ಇಲ್ಲೊಬ್ಬರು ಪ್ರಾಧ್ಯಾಪಕರಿಗೆ 93 ವರ್ಷ ವಯಸ್ಸಾದರೂ ಸಹ ವಯಸ್ಸು ಕೇವಲ ಸಂಖ್ಯೆಯಾಗಿದೆ ಮತ್ತು ನಿವೃತ್ತಿ ಒಂದು ವಿದೇಶಿ ಪರಿಕಲ್ಪನೆಯಾಗಿದೆ ಅಂತ ಹೇಳುತ್ತಾರೆ. ಇವರು ಭಾರತ ಮೂಲದ ವಿದ್ವಾಂಸರಾದ ಚಿಲುಕುರಿ ಶಾಂತಮ್ಮ ಅಂತ ಹೇಳಲಾಗುತ್ತಿದೆ. ಇವರಿಗೆ ಭೌತಶಾಸ್ತ್ರ ವಿಷಯದ ಬಗ್ಗೆ ಎಲ್ಲಿಲ್ಲದ ಉತ್ಸಾಹವಿರುತ್ತದೆ. ಇಷ್ಟೇ ಅಲ್ಲದೆ ಬೋಧನೆಯು ಅವರ ಜೀವನದ ಪರಮ ಉದ್ದೇಶವಾಗಿದೆ.
ತನ್ನ ಬೋಧನಾ ಉತ್ಸಾಹವನ್ನು ಪೂರೈಸಿಕೊಳ್ಳಲು ಪ್ರತಿದಿನ, ಅವರು ವಿಶಾಖಪಟ್ಟಣದಿಂದ ವಿಜಯನಗರಂಗೆ 60 ಕಿಲೋ ಮೀಟರ್ ಪ್ರಯಾಣಿಸುತ್ತಾರೆ. ಅವರು ಆಂಧ್ರಪ್ರದೇಶದ ಸೆಂಚುರಿಯನ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಕಲಿಸುತ್ತಾರೆ.
ಶಾಂತಮ್ಮ ಅವರ ತಾಯಿ ವನಜಾಕ್ಷಮ್ಮ ಅವರು ಸಹ ತಮ್ಮ 104ನೇ ವಯಸ್ಸಿನವರೆಗೆ ಬದುಕಿದ್ದರು ಎಂದು ವರದಿಯಾಗಿದೆ, ಇದು 93 ವರ್ಷದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಗೆ ಸ್ಫೂರ್ತಿ ನೀಡುತ್ತದೆ. ಈ ವಯಸ್ಸಿನಲ್ಲಿ, ಅವರು ವಾಸ್ತವವಾಗಿ ವಿಶ್ವದ ಅತ್ಯಂತ ಹಳೆಯ ಬೋಧನಾ ಪ್ರಾಧ್ಯಾಪಕರಾಗಿದ್ದಾರೆ.
ಅಟೋಮಿಕ್ ಸ್ಪೆಕ್ಟ್ರೋಸ್ಕೋಪಿ ಮತ್ತು ಮಾಲಿಕ್ಯುಲರ್ ಸ್ಪೆಕ್ಟ್ರೋಸ್ಕೋಪಿಯ ವಿಶ್ಲೇಷಣೆಗಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಾಂತಮ್ಮ ಒಬ್ಬ ಲೇಖಕಿ ಸಹ ಆಗಿದ್ದು, ಅವರು ಪುರಾಣಗಳು, ವೇದಗಳು ಮತ್ತು ಉಪನಿಷತ್ತುಗಳ ಬಗ್ಗೆ “ಭಗವದ್ಗೀತಾ- ದಿ ಡಿವೈನ್ ಡೈರೆಕ್ಟಿವ್” ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ.
ಮಾರ್ಚ್ 8, 1929 ರಂದು ಆಗ್ನೇಯ ಭಾರತದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಜನಿಸಿದ ಶಾಂತಮ್ಮ ಅವರು 1989 ರಲ್ಲಿ ತಮ್ಮ 60ನೇ ವಯಸ್ಸಿನಲ್ಲಿ ತಮ್ಮ ಕೆಲಸದಿಂದ ನಿವೃತ್ತರಾದರು. ನಿವೃತ್ತಿಯ ನಂತರವೂ, ಅವರು ಮಕ್ಕಳಿಗೆ ಬೋಧನೆ ಮಾಡುವುದನ್ನು ಹಾಗೆ ಮುಂದುವರಿಸಲು ನಿರ್ಧರಿಸಿದರು ಮತ್ತು ಈಗ ಏಳು ದಶಕಗಳಿಂದ ಯುವ ಮನಸ್ಸುಗಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ಜೀವನಕ್ಕೆ ಸ್ಫೂರ್ತಿ ನೀಡುವ ನೀತಿ ಪಾಠಗಳನ್ನು ಸಹ ಹೇಳುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
