ಭಾರತದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣೆಗೆ ಬಂದಿದ್ದು. ಪುರಾತನ ಭಾರತದಲ್ಲಿದ್ದ ಮಹಾಜನಪದರ ಆಡಳಿತ (ಮಗಧ, ಕುರು, ಪಾಂಚಾಲ, ಸೌರಾಷ್ಟ್ರ ಇತ್ಯಾದಿ) ನಾಣ್ಯಗಳನ್ನು ಚಲಾವಣೆಗೆ ತಂದಿತ್ತು. ಕ್ರಿ.ಪೂ 6ನೇ ಶತಮಾನದಲ್ಲಿ (ಸರಿ ಸುಮಾರು ಇದೇ ಅವಧಿಯಲ್ಲಿ ಅತ್ತ ಚೀನಾದಲ್ಲಿ ಮತ್ತು ಮಧ್ಯಪ್ರಾಚ್ಯದ ಲಿಡಿಯಾದಲ್ಲಿ ನಾಣ್ಯಗಳು ಟಂಕಿಸಲು ಆರಂಭಿಸಿದ್ದವು).
ಮೌರ್ಯರ ಮೊದಲ ರಾಜ ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಚಾಣಕ್ಯ ಬರೆದಿರುವ ‘ಅರ್ಥಶಾಸ್ತ್ರ’ ಗ್ರಂಥದಲ್ಲಿ ನಾಣ್ಯಗಳ ಬಗ್ಗೆ ಉಲ್ಲೇಖ ಇದೆ. ಬೆಳ್ಳಿ ನಾಣ್ಯಗಳನ್ನು ‘ರುಪ್ಯರೂಪ’ ಎಂದು, ಚಿನ್ನದ ನಾಣ್ಯಗಳನ್ನು ‘ಸುವರ್ಣರೂಪ’ ಎಂದು, ತಾಮ್ರದಿಂದ ಮಾಡಿದ ನಾಣ್ಯವನ್ನು ‘ತಾಮರ ರೂಪ’ ಎಂದೂ, ಸೀಸದಿಂದ ಮಾಡಿದ ನಾಣ್ಯವನ್ನು ‘ಸೀಸರೂಪ’ ಎಂದು ಕರೆಯಲಾಗುತ್ತಿತ್ತು.
ಇತಿಹಾಸಕಾರರು ಹೇಳುವಂತೆ ಭಾರತದಲ್ಲಿ ವಿವಿಧ ತೂಕ ಮತ್ತು ಮೌಲ್ಯದ ಸುಮಾರು 994 ರೀತಿಯ ನಾಣ್ಯಗಳು ಅಸ್ತಿತ್ವದಲ್ಲಿದ್ದವು. ಹಾಗಾಗಿ ಈ ಕಾಲಾವಧಿಯನ್ನು “ ಬಹುಮುಖ ಹಣ ಮತ್ತು ಖಾಸಗಿ ನಾಣ್ಯ’ ದ ಕಾಲ ಎಂದು ಕರೆಯಲಾಗಿದೆ.
1950 ರ ಆಗಸ್ಟ್ 15 ರ ನಂತರ ನೋಟುಗಳಲ್ಲಿ ಮತ್ತು ನಾಣ್ಯಗಳಲ್ಲಿ ಬ್ರಿಟಿಷ್ ಆಡಳಿಗಾರರ ಚಿತ್ರದ ಬದಲಿಗೆ ಅಶೋಕ ಸ್ತಂಭದ ಚಿತ್ರ ಮುದ್ರಿಸಲಾಯಿತು. ಅಲ್ಲಿಂದ ಮುಂದೆ ಭಾರತೀಯ ಹಣಕಾಸು ವ್ಯವಸ್ಥೆ ಮತ್ತೊಂದು ಹಂತಕ್ಕೆ ಕಾಲಿರಿಸಿತು.
1969 ರಲ್ಲಿ ಮಹಾತ್ಮಗಾಂಧಿ ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ಅವರ ಚಿತ್ರವಿರುವ ನೋಟುಗಳನ್ನು ಬಿಡುಗಡೆಗೊಳಿಸಲಾಯಿತು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
