“ಅಷ್ಟ ಸಿದ್ಧಿ ನವ ನಿಧಿ ಕೇ ಧಾತ, ಅಸಬರ ದಿನ್ಹಾ ಜಾನಕಿ ಮಾತ” ಅಂದ್ರೆ ಸೀತಮ್ಮ ಆಂಜನೇಯನಿಗೆ ಒಟ್ಟು 9 ವರಗಳನ್ನು ನೀಡಿದ್ದಳು. ರಾಮಾಯಣದಲ್ಲಿ ನಮನಿಧಿಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲಿ 8 ಸಿದ್ಧಿ ಹಾಗು 9 ನಿಧಿ ಸೇರಿತ್ತು.
ಹಿಂದೂ ಧರ್ಮದಲ್ಲಿ, ನಿಧಿ ಎಂದರೆ ಸಂಪತ್ತು ಎಂದರ್ಥ. ಹನುಮಂತನು ಈ ನಿಧಿಗಳನ್ನು ಸೀತಾಮಾತೆಯಿಂದ ಪಡೆದಿದ್ದನು.ಆಂಜನೇಯನು ಸೀತಮ್ಮನಿಂದ ಪಡೆದ ನಿಧಿಗಳು ಇವು .
೧. ಖಾರ್ವನಿಧಿ ಎಂದರೆ ಲೆಕ್ಕಕ್ಕೆ ಸಿಗದ ಎಂದರ್ಥ. ಇದರಲ್ಲಿ ಎಂಟು ನಿಧಿಗಳ ಉಳಿದ ಕೆಲವು ಭಾಗಗಳು ಸಂಗ್ರಹವಾಗಿದೆ.
೨. ನಂದ ನಿಧಿ ಎಂದರೆ ದೀರ್ಘಾಯುಷ್ಯ ನಿಧಿ. ಸತ್ವ ಮತ್ತು ರಜೋ ಗುಣಗಳಿಂದ ಪ್ರಭಾವಿತರಾಗಿ, ನಂದ ನಿಧಿಯನ್ನು ಹೊಂದಿರುವ ಜನರು ದೀರ್ಘಾಯುಷ್ಯವನ್ನು ಪಡೆಯುತ್ತಾರೆ
೩. ಮುಕುಂದ ನಿಧಿ ಎಂದರೆ ಪಾದರಸ. ಈ ನಿಧಿ ಮುಂದಿನ ಒಂದು ಪೀಳಿಗೆಗೆ ಮಾತ್ರ ಹಸ್ತಾಂತರವಾಗುತ್ತದೆ.
೪. ಕಚ್ಚಪ ನಿದಿ ಎಂದರೆ ಆಮೆ. ಈ ಆಮೆಯು ಹೆಚ್ಚಿನ ಸಂಪತ್ತನ್ನು ಸಂಗ್ರಹಿಸುತ್ತದೆ
೫. ಮಕರ ನಿಧಿ. ಮಕರ ಎಂದರೆ ಮೊಸಳೆಯು ತಮೋ ಗುಣದಿಂದ ನಿಯಂತ್ರಿಸಲ್ಪಡುತ್ತದೆ. ಈ ವ್ಯಕ್ತಿಯು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಪ್ರೇರಿತನಾಗುತ್ತಾನೆ.
೬. ಶಂಖವು ಕೂಡ ಒಂದು ರೀತಿಯ ನಿಧಿಯಾಗಿದೆ.
೭. ನೀಲ ನಿಧಿಯನ್ನು ವ್ಯಾಪಾರ ವಹಿವಾಟುಗಳ ಮೂಲಕ ಸಂಗ್ರಹಿಸಲಾಗುತ್ತದೆ. ರಾಜಸ್ ಮತ್ತು ಸತ್ವ ಗುಣಗಳೊಂದಿಗೆ ಸಂಬಂಧವನ್ನು ಹೊಂದಿದೆ. ಇದು ಮೂರು ತಲೆಮಾರುಗಳಿಗೆ ಹಸ್ತಾಂತರವಾಗುತ್ತದೆ. ರಾಜಸ್ ಚಾತುರ್ಯದ ಅಂಶವನ್ನು ಒಳಗೊಂಡಿದೆ.
೮. ಮಹಾಪದ್ಮ ಪದ್ಮ ಎಂದರೆ ಕಮಲ ಎಂದರ್ಥ. ಸತ್ವ, ಸತ್ಯ ಮತ್ತು ನೀತಿಗಳನ್ನು ಮೀರಿದ ವ್ಯಕ್ತಿಯು ಅದನ್ನು ಪಡೆಯಲು ಅರ್ಹನಾಗಿರುತ್ತಾನೆ. ಈ ಸಂಪತ್ತು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗುತ್ತದೆ. ಈ ನಿಧಿಯು ಸಾತ್ವಿಕ ಸ್ವಭಾವವನ್ನು ಹೊಂದಿದೆ. ಮತ್ತು ಮುಂದಿನ ಏಳು ತಲೆಮಾರುಗಳಿಗೆ ಹಸ್ತಾಂತರವಾಗುತ್ತದೆ. ಇದು ಮಹಾಪದ್ಮ ಅಥವಾ ಬೃಹತ್ ಗಾತ್ರದ ಕಮಲವಾಗಿ ಬದಲಾಗುತ್ತದೆ.
೯. ಪದ್ಮ ನಿಧಿ ಎಂದರೆ ಕಮಲ ಎಂದರ್ಥ. ಸತ್ವ, ಸತ್ಯ ಮತ್ತು ನೀತಿಗಳನ್ನು ಮೀರಿದ ವ್ಯಕ್ತಿಯು ಅದನ್ನು ಪಡೆಯಲು ಅರ್ಹನಾಗಿರುತ್ತಾನೆ. ಈ ಸಂಪತ್ತು ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರವಾಗುತ್ತದೆ. ಈ ಆಸ್ತಿಯು ಚಿನ್ನ ಮತ್ತು ಬೆಳ್ಳಿಯ ರೂಪದಲ್ಲಿರುತ್ತವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
