ಇತ್ತೀಚಿಗೆ ಮೋದಿ ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳ ಜೊತೆ ಔತಣಕೂಟವನ್ನು ಏರ್ಪಡಿಸಿದ್ದರು. ಇದರಲ್ಲಿ ನಟರಾದ ಯಶ್, ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾಮಿಡಿಯನ್ ಶ್ರದ್ಧಾ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಹೀಗಾಗಿ ಇವರೆಲ್ಲರು ಔತಣಕೂಟದಲ್ಲಿ ಭಾಗಿಯಾಗಿದ್ದರು. ಆದರೆ ಇದೀಗ ಇವರನ್ನು ಬಿಟ್ಟು ಹಲವಾರು ಸೆಲಬ್ರಿಟಿಗಳಿದ್ದಾರೆ ಅವರನ್ನು ಯಾಕೆ ಮೋದಿ ಕರೆದಿಲ್ಲ ಎಂಬ ಚರ್ಚೆ ಕೇಳಿಬರುತ್ತಿದೆ.
ಮೋದಿ ಏರ್ಪಡಿಸಿದ ಔತಣಕೂಟದಲ್ಲಿ ಕನ್ನಡದಲ್ಲಿ ಸಾಧನೆ ಮಾಡಿರುವ ಇನ್ನು ಹಲವಾರು ನಟರಿದ್ದಾರೆ. ಉದಾಹರಣೆಗೆ ಶಿವ್ ರಾಜ್ ಕುಮಾರ್, ದರ್ಶನ್, ಸುದೀಪ್ ಹೀಗೆ ಹಲವಾರು ಸ್ಟಾರ್ ನಟರಿದ್ದಾರೆ. ಆದರೆ ಇವರನ್ನು ಯಾಕೆ ಮೋದಿ ಕರೆದಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ಈ ವಿಷಯದ ಕುರಿತು ಸ್ವತಃ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮಗೂ ಆಹ್ವಾನ ನೀಡಿದ್ದರು. ಆದರೆ, ಜ್ವರದ ಕಾರಣದಿಂದಾಗಿ ನಾನು ಹೋಗಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಲು ಹಲವು ಪ್ರೊಟೊಕಾಲ್ ಇರುತ್ತವೆ. ಶೀತ ಮತ್ತು ಜ್ವರ ಇದ್ದ ಕಾರಣದಿಂದಾಗಿ ಅವರನ್ನು ಭೇಟಿ ಮಾಡಲಿಲ್ಲ. ಆರ್.ಟಿ.ಪಿ.ಸಿ.ಆರ್ ಮಾಡಿಸಬೇಕಿತ್ತು. ಜ್ವರ ಇದ್ದರಿಂದ ಭೇಟಿ ಸಾಧ್ಯವಾಗಲ್ಲ ಅನಿಸಿ ಹೋಗುವುದನ್ನು ಬಿಟ್ಟೆ ಎಂದು ಸುದೀಪ್ ಹೇಳಿದ್ದಾರೆ.
ಇದಲ್ಲದೆ ಕ್ರಿಕೆಟ್ ಪಂದ್ಯ ಇರುವ ಕಾರಣ ಕಿಚ್ಚ ಇದಕ್ಕೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಒಂದು ದಿನ ಕೂಡ ಬಿಡದೇ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲೇ ಪಂದ್ಯಾವಳಿ ಕೂಡ ಇರುವುದರಿಂದ ಕಿಚ್ಚ ಹೆಚ್ಚಿನ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
