ಪ್ರಪಂಚದ 7 ಅದ್ಭುತಗಳಲ್ಲಿ ಒಂದಾಗಿರುವ ಬ್ರೆಜಿಲ್’ನ ರಿಯೋ ಡಿ ಜನೈರೋದ ಮೇಲಿರುವ ವಿಶ್ವದ ಅತಿ ದೊಡ್ಡ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿದೆ. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಫ್ಲ್ಯಾಶ್ ಚಂಡಮಾರುತ ಶುಕ್ರವಾರ ಬ್ರೆಜಿಲ್ ಕರಾವಳಿಗೆ ಅಪ್ಪಳಿಸಿದ್ದು ಈ ಸಮಯದಲ್ಲಿ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿರುವುದು ವರದಿಯಾಗಿದೆ. ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. 100 ಅಡಿ ಎಥ್ತರದ ಏಸು ಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು, ಇದು ದೈವಿಕ ದೃಶ್ಯ ಎಂಬಂತೆ ಭಾಸವಾಗಿದೆ.
Photos by Fernando Braga.
🔗: https://t.co/WknuYch2kh pic.twitter.com/WsPukkgAuf
— Pop Base (@PopBase) February 11, 2023
ಇನ್ನು ಸಿಡಿಲು ಬಡಿದ್ದರಿಂದ ಏಸು ಕ್ರಿಸ್ತನ ಮೂರ್ತಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.. ಈ ದೃಶ್ಯವನ್ನು ಫರ್ನಾಂಡೋ ಬ್ರಾಗಾ ಎಂಬುವವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಡಿವೈನ್ ಲೈಟಿಂಗ್ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
