ಗ್ರಾಹಕರ ಹಿತರಕ್ಷಣೆ ದೃಷ್ಟಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಗ್ರಾಹಕ ಸ್ನೇಹಿ ಕ್ರಮವನ್ನು ಜಾರಿಗೊಳಿಸಿದೆ. ಬ್ಯಾಂಕ್ ಲಾಕರ್ ಗಳಲ್ಲಿ ಅಮೂಲ್ಯ ವಸ್ತುಗಳು ಹಾಗೂ ದಾಖಲೆಗಳನ್ನು ಇಟ್ಟಿರುವವರಿಗೆ ಹಾಗೆ ಇಡಲು ಬಯಸುವವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಒಂದು ವೇಳೆ ಬ್ಯಾಂಕ್ ಲಾಕರ್ನಲ್ಲಿಟ್ಟಿರುವ ವಸ್ತು ನಾಪತ್ತೆಯಾದರೆ ಲಾಕರ್ ಬಾಡಿಗೆಯ 100 ಪಟ್ಟು ಪರಿಹಾರವನ್ನು ಗ್ರಾಹಕರಿಗೆ ಬ್ಯಾಂಕುಗಳು ನೀಡಬೇಕು ಎನ್ನುವ ಅಂಶ ಸೇರಿಸಲಾಗಿದೆ.
180 ದಿನಗಳ ಸಿಸಿ ಟಿವಿ ಕಡ್ಡಾಯಗೊಳಿಸಿದೆ. ಇದರಿಂದ ಅನ್ಯರು ಲಾಕರ್ಗೆ ಭೇಟಿ ನೀಡಿ ವಂಚನೆ ಎಸಗಿದ್ದಾರೆ ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ 6 ತಿಂಗಳವರೆಗೂ ದೂರು ನೀಡಲು ಅವಕಾಶ ಲಭಿಸುತ್ತದೆ.
ಗ್ರಾಹಕರಿಗೆ ಬ್ಯಾಂಕ್ ಗಳು ಲಾಕರ್ನಲ್ಲಿ ಇಡುವ ಮೊತ್ತಕ್ಕೆ ಆರ್ .ಬಿ.ಐ ಮಿತಿ ಹೇರಿದೆ. ಗರಿಷ್ಠ ಮೂರು ವರ್ಷಗಳ ಬಾಡಿಗೆ ಮೊತ್ತವನ್ನು ಠೇವಣಿ ರೂಪದಲ್ಲಿ ಇಡಬಹುದಾಗಿದ್ದು ಇನ್ನೂ ಹೆಚ್ಚಿನ ಹಣವನ್ನು ಕೇಳುವಂತಿಲ್ಲ.
ಪ್ರತಿಸಲ ಗ್ರಾಹಕನು ಲಾಕರ್ ಗೆ ಭೇಟಿ ನೀಡಿದಾಗ ಆ ದಿನದ ಅಂತ್ಯದ ವೇಳೆಗೆ ಬ್ಯಾಂಕುಗಳು ಗ್ರಾಹಕನಿಗೆ ಎಸ್ ಎಂ ಎಸ್, ಇ -ಮೇಲ್ ಅಲರ್ಟ್ ಸಂದೇಶಗಳನ್ನು ಕಳುಹಿಸಬೇಕು. ಇದರಿಂದ ಅನ್ಯರು ಭೇಟಿ ನೀಡಿ ವಂಚನೆ ಎಸಗುವುದು ತಪ್ಪುತ್ತದೆ.
ಖಾಲಿ ಲಾಕರ್ ಬಗ್ಗೆ ಮಾಹಿತಿ ಕಡ್ಡಾಯ ಗೊಳಿಸಿದೆ. ಇದುವರೆಗೆ ಬ್ಯಾಂಕಿನಲ್ಲಿ ಏಷ್ಟು ಲಾಕರ್ ಖಾಲಿ ಇವೆ ಎಂಬ ಮಾಹಿತಿ ಗ್ರಾಹಕರಿಗೆ ಲಭ್ಯ ವಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಏಷ್ಟು ಲಾಕರ್ ಗಳು ಖಾಲಿಯಿದೆ ಎಂದು ಶಾಖೆಯ ಫಲಕದಲ್ಲಿ ಬ್ಯಾಂಕ್ ಗಳು ಸೂಚಿಸಬೇಕು. ಹೊಸ ಅರ್ಜಿದಾರರಿಂದ ಅರ್ಜಿ ಸ್ವೀಕರಿಸಿದಾಗ ಕಾಯ್ದಿರಿಸಿದ ಗ್ರಾಹಕರ ಪಟ್ಟಿ ನಮೂದಿಸುವುದು ಕಡ್ಡಾಯವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
