fbpx
ಸಮಾಚಾರ

ಫೆಬ್ರವರಿ 12: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಫಿಬ್ರವರಿ 12, 2023 ಭಾನುವಾರ
ವರ್ಷ : 1944, ಶೋಭಾಕೃತ
ತಿಂಗಳು : ಮಾಘ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಷಷ್ಠೀ : Feb 11 09:08 am – Feb 12 09:46 am; ಸಪ್ತಮೀ : Feb 12 09:46 am – Feb 13 09:46 am
ನಕ್ಷತ್ರ : ಸ್ವಾತಿ: Feb 12 01:40 am – Feb 13 02:27 am; ವಿಶಾಖೆ: Feb 13 02:27 am – Feb 14 02:35 am
ಯೋಗ : ಗಂಡ: Feb 11 04:22 pm – Feb 12 03:34 pm; ವೃದ್ಹಿ: Feb 12 03:34 pm – Feb 13 02:16 pm
ಕರಣ : ವಾಣಿಜ: Feb 11 09:31 pm – Feb 12 09:46 am; ವಿಷ್ಟಿ: Feb 12 09:46 am – Feb 12 09:51 pm; ಬಾವ: Feb 12 09:51 pm – Feb 13 09:46 am

Time to be Avoided
ರಾಹುಕಾಲ : 4:54 PM to 6:20 PM
ಯಮಗಂಡ : 12:33 PM to 2:00 PM
ದುರ್ಮುಹುರ್ತ : 04:48 PM to 05:34 PM
ವಿಷ : 08:05 AM to 09:42 AM
ಗುಳಿಕ : 3:27 PM to 4:54 PM

Good Time to be Used
ಅಮೃತಕಾಲ : 05:22 PM to 07:01 PM
ಅಭಿಜಿತ್ : 12:10 PM to 12:56 PM

Other Data
ಸೂರ್ಯೋದಯ : 6:46 AM
ಸುರ್ಯಾಸ್ತಮಯ : 6:20 PM

 

 

 
 

ಮೇಷ (Mesha)

ಮಕ್ಕಳ ಚಟುವಟಿಕೆ ಸಂತಸದಾಯಕ. ಆಗಾಗ ಧನಾಗಮನ ಸಮಾಧಾನ ತರಲಿದೆ. ದೇವತಾಕಾರ್ಯಗಳಿಗಾಗಿ ಖರ್ಚು ಬಂದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದ ಅವಕಾಶ ದೊರೆಯಬಹುದು.

ವೃಷಭ (Vrushabh)


ದೇವತಾನುಗ್ರಹ ನಾನಾ ರೂಪದಲ್ಲಿ ಗೋಚರಕ್ಕೆ ಬರುತ್ತದೆ. ವಿದ್ಯಾರ್ಥಿಗಳು ವಿದ್ಯಾ ಸಂಪನ್ನರಾಗುವ ಸಮಯ. ನೂತನ ವ್ಯವಹಾರಗಳಿಗೆ ಅಭಿವೃದ್ಧಿ ಕಂಡು ಬಂದರೂ ಆರ್ಥಿಕವಾಗಿ ಜಾಗ್ರತೆ ವಹಿಸಿರಿ.

ಮಿಥುನ (Mithuna)


ನೂತನ ವ್ಯಾಪಾರ, ವ್ಯವಹಾರಗಳು ಲಾಭದಾಯಕಧಿವಾಗಿರುತ್ತವೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳಿಗೆ ಪ್ರಯತ್ನಿಸಬಹುದು. ಲಾಭ ಸ್ಥಾನದ ರಾಹು ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಗೆ ಸಾಧಕನಾದಾನು.

ಕರ್ಕ (Karka)


ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿ ವರ್ಗದವರೊಡನೆ ವಾದ, ವಿವಾದ ಮಾಡದಿರಿ. ನವದಂಪತಿಗಳಿಗೆ ಸಂತಾನ ಭಾಗ್ಯದ ಸೂಚನೆ ಕಂಡು ಬರುವುದು. ದಿನಾಂತ್ಯ ಶುಭವಾರ್ತೆ ಹರುಷ ತರುವುದು.

ಸಿಂಹ (Simha)


ಹಂತ ಹಂತವಾಗಿ ನೆಮ್ಮದಿ ಸಮಾಧಾನದ ವಾತಾವರಣ ತೋರಿ ಬರಲಿದೆ. ಉದ್ಯೋಗಿಗಳಿಗೆ ಬಡ್ತಿ ಯೋಗವಿದೆ. ಹಿರಿಯರಿಗೆ ಶುಭಮಂಗಲ ಕಾರ್ಯಗಳ ಸಂಭ್ರಮ ತಂದೀತು. ಆರೋಗ್ಯದಲ್ಲಿ ಜಾಗ್ರತೆ.

ಕನ್ಯಾರಾಶಿ (Kanya)


ಆಗಾಗ, ಉದ್ಯೋಗಿಗಳ ವರ್ಗದವರಿಗೆ ಹಿರಿಯ ಅಧಿಕಾರಿ ವರ್ಗದವರಿಂದ ಅಸಮಾಧಾನದ ವಾತಾವರಣ ತೋರಿ ಬಂದರೂ ತಾಳ್ಮೆ ಸಮಾಧಾನದಿಂದ ಮುಂದುವರಿಯಬೇಕು. ದಿನಾಂತ್ಯ ಶುಭವಾರ್ತೆ.

ತುಲಾ (Tula)


ವೃತ್ತಿರಂಗದಲ್ಲಿ ಮುನ್ನಡೆ ಇರುವುದು. ನಿಮ್ಮ ಕ್ರಿಯಾಶೀಲತೆ, ದೃಢ ನಿರ್ಧಾರದಿಂದ ಪ್ರಯತ್ನಬಲದಿಂದ ಮುಂದುವರಿಯಿರಿ. ಆರ್ಥಿಕವಾಗಿ ಹೂಡಿಕೆ ಲಾಭಕರ. ಬರಬೇಕಾದ ಹಣ ಮರಳಿ ಬರುವುದು.

ವೃಶ್ಚಿಕ (Vrushchika)


ಮಕ್ಕಳಿಗೆ ಉತ್ತಮ ಫ‌ಲಿತಾಂಶ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ಅವಿವಾಹಿತರಿಗೆ ಉತ್ತಮ ಕಂಕಣಬಲವು ಗೋಚರಕ್ಕೆ ಆಗಾಗ ಬರಲಿದೆ. ಸದುಪಯೋಗಿಸಿಕೊಳ್ಳಿರಿ. ಆತಿಥಿಗಳ ಆಗಮನದಿಂದ ಸಂತಸ.

ಧನು ರಾಶಿ (Dhanu)


ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಯಿಂದ ಮುಂದುವರಿಯಿರಿ. ದೇವತಾ ಕಾರ್ಯಗಳಿಗಾಗಿ ಧನವ್ಯಯವಾದೀತು. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಪರದೇಶದ ಅವಕಾಶ ಬಂದೀತು.

ಮಕರ (Makara)


ದೇವತಾ ಕಾರ್ಯಗಳಿಗಾಗಿ ನಾನಾ ರೀತಿಯಲ್ಲಿ ದೇವತಾ ದರ್ಶನ ಭಾಗ್ಯವಿದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ನಡೆಯಬಹುದು. ನ್ಯಾಯಾಲಯದ ಕೆಲಸಕಾರ್ಯಗಳು ನಿಮ್ಮ ಪರವಾಗಿ ಇರುವುದು.

ಕುಂಭರಾಶಿ (Kumbha)


ವೃತ್ತಿಕ್ಷೇತ್ರದಲ್ಲಿ ವಾದ, ವಿವಾದಗಳಿಗೆ ಕಾರಣರಾಗದೆ ಹೊಂದಾಣಿಕೆಯಿಂದ ಮುಂದುವರಿಯಿರಿ. ಅನಿರೀಕ್ಷಿತ ರೀತಿಯಲ್ಲಿ ಬೆನ್ನು ನೋವು, ಹೊಟ್ಟೆ ಸಂಬಂಧ ದೋಷಗಳು ಕಂಡು ಬಂದಾವು.

ಮೀನರಾಶಿ (Meena)


ಸಾಂಸಾರಿಕವಾಗಿ ಸಂತಸದ ವಾತಾವರಣ. ನೂತನ ವ್ಯಾಪಾರ, ವ್ಯವಹಾರಗಳು ಲಾಭಕರವಾಗಲಿವೆ. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಶುಭವಿದೆ. ಹಿರಿಯರ ಆರೋಗ್ಯದ ಬಗ್ಗೆ ತುಂಬಾ ಜಾಗ್ರತೆ ವಹಿಸಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top