ನಟ, ನಿರ್ದೇಶಕ ರಿಷಬ್ ಅವರು ಕಾಂತಾರ ಸಿನಿಮಾ ಸಂಬಂಧ ಬಹಳಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಸಿನಿಮಾ ಹಾಗೂ ಸಿನಿಮಾ ಕಥೆ ಹುಟ್ಟಿಕೊಂಡ ಬಗ್ಗೆ ಹಲವು ವಿಚಾರಗಳನ್ನು ಶೇರ್ ಮಾಡಿದ್ದಾರೆ. ಸಂವಾದದಲ್ಲಿ ಕಾಂತಾರ ಸಿನಿಮಾದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ ಅವರು ನಾನು ಯಾವುದೇ ಗೆಲುವನ್ನ ಸೋಲನ್ನ ತಲೆಗೆ ತೆಗೆದುಕೊಳ್ಳುವುದಿಲ್ಲ. ನಾನು ಕೆಲಸ ಮಾಡೋಣ ಅಂತ ಯಾವಾಗಲೂ ಯೋಚನೆ ಮಾಡುತ್ತೇನೆ. ಯಾವುದೇ ವೇದಿಕೆಗಾಗಲಿ, ಸಿನಿಮಾ ಅವಾರ್ಡ್ಗೆ ಹೋಗಲಿ ಅಂತ ಸಿನಿಮಾ ಮಾಡಲ್ಲ ಎಂದಿದ್ದಾರೆ.
ನಮ್ಮ ದೇಶ ವೈವಿಧ್ಯಮಯವಾಗಿದೆ. ನಮ್ಮಲ್ಲಿ ಹಲವಾರು ಸಂಸ್ಕೃತಿ ಇದೆ. ಪ್ರತಿಯೊಬ್ಬರು ಈ ಸಿನಿಮಾ ನೋಡಿ ಅವರವರ ದೈವಗಳ, ದೇವರ ಜೊತೆ ಕನೆಕ್ಟ್ ಆಗುತ್ತಾ ಹೋದರು. ಈ ಸಿನಿಮಾ ಬರಿ ದೈವದ ಬಗ್ಗೆ, ಅಲ್ಲ ಒಂದು ಸಮಾಜದ, ಹಾಡಿ ಜನರ ಬಗ್ಗೆ ಆಗಿದೆ. ಹೀಗಾಹಿ ಎಲ್ಲರಿಗೂ ಈ ಸಿನಿಮಾ ಕನೆಕ್ಟ್ ಆಗಿದೆ ಎಂದಿದ್ದಾರೆ.
ನಾನು ರೈತಾಪಿ ಕುಟುಂಬದಿಂದ ಬಂದ ಹುಡುಗ. ಲಾಕ್ ಡೌನ್ ಸಮಯದಲ್ಲಿ ಎಲ್ಲರೂ ಕೃಷಿಯ ಕಡೆಗೆ ಮುಖ ಮಾಡುತ್ತಿದ್ದರು. ಆಗ ನಮ್ಮ ಸ್ನೇಹಿತ ಒಬ್ಬ ಒಂದು ಘಟನೆಯನ್ನು ಹೇಳಿದ.ಗೆಳೆಯನ ಮನೆಯಲ್ಲಿ ಸಾವಯುವ ಕೃಷಿ ಮಾಡಿದ್ದರು. ಭತ್ತ ಕಟಾವಿಗ ಬಂದಿತ್ತು. ಆಗ ಒಂದು ಕಾಡು ಹಂದಿ ಆ ಭತ್ತದ ಗದ್ದೆಗೆ ನುಗ್ಗಿ ಭತ್ತ ತಿಂದಿರುತ್ತದೆ. ಆ ಹಂದಿ ಹೊಡೆಯೋಣ ಅಂತ ಒಂದು ವಾರ ಹುಡುಕುತ್ತಾರೆ.
ಆದರೆ ಆ ಹಂದಿ ಸಿಗೋದಿಲ್ಲ. ಕೊನೆಗೆ ಒಂದು ಮರದಲ್ಲಿ ಹಂದಿ ಹೊಡೆಯಲು ಕಾದು ಕುಳಿತುಕೊಳ್ಳುತ್ತಾರೆ. ಆ ಹಂದಿ ಹೊಡೆಯೋಕೆ ಕೂತಿರೋ ಮಾಹಿತಿ ಫಾರಿಸ್ಟ್ ಆಫೀಸರ್ಗೆ ಸಿಗುತ್ತದೆ. ಅವರು ನಮ್ಮ ಸ್ನೇಹಿತನ ಮನೆಗೆ ರೈಡ್ ಮಾಡುತ್ತಾರೆ. ಆಗ ಲೋಡೆಡ್ ಗನ್ ಸಿಗುತ್ತದೆ. ಆ ಗನ್ ಹಿಡಿದು ಫಾರೆಸ್ಟ್ ಆಫೀಸರ್ ಶೂಟ್ ಮಾಡುತ್ತಾರೆ. ಆಗ ಆ ಫಾರೆಸ್ಟ್ ಆಫೀಸರ್ ಕಣ್ಣಿಗೆ ಸಮಸ್ಯೆ ಆಗಿತ್ತೆ. ಈ ಕಥೆಯನ್ನ ನಮ್ಮೂರಲ್ಲಿರೋ ಒಬ್ಬ ಸ್ನೇಹಿತ ಹೇಳುತ್ತಾರೆ. ಅದರಿಂದಲೇ ಕಾಂತಾರ ಸಿನಿಮಾದ ಕಥೆ ಹುಟ್ಟಿಕೊಂಡಿತು ಎಂದಿದ್ದಾರೆ ರಿಷಬ್.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
