ಮಕ್ಕಳು ಮುಗ್ದರು ಎಂಬ ಮಾತು ಎಷ್ಟು ಸತ್ಯ ಅಲ್ವಾ? ಇದಕ್ಕೆ ಹಲವಾರು ಉದಾಹರಣೆಗಳನ್ನು ನಾವು ಕೊಡಬಹುದು. ಇದೀಗ ಈ ವಿಷಯಕ್ಕೆ ಮತ್ತೊಂದು ಉದಾಹರಣೆ ಎಂದರೆ 9 ವರ್ಷ ವಯಸ್ಸಿನ ಬಾಲಕನೊಬ್ಬ, ತಾನು ಕೂಡಿಟ್ಟಿದ್ದ ಹಣವನ್ನು ಟರ್ಕಿ ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗಾಗಿ ನೀಡಿದ್ದಾನೆ.
ಇತ್ತೀಚಿಗೆ ಟರ್ಕಿಯಲ್ಲಿ ಭೂಕಂಪವಾಗಿ ಅನೇಕ ಸಾವು ನೋವುಗಳು ಸಂಭವಿಸಿದ್ದವು. ಕಳೆದ ವರ್ಷ ನವೆಂಬರ್‌ನಲ್ಲಿ ವಾಯುವ್ಯ ಡಜ್ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿತ್ತು. ಈ ಭೂಕಂಪನದ ಸಮಯದಲ್ಲಿ ಈ ಬಾಲಕನನ್ನು ರಕ್ಷಿಸಲಾಗಿದ್ದು, ಇವನನ್ನು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರೆಸಿಡೆನ್ಸಿ ಸ್ಥಾಪಿಸಿದ್ದ ಟೆಂಟ್‌ನಲ್ಲಿ ಆರೈಕೆ ಮಾಡಲಾಗಿತ್ತು.
ಇದೀಗ ಈ ಪುಟ್ಟು ಹುಡುಗ ಟರ್ಕಿಯಲ್ಲಿ ಭೂಕಂಪನಕ್ಕೆ ಸಿಲುಕಿ ನಲುಗುತ್ತಿರುವ ಜನರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದಾನೆ. ಇದರ ಕುರಿತು ತಮ್ಮ ತಾಯಿಯ ಬಳಿ ಸಹ ಮಾತನಾಡಿದ್ದಾನೆ. ತಾಯಿಯ ಒಪ್ಪಿಗೆಯ ಮೇರೆಗೆ ತನಗೆ ಹಿರಿಯರು ಕೊಡುತ್ತಿದ್ದ ಪಾಕೆಟ್ ಮನಿಯನ್ನು ಕೂಡಿಟ್ಟುಕೊಂಡಿದ್ದನ್ನು ಸಂತ್ರಸ್ತರಿಗಾಗಿ ನೀಡಿದ್ದಾನೆ.
“ಡಜ್‌ನಲ್ಲಿ ಭೂಕಂಪವಾದಾಗ ನಾನು ತುಂಬಾ ಹೆದರುತ್ತಿದ್ದೆ. ನಮ್ಮ ಅನೇಕ ನಗರಗಳಲ್ಲಿ ಉಂಟಾಗುವ ಭೂಕಂಪನದ ಬಗ್ಗೆ ಕೇಳಿದಾಗ ನನಗೆ ಅದೇ ಭಯವಿತ್ತು. “ನಾನು ಚಾಕೊಲೇಟ್ ಖರೀದಿಸದಿದ್ದರೂ ಪರವಾಗಿಲ್ಲ. ಅಲ್ಲಿನ ಮಕ್ಕಳು ಚಳಿ ಮತ್ತು ಹಸಿವಿನಿಂದ ಇರಬಾರದು. ಅಲ್ಲಿನ ಮಕ್ಕಳಿಗೆ ನನ್ನ ಬಟ್ಟೆ, ಆಟಿಕೆಗಳನ್ನು ಕಳುಹಿಸುತ್ತೇನೆ” ಎಂದು ಬಾಲಕ ಹೇಳಿದ್ದಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
