fbpx
ಸಮಾಚಾರ

ಇಲ್ಲಿದೆ ಸಿದ್ದೇಶ್ವರ ಸ್ವಾಮಿಗಳು ಹೇಳಿದ ಕೆಲವು ಪ್ರವಚನದ ಸಾಲುಗಳು

ನಡೆದಾಡುವ ದೇವರು ಎಂದು ಕರೆಸಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿ ಸರಳ, ಸಜ್ಜನಿಕೆಯ ಪೂಜನೀಯ ವ್ಯಕ್ತಿತ್ವ. ಇವರು ಯಾವತ್ತೂ ಯಾವುದೇ ವಸ್ತುಗಳಿಗೆ ಆಸೆಪಟ್ಟಿಲ್ಲ, ತಮ್ಮ ಬಳಿ ಏನೇ ವಸ್ತು ಇರಬಾರದು ಎಂಬ ಉದ್ದೇಶಕ್ಕೆ ಜೇಬು ಇಲ್ಲದ ಅಂಗಿ ಧರಿಸುತ್ತಿದ್ದರು. ತಮಗೆ ಬಂದಂಥ ಪದ್ಮಶ್ರೀ ಸೇರಿ ಹಲವಾರು ಪ್ರಶಸ್ತಿಗಳನ್ನು ನಯವಾಗಿ ಬೇಡ ಎಂದಂಥ ಮೇರು ವ್ಯಕ್ತಿತ್ವ. ತಮ್ಮ ಜೀವನವನ್ನು ಧರ್ಮಕ್ಕಾಗಿ ಮೀಸಲಾಗಿಟ್ಟ ಮಹಾನ್ ಯೋಗಿ.

ಇವರ ಪ್ರವಚನಗಳು ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸುವಂಥ ಶಕ್ತಿ ಹೊಂದಿದ್ದೆವು. ಇವರ ಪ್ರವಚನ ಕೇಳಲು ಸಾವಿರಾರು ಜನರು ಸೇರುತ್ತಿದ್ದರು. ಇವರ ಒಂದೊಂದು ಪ್ರವಚನಗಳು ಜನ ಸಾಮಾನ್ಯ ಬದುಕಿಗೆ ತುಂಬಾ ಹತ್ತಿರವಾಗುತ್ತಿತ್ತು, ತಾವು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಬೆಳಕನ್ನು ತೋರಿಸುವಂತಿರುತ್ತಿತ್ತು, ಇವರ ಪ್ರವಚನಗಳು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಿದೆ.

ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಪ್ರವಚನವೇ ಸರ್ವಸ್ವವಾಗಿತ್ತು. ಪ್ರವಚನಗಳಿಂದಲೇ ಜನರ ಜೀವನ, ಪರಿಪೂರ್ಣ ಬದುಕಿಗೆ ದಾರಿ ದೀಪವಾಗಿದ್ದರು. ಕನ್ನಡ, ಇಂಗ್ಲಿಷ್‌, ಪರ್ಷಿಯನ್‌ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರವೀಣರಾಗಿದ್ದ ಶ್ರೀಗಳು ನಿರರ್ಗಳವಾಗಿ ಉಪನ್ಯಾಸ ನೀಡುತ್ತಿದ್ದರು. ಸಾಕ್ರೆಟಿಸ್‌ ತತ್ವಗಳಿಂದ ಹಿಡಿದು ಕನಫä್ಯಷಿಯಸ್‌ ತತ್ವಗಳನ್ನು, ಬುದ್ಧನ ಬೋಧನೆಗಳನ್ನು, ಬಸವಣ್ಣನವರ ವಿಚಾರಗಳನ್ನು, ವೇದಗಳ ಸಾರವನ್ನು ಪ್ರವಚನದಲ್ಲಿ ಉಲ್ಲೇಖಿಸುವುದುಂಟು.

ಅಮೆರಿಕ, ಜಪಾನ್‌ ಸೇರಿದಂತೆ ಹಲವಾರು ದೇಶಗಳಲ್ಲಿಯೂ ಶ್ರೀಗಳು ತಮ್ಮ ದಿವ್ಯ ಪ್ರವಚನಾಮೃತವನ್ನು ಭಕ್ತಾದಿಗಳಿಗೆ ಉಣಬಡಿಸಿದ್ದರು. ಸುತ್ತೂರ ಶ್ರೀಗಳ ಕೋರಿಕೆಯ ಮೇರೆಗೆ ಅಮೆರಿಕಗೆ ತೆರಳಿ ಅಧ್ಯಾತ್ಮದ ಸುಗಂಧ, ಭಾರತೀಯ ಸಂಸ್ಕೃತಿಯ ದಿವ್ಯತೆಯನ್ನು ಪ್ರವಚನದ ಮೂಲಕ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಚಯಿಸಿದ ಮಹನೀಯರಾಗಿದ್ದರು.

ಬದುಕು ಹೇಗಿರಬೇಕು?-ಸಿದ್ದೇಶ್ವರ ಸ್ವಾಮೀಜಿಯ ನುಡಿಮುತ್ತುಗಳು

ಅಮೂಲ್ಯವಾದ ನಮ್ಮ ಬದುಕನ್ನು ನಾವು ಎಂದೂ ಉಪೇಕ್ಷಿಸಬಾರದು, ತಿರಸ್ಕರಿಸಬಾರದು. ಇನ್ನೊಮ್ಮೆ ಈ ಜಗತ್ತಿಗೆ ಬರುವುದೇ ಬೇಡ, ಬದುಕುವುದೇ ಬೇಡ ಎನ್ನುವಂತೆ ಬದುಕಬಾರದು

ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ಮತ್ತೆ ಮತ್ತೆ ನೋಡಲು ಬರುತ್ತೇನೆ, ಈ ಜಗತ್ತನ್ನು, ಈ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತೇನೆ ಎಂಬ ಉತ್ಸಾಹ ನಮ್ಮಲ್ಲಿರಬೇಕು

-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

ಸಂಸ್ಕಾರದ ಮಹತ್ವ

ಅಕ್ಷರ ಕಲಿತ ವ್ಯಕ್ತಿ ಭ್ರಷ್ಟನಾದರೂ ಆಗಹುದು, ಆದರೆ ಸಂಸ್ಕಾರವನ್ನು ಕಲಿತ ವ್ಯಕ್ತಿ ಎಂದೆಂದಿಗೂ ಭ್ರಷ್ಟನಾಗಲಾಗಲಾರ

-ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

ನಿಮ್ಮ ಬದುಕು ರೂಪಿಸುವುದು ನಿಮ್ಮ ಕೈಯಲ್ಲಿದೆ

ಆ ಕಲ್ಲುಗಳಿಂದ ಗೋಡೆ ಕಟ್ಟುತ್ತೀರೋ ಅಥವಾ ಸೇತುವೆ ನಿರ್ಮಿಸುತ್ತೀರೊ ನಿಮಗೆ ಬಿಟ್ಟದ್ದು. ನೆನಪಿರಲಿ ನೀವೆ ನಿಮ್ಮ ‘ಬದುಕಿನ ಶಿಲ್ಪಿಗಳು’

ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top