ಭಾರತೀಯ ಸಿನಿಮಾರಂಗದಲ್ಲಿ ಸದ್ಯ ಎಲ್ಲರು ಎದುರು ನೋಡುತ್ತಿರುವ ಸಿನಿಮಾ ಕಬ್ಜ. ಕಬ್ಜ ಮಾರ್ಚ್ 17ಕ್ಕೆ ತೆರೆಮೇಲೆ ಬರ್ತಿದೆ. ಕಬ್ಜ ಚಿತ್ರದಲ್ಲಿ ಇದುವರೆಗೂ ರಿವೀಲ್ ಆಗದ ಕೆಲವು ಸರ್ಪ್ರೈಸ್ ಸ್ಟಾರ್ಗಳಿದ್ದಾರಂತೆ. ಹಾಗಾದ್ರೆ ಯಾರು?
ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿದ್ದು, ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರಣ್ ಕಬ್ಜಗೆ ಹೀರೋಯಿನ್ ಆಗಿದ್ದು, ಬಹಳಷ್ಟು ಜನ ಕಲಾವಿದರು ಚಿತ್ರದಲ್ಲಿದ್ದಾರೆ.
ಈ ಹಿಂದಿನ ಸುದ್ದಿಯಂತೆ ಬಾಲಿವುಡ್ ನಟ ಮನೋಜ್ ಬಾಜಪೇಯಿ, ತಮಿಳು ನಟ ಸಮುದ್ರಕಣಿ ಹೆಸರುಗಳು ವರದಿಯಾಗಿದ್ವು. ಈಗಲೂ ಕಬ್ಜ ವಿಕಿಪೀಡಿಯ, ಐಎಂಡಿಬಿಯಲ್ಲಿ ಚೆಕ್ ಮಾಡಿದ್ರು ಕಬ್ಜ ಸ್ಟಾರ್ ಕಾಸ್ಟ್ ಪಟ್ಟಿಯಲ್ಲಿ ಇವ್ರ ಹೆಸರಿದೆ.
ಉಪೇಂದ್ರ ಹಾಗೂ ಸುದೀಪ್ ಜೊತೆ ಸ್ಯಾಂಡಲ್ವುಡ್ ಚಕ್ರವರ್ತಿ ಶಿವಣ್ಣ ಕೂಡ ಪ್ರಮುಖ ಪಾತ್ರವೊಂದಲ್ಲಿ ನಟಿಸಿದ್ದಾರಂತೆ. ಆದರೆ, ಈವರೆಗೂ ಶಿವಣ್ಣ ಪಾತ್ರದ ಬಗ್ಗೆ ಉಪ್ಪಿ ಆಗ್ಲಿ, ಚಂದ್ರು ಆಗ್ಲಿ ಸ್ಪಷ್ಟಪಡಿಸಿಲ್ಲ.
ಡೈರೆಕ್ಟರ್ ಚಂದ್ರು ಅವರು ಎಲ್ಲಾ ಇಂಡಸ್ಟ್ರಿಗೂ ಪರಿಚಯ ಇರುವಂತ ಕಲಾವಿದರು ಇದ್ದಾರೆ, ಅವರು ಯಾರು ಅಂತ ಸಿನಿಮಾದಲ್ಲೇ ನೋಡಿ ಅಂತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
