್ಲಿ ನಾಯಕಿ ಮೇಲ್ಜಾತಿಯ ಪಾತ್ರ ನಿರ್ವಹಿಸಿದ ಕಾರಣಕ್ಕೆ ನಾಯಕಿ ತೆರೆಯ ಮೇಲೆ ಕಾಣಿಸಿಕೊಂಡಾಗಲೆಲ್ಲ ಮೇಲ್ಜಾತಿಯವರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಚಿತ್ರಮಂದಿರಕ್ಕೆ ಕಲ್ಲು ತೂರಿದ್ದರು, ತೆರೆ ಮೇಲೆ ರೋಸಿ ಕಂಡಾಗ ಷೂ! ಎಸೆದು ವಿರೋಷಿಸುತ್ತಿದ್ದರು. ಈ ಸಂಬಂಧ ಪ್ರತಿಭಟನೆಗಳು ನಡೆದವು. ರೋಸಿ ಮನೆಯನ್ನು ಸುಡಲಾಯಿತು. ಈ ಕಾರಣದಿಂದ ರೋಸಿ ಅವರು ಕೇರಳ ಬಿಟ್ಟು ಓಡಿ ಹೋಗಬೇಕಾಯಿತು. ರಸ್ತೆಯಲ್ಲಿ ಸಿಕ್ಕ ಟ್ರಕ್ ಏರಿ ಅವರು ತಮಿಳುನಾಡಿಗೆ ಹೊರಟರು. ಇಂಥವರನ್ನೆಲ್ಲಾ ಮೆಟ್ಟು ನಿಂತು ರೋಸಿ ದೊಡ್ಡ ನಟಿಯಾಗಿ ಬೆಳೆದು ನಿಂತಿದ್ದು ಪ್ರತಿ ಹೆಣ್ಣಿಗೂ ಸ್ಪೂರ್ತಿ ನೀಡಿವಂತದ್ದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top