RCB ತಂಡದ ಆಪತ್ ಬಾಂಧವ, ದಕ್ಷಿಣ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಇಂದು ತಮ್ಮ39 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಎಬಿಡಿ ಬ್ಯಾಟ್ ಹಿಡಿದು ಫೀಲ್ಡ್ ಗೆ ಎಂಟ್ರಿ ಕೊಟ್ಟರು ಎಂದರೆ ಎದುರಾಳಿ ತಂಡಕ್ಕೆ ಆತಂಕ ಶುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಎಬಿಡಿ ಅವರಿಗೆ ಒಂದು ನೋವು ಸದಾ ಕಾಡುತ್ತಿದೆ.
ದಕ್ಷಿಣ ಆಫ್ರಿಕಾ ಪರ ಹಲವು ವರ್ಷ ಕ್ರಿಕೆಟ್ ಆಡಿದ ಇವರಿಗೆ ತನ್ನ ತಂಡಕ್ಕೆ ಒಂದೇ ಒಂದು ವಿಶ್ವಕಪ್ ಗೆಲ್ಲಿಸಿಕೊಡಲಾಗಲಿಲ್ಲ. ಅಂತಿಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಬಳಿಕವೂ ಎಬಿಡಿಗೆ ಇದೊಂದು ಕೊರಗು ಕಾಡುತ್ತಿರುವುದು ಸುಳ್ಳಲ್ಲ. ಯಾಕೆಂದರೆ ವಿಶ್ವಕಪ್ ಗೆಲ್ಲುವುದು ಎಬಿಡಿಯ ಬಾಲ್ಯದ ಕನಸಾಗಿತ್ತು ಎಂಬುದನ್ನು ಸ್ವತಃ ಎಬಿಡಿಯೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ.
ಏನದು ಕನಸು?
ತಮ್ಮ ಕನಸಿನ ಬಗ್ಗೆ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿರುವ ಎಬಿಡಿ ” ಅದು ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಫೈನಲ್. ನಮ್ಮ ತಂಡ ಬೌಲಿಂಗ್ ಮಾಡುತ್ತಿತ್ತು. ನಾನು ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದೇನೆ. ಎದುರಾಳಿ ತಂಡದ ಎಡಗೈ ಬ್ಯಾಟ್ಸ್‌ಮನ್ ಚೆಂಡನ್ನು ನನ್ನ ಕಡೆ ಆಡಿದರು. ನಾನು ನನ್ನ ಬಲಭಾಗಕ್ಕೆ ಧುಮುಕಿ, ಚೆಂಡನ್ನು ತೆಗೆದುಕೊಂಡು, ಸ್ಟಂಪ್‌ಗಳ ಕಡೆಗೆ ಓಡಿ ಬೇಲ್‌ಗಳನ್ನು ಬೀಳಿಸಿದೆ. ಎಲ್ಲರೂ ಮನವಿ ಮಾಡಿದ್ದೇವೂ, ಅಂಪೈರ್ ಕೂಡ ಔಟ್ ನೀಡಿದರು. ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆದ್ದಿತು. ತಮ್ಮ ಇಡೀ ತಂಡ ಸಂಬ್ರಮಿಸಿತ್ತು. ಅಷ್ಟರಲ್ಲಿ ನನಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದಾಗ ಅದು ಕನಸು ಎಂದು ಗೊತಾಯ್ತು ” ಎಂದು ಬರೆದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
