fbpx
ಸಮಾಚಾರ

MES ಪುಂಡರಿಗೆ ಮಸಿ ಬಳಿದಿದ್ದ ಯುವ ಕನ್ನಡಪರ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಹಾಕಿದ ಬಿಜೆಪಿ ಸರ್ಕಾರ: ಸಂಸದ ಜಿಸಿ ಚಂದ್ರಶೇಖರ್ ಅಸಮಾಧಾನ

ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಕನ್ನಡ ಪರ ಕಾರ್ಯಕರ್ತರ ಮೇಲೆ ಬೊಮ್ಮಾಯಿ ನೇತೃತ್ವದ ನಂಜಪ್ ಸರ್ಕಾರ ರೌಡಿ ಶೀಟರ್ ಬುಕ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ನವ ನಿರ್ಮಾಣ‌ ಸೇನೆಯ ಸಂಪತ್ ಕುಮಾರ್ ಸೇರಿದಂತೆ ಇಬ್ಬರು ಕನ್ನಡ ಸೇನಾನಿಗಳ ಮೇಲೆ ರೌಡಿ ಶೀಟರ್ ಬುಕ್ ಮಾಡಲಾಗಿದೆ ಎಂದು ವರದಾಯಿಯಾಗಿದೆ.

 

 

ಕಳೆದ ಡಿಸೆಂಬರ್ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಸುವುದನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌)ಯ ಉಂಡರು ಪ್ರತಿಭಟನಾ ರ್‍ಯಾಲಿಯನ್ನು ನಡೆಸಲು ಮುಂದಾಗಿದ್ದರು. ಆದರೆ ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಎಂಇಎಸ್‌ ಮುಖಂಡರ ಪ್ರತಿಭಟನೆಯನ್ನು ಹಿಮ್ಮೆಟ್ಟಿಸಿದ್ದರು. ಈ ವೇಳೆ ಎಂಇಎಸ್ ಮುಖಂಡ ದೀಪಕ್ ದಳವಿಗೆ ಕರ್ನಾಟಕ ನವನಿರ್ಮಾಣ ಸೇನೆಯ ಬೆಳಗಾವಿ ಯುವ ಘಟಕದ ಅಧ್ಯಕ್ಷ ಕಾರ್ಯಕರ್ತ ಸಂಪತ್ ಕುಮಾರ್‌ ಮಸಿ ಎರಚಿದ್ದರು.ಈ ವೇಳೆ ನಗರ ಪೊಲೀಸರು ಕರವೇ ಕಾರ್ಯಕರ್ತರ ಸಂಪತ್ ಕುಮಾರ್ ಅವರ ಮೇಲೆ ಕೇಸ್ ದಾಖಲಿಸಿ ಹಿಂಡಲಗಾ ಜೈಲಿನಲಿಟ್ಟಿದ್ದರು. ನಂತರ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕ ಬಳಿಕ ಬಿಡುಗಡೆ ಮಾಡಲಾಗಿತ್ತು.

 

 

ಕನ್ನಡನಾಡ ನಾಡು ನುಡಿಯ ಬಗ್ಗೆ ಹೋರಾಡಿದ ಹೆಮ್ಮೆಯ ಕನ್ನಡ ಮಕ್ಕಳ ಮೇಲೆ ರೌಡಿ ಶೀಟರ್ ದಾಖಲಿಸಿರುವ ಸರ್ಕಾರದ ನಡೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಉಗ್ರವಾಗಿ ಟೀಕಿಸುತ್ತಿದ್ದಾರೆ. ಇದೀಗ ಕನ್ನಡ ಪರ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಬುಕ್ ಮಾಡಿರುವ ಸರ್ಕಾರವನ್ನು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಖಂಡಿಸಿದ್ದಾರೆ.

 

 

ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಸಂಸದ ಜಿಸಿ ಚಂದ್ರಶೇಖರ್, “ಕುವೆಂಪು ಅವರು ಕನ್ನಡಕ್ಕಾಗಿ ಕೈ ಎತ್ತಿದರೆ ಕೈ ಕಲ್ಪವೃಕ್ಷ ಆಗುತ್ತದೆ ಅಂತ ಹೇಳಿದ್ದರು ಆದರೆ ಈಗ ಕಲ್ಪವೃಕ್ಷ ಎಂದರೆ ರೌಡಿ ಸಿಟರ್ ಕೇಸ್, ೨೦-೨೧ ವರ್ಷದ ಸಣ್ಣ ಮಕ್ಕಳು ಜೀವನ ಕಟ್ಟಿಕೊಳ್ಳೋ ವಯಸ್ಸಲ್ಲಿ ಕನ್ನಡ ಕಟ್ಟೋ ಕೆಲಸ ಮಾಡಿದ್ದಕ್ಕಾಗಿ ಇವರ ಮೇಲೆ ರೌಡಿ ಶಿಟರ್ ಹಾಕಿದ ಕರ್ನಾಟಕ ಸರ್ಕಾರ! ಇವರು ಯಾರನ್ನು ದರೋಡೆ ಮಾಡಲಿಲ್ಲ, ಬೆದರಿಸಿ ಹಣ ವಸೂಲಿ ಮಾಡಲಿಲ್ಲ, ಕಳ್ಳತನ ಮಾಡಲಿಲ್ಲ ಸುಳ್ಳು ಹೇಳಲಿಲ್ಲ, ಕನ್ನಡಕ್ಕೆ ಕುತ್ತು ಬಂದಾಗ ಸ್ವಾಭಿಮಾನದ ಕೂಗು ಹಾಕಿದಕ್ಕೆ ಈ ಶಿಕ್ಷೆಯೇ?” ಎಂದು ಬರೆಯುವ ಮೂಲಕ ಕನ್ನಡ ಪರ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಬುಕ್ ಮಾಡಿರುವ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top