ಪ್ರಸ್ತುತ ನೀರಿನ ಬಾಟಲಿಗಳ ಮಾರಾಟ ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ನಗರದಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಮಿನರಲ್ ವಾಟರ್ ಹೆಸರಲ್ಲಿ ಈ ಬ್ಯುಸಿನೆಸ್ ಜೋರಾಗಿದೆ. ಬಾಟಲಿಗಳಲ್ಲಿ ತುಂಬಿಟ್ಟಿರುವ ನೀರನ್ನು ಎಷ್ಟು ದಿನಗಳ ಕಾಲ ಬಳಸಬಹುದು? ಅವುಗಳ ಎಕ್ಸ್‌ಪೈರಿ ದಿನಾಂಕ ಯಾವಾಗ ಎಂಬುದನ್ನೆಲ್ಲ ನೋಡೋಣ.
ನೀರಿನ ಬಾಟಲಿಯ ಮೇಲೆ ಎಕ್ಸ್‌ಪೈರಿ ಡೇಟ್ ಬರೆದಿರುತ್ತಾರೆ. ನೀರು ಕೆಟ್ಟು ಹೋಗುವ ಸಾಧ್ಯತೆ ಇಲ್ಲ ಎಂದಾದ ಮೇಲೆ ಬಾಟಲಿಗಳ ಮೇಲ್ಯಾಕೆ ದಿನಾಂಕ ಬರೆಯುತ್ತಾರೆ ಎಂಬ ಪ್ರಶ್ನೆ ಸಹಜ. ವಾಸ್ತವವಾಗಿ ನೀರಿನ ಬಾಟಲಿಗಳ ಮೇಲೆ ಬರೆಯಲಾದ ಅವಧಿಯು ನೀರಿನ ಎಕ್ಸ್‌ಪೈರಿ ಡೇಟ್ ಅಲ್ಲ, ಬದಲಾಗಿ ಬಳಸಿದ ಬಾಟಲಿಯ ಎಕ್ಸ್‌ಪೈರಿ ದಿನಾಂಕವಾಗಿರುತ್ತದೆ.
ನೀರಿನ ಬಾಟಲಿಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ನಿರ್ದಿಷ್ಟ ಸಮಯದ ನಂತರ ಪ್ಲಾಸ್ಟಿಕ್ ನೀರಿನಲ್ಲಿ ನಿಧಾನವಾಗಿ ಕರಗಲು ಪ್ರಾರಂಭಿಸುತ್ತದೆ. ಹಾಗಾದಾಗ ಆ ನೀರನ್ನು ಕುಡಿಯುವುದು ಬಹಳ ಅಪಾಯಕಾರಿ. ಈ ಕಾರಣಕ್ಕಾಗಿಯೇ ಬಾಟಲಿಗಳಿಗೆ ಎಕ್ಸ್‌ಪೈರಿ ಡೇಟ್ ಹಾಕಲಾಗುತ್ತದೆ. ನೀರಿಗೆ ಎಕ್ಸ್‌ಪೈರಿ ಡೇಟ್ ಇಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
