ಜನಪ್ರಿಯ ಕಾಲರ್ ಐಡಿ ಎನಿಸಿಕೊಂಡಿರುವ ಟ್ರೂ ಕಾಲರ್ ಅಪ್ಲಿಕೇಶನ್ ಐಒಎಸ್ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಐಒಎಸ್ ಬಳಕೆದಾರರಿಗಾಗಿ ತನ್ನ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಪರಿಷ್ಕರಿಸಿದೆ. ಇದರಿಂದ ಟ್ರೂ ಕಾಲರ್ ಅಪ್ಲಿಕೇಶನ್‌ನಲ್ಲಿ ಹೊಸ ಫೀಚರ್ಸ್‌ಗಳು ಲಭ್ಯವಾಗುವುದಲ್ಲೆ ಅಗತ್ಯವಿರುವ ಭದ್ರತೆಯನ್ನು ಕೂಡ ನೀಡಲಿದೆ.
ಹೊಸ ಅಪ್ಡೇಟ್ ಟ್ರೂ ಕಾಲರ್ ಸ್ಪ್ಯಾಮ್ ಕರೆಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ. ಜೊತೆಗೆ ವೆರಿಫೈಡ್ ಬ್ಯುಸಿನೆಸ್ ಅನ್ನು ಗುರುತಿಸಲಿದೆ. ಇದಲ್ಲದೆ ಸ್ಪ್ಯಾಮ್ ಸಂಖ್ಯೆಗಳನ್ನು ನೈಜ ಸಮಯದಲ್ಲಿ ವರದಿ ಮಾಡಲು ಅವಕಾಶ ನೀಡಲಿದೆ.
ಸ್ಪ್ಯಾಮ್ ಕರೆಗಳ ಬಗ್ಗೆ ರಿಪೋರ್ಟ್ ಮಾಡುವುದಕ್ಕೆ ಕೂಡ ಅವಕಾಶ ದೊರೆಯಲಿದೆ. ನಿಖರ ಮತ್ತು ಸಂಪೂರ್ಣ ಕರೆ ಮಾಡುವ ಐಡಿ ಮತ್ತು ಸ್ಪ್ಯಾಮ್ ಪತ್ತೆಹಚ್ಚುವಿಕೆಯನ್ನು ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.
ಇನ್ನು ಈ ಹೊಸ ಅಪ್ಲಿಕೇಶನ್ ಪ್ರವೇಶಿಸುವುದು ತುಂಬಾ ಸರಳವಾಗಿದೆ. ಬಳಕೆದಾರರು ಈಗ ಸುಲಭವಾಗಿ ಲಾಗ್ ಇನ್ ಮಾಡಬಹುದಾಗಿದೆ. ಅಪ್ಲಿಕೇಶನ್ ಮೂಲಕ ತ್ವರಿತವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ. ಇದಲ್ಲದೆ ಅಪ್ಲಿಕೇಶನ್ ತೆರೆಯದೆ ನಂಬರ್‌ಗಳನ್ನು ಸರ್ಚ್ ಮಾಡಲು ಸಹಾಯ ಮಾಡಲಿದೆ. ಒಂದು ವೇಳೆ ನೀವು ಅಪರಿಚಿತ ಸಂಖ್ಯೆಯಿಂದ ಕರೆಯನ್ನು ಸ್ವಿಕರಿಸಿದರೆ , ನೀವು ನಿಮ್ಮ ಕರೆ ಲಾಗ್‌ಗೆ ಹೋಗಬಹುದು, ಮಾಹಿತಿ ಬಟನ್ ಟ್ಯಾಪ್ ಮಾಡಬಹುದು. ಇದರಿಂದ ನಿಮಗೆ ಕರೆ ಮಾಡಿದವರ ಹೆಸರನ್ನು ತಿಳಿಯಬಹುದು.
ಟ್ರೂ ಕಾಲರ್ ಅಪ್ಲಿಕೇಶನ್ ಹೊಸ ಓಪನ್ ಡೋರ್ಸ್ ಅಪ್ಲಿಕೇಶನ್ ಲಾಂಚ್ ಮಾಡಿದೆ. ಇದು ಆಡಿಯೋ ಸೊಶೀಯಲ್ ಮೀಡಿಯಾ ಅಪ್ಲಿಕೇಶನ್ ಆಗಿರುವ ಕ್ಲಬ್‌ಹೌಸ್ ಮಾದರಿಯನ್ನೇ ಹೋಲುತ್ತದೆ ಎನ್ನಲಾಗಿದೆ. ಟ್ರೂ ಕಾಲರ್ ಪರಿಚಯಿಸಿರುವ ಓಪನ್ ಡೋರ್ಸ್ ಅಪ್ಲಿಕೇಶನ್ ಕೂಡ ಕಮ್ಯೂನಿಕೇಟ್ ಪ್ಲಾಟ್‌ಫಾರ್ಮ್ ಆಗಿದ್ದು, ಆಡಿಯೋ ಸಂಭಾಷಣೆಗಳನ್ನು ಪ್ರಾರಂಭಿಸಲು ಮತ್ತು ಸೇರಲು ಟ್ರೂಕಾಲರ್ ಬಳಕೆದಾರರಿಗೆ ಅವಕಾಶ ಸಿಗಲಿದೆ.
ಓಪನ್ ಡೋರ್ಸ್ ಅಪ್ಲಿಕೇಶನ್ ವಿಶೇಷತೆ ಎಂದರೆ ಆಡಿಯೋ ಸಂಭಾಷಣೆಯಲ್ಲಿ ಭಾಗವಹಿಸುವವರು ಯಾರು ಕೂಡ ಪರಸ್ಪರರ ಫೋನ್ ಸಂಖ್ಯೆಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ನಿಮ್ಮ ಫೋನ್ ನಂಬರ್‌ಗಳು ಬೇರೆಯವರಿಗೆ ದೊರಕುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಆಡಿಯೋ ಸಂಭಾಷಣೆಯ ಸಮಯದಲ್ಲಿ ನಿಮ್ಮ ಹೆಸರುಗಳು ಮತ್ತು ಪ್ರೊಫೈಲ್ ಚಿತ್ರಗಳು ಮಾತ್ರ ಗೋಚರಿಸುತ್ತವೆ. ಅಲ್ಲದೆ ಓಪನ್ ಡೋರ್ಸ್ ಅಪ್ಲಿಕೇಶನ್‌ಗೆ ಕೇವಲ ಎರಡು ಅನುಮತಿಗಳ ಅಗತ್ಯವಿರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಡೇಟಾದ ಮೇಲೆ ಕಂಪ್ಲೀಟ್ ಕಂಟ್ರೋಲ್ ಹೊಂದಿರುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
