fbpx
ಸಮಾಚಾರ

ತಿಳಿದುಕೊಳ್ಳಲೇ ಬೇಕಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಿಶೇಷತೆಗಳು ಇಲ್ಲಿವೆ

ನಾಗನ ಪ್ರಸಿದ್ಧ ಆರಾಧನಾ ಕೇಂದ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸುಬ್ರಮಣ್ಯ ಗ್ರಾಮದಲ್ಲಿ ಇದೆ.
ಕುಕ್ಕೆಗೆ ಭೇಟಿ ನೀಡುವ ಭಕ್ತರನ್ನು ವಾಸುಕಿಯ ವಿಷಕಾರಿ ಉಸಿರಿನಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಗುರು ಶ್ರೀ ಶಂಕರಾಚಾರ್ಯರು ತಮ್ಮ ದಂಡಯಾತ್ರೆಯಲ್ಲಿ ಈ ಸ್ಥಳದಲ್ಲಿ ಬೀಡು ಬಿಟ್ಟಿದ್ದರು ಎಂದೂ ಹೇಳಲಾಗುತ್ತದೆ.

ದೇವಾಲಯದ ಮುಖ್ಯ ಗರ್ಭಗುಡಿಯನ್ನು ಕೇರಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಭಕ್ತರಿಗೆ ಪವಿತ್ರ ಮಣ್ಣನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಇಲ್ಲಿರುವ ಶೇಷ ಪರ್ವತವು ಸುಬ್ರಹ್ಮಣ್ಯ ದೇವಾಲಯವನ್ನು ರಕ್ಷಿಸುವ ನಾಗರಹಾವಿನಂತೆ ಕಾಣುತ್ತದೆ. ಮತ್ತು ದೇವಾಲಯದ ಮೇಲಿರುವ ಕುಮಾರ ಪರ್ವತವು ದಕ್ಷಿಣ ಭಾರತದಾದ್ಯಂತ ಇರುವ ಚಾರಣಿಗರಿಗೆ ಜನಪ್ರಿಯ ಪಾದಯಾತ್ರೆಯ ತಾಣವಾಗಿದೆ.

ಇಲ್ಲಿ ಪ್ರತಿ ವರ್ಷ ಆಚರಿಸಲಾಗುವ ಚಂಪಾ ಷಷ್ಠಿಯ ದಿನದಂದು ಕ್ಷೇತ್ರದ ಆರಾಧ್ಯ ಮೂರ್ತಿಯಾದ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವವು ನಡೆಯುತ್ತದೆ. ಸುಬ್ರಹ್ಮಣ್ಯದ ಈ ರಥವನ್ನು ಕೇವಲ ಬಿದಿರು ಹಾಗೂ ನಾಗರಬೆತ್ತ ಬಳಸಿ ಸಿದ್ಧಗೊಳಿಸಲಾಗುತ್ತೆ. ಇದೇ ಕಾರಣಕ್ಕಾಗಿ ಈ ರಥ ರಾಜ್ಯದಲ್ಲೇ ಇರುವ ಎಲ್ಲಾ ಕ್ಷೇತ್ರಗಳ ರಥಗಳಿಗಿಂತ ವಿಶಿಷ್ಟವಾಗಿದೆ. ದೇಶದೆಲ್ಲೆಡೆ ಇರುವ ಕ್ಷೇತ್ರಗಳ ರಥಗಳನ್ನು ಕಟ್ಟುವಾಗ ಹಗ್ಗಗಳನ್ನು ಉಪಯೋಗಿಸಿದರೆ ಇಲ್ಲಿ ಕಾಡಿನಿಂದ ತಂದ ಬಿದಿರು ಹಾಗೂ ನಾಗರ ಬೆತ್ತಗಳೇ ಹಗ್ಗದ ರೂಪದಲ್ಲಿ ಬಳಕೆಯಾಗುತ್ತದೆ‌.  

ರಥೋತ್ಸವ ಬಳಿಕ ಇದೇ ರಥದಲ್ಲಿ ಉಪಯೋಗಿಸುವ ಬಿದಿರಿನ ತುಂಡುಗಳನ್ನು ಭಕ್ತರು ಮನೆಗೆ ಪ್ರಸಾದದಂತೆ ಒಯ್ಯುತ್ತಾರೆ. ಈ ತುಂಡನ್ನು ಮನೆಯಲ್ಲಿ ಇಡುವುದರಿಂದ ನಾಗಬಾಧೆ ಕಾಡುವುದಿಲ್ಲ ಎಂಬ ನಂಬಿಕೆ ಭಕ್ತರದ್ದು.

ಕುಕ್ಕೆಯ ಸುಬ್ರಹ್ಮಣ್ಯ ಸ್ವಾಮಿ ಇದೇ ಮಲೆಕುಡಿಯರಿಗೆ ಕಾಡಿನಲ್ಲಿ ಸಿಕ್ಕಿದ್ದು, ಇದರಿಂದಾಗಿಯೇ ಮಲೆಕುಡಿಯ ಜನಾಂಗಕ್ಕೆ ಕ್ಷೇತ್ರದ ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳುವ ಅವಕಾಶ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ಕುಕ್ಕೆ ಸುಬ್ರಹ್ಮಣ್ಯವು ನಾಗದೋಷಕ್ಕೆ ಸಂಬಂಧಿಸಿದ ಪೂಜೆಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಅವುಗಳಲ್ಲಿ ಮುಖ್ಯವಾಗಿ ಆಶ್ಲೇಷ ಬಲಿ ಪೂಜೆ ಮತ್ತು ಸರ್ಪ ಸಂಸ್ಕಾರ ಈ 2 ಪೂಜೆಯನ್ನು ವಿಶೇಷವಾಗಿ ನೆರವೇರಿಸಲಾಗುತ್ತದೆ.
ಇಲ್ಲಿ ನೀವು ನೋಡಬಹುದು 3 ಕಲ್ಲಿನ ನಾಗ ಸರ್ಪವನ್ನು ಪ್ರತಿಷ್ಠಾಪನೆ ಮಾಡುತ್ತಾರೆ . ಇಲ್ಲಿ ಮದ್ಯದ ಹೆಡೆಯಲ್ಲಿ ಮುದ್ದು ನಾಗಮ್ಮ ಎನ್ನುವ ಶಾಪ ಕನೈ , ಎರಡು ಹೆಡೆಯಲ್ಲಿ ದ್ವಿಪುಣೆ ಎಂದು ಕರೆಯುತ್ತಾರೆ , 7 ಹೆಡೆಯಲ್ಲಿ ಇರುವುದನ್ನು ಸಪ್ತಪಣಿ ಎಂದು ಕರೆಯುತ್ತಾರೆ . ಕಾಮ , ಮೋಕ್ಷ , ಫಲಪ್ರದ ಎಂದು ತಮ್ಮ ಜೀವನದಲ್ಲಿ ಸಪ್ತ ಜನ್ಮಗಳ ದೋಷ ಪರಿಹಾರಕ್ಕಾಗಿ ಈ ಕ್ಷೇತ್ರದಲ್ಲಿ ನಾಗ ಪ್ರತಿಷ್ಟಾಪನೆ ಕಾರ್ಯವನ್ನು ಮಾಡುವುದರಿಂದ ಸಂತಾನ ಭಾಗ್ಯ ಮತ್ತು ಸಂತಾನವಿಲ್ಲದೆ ಇರುವಂತಹ ಭಕ್ತಾದಿಗಳಿಗೆ ಸ್ವಾಮಿಯ ಕೃಪೆಯಿಂದ ನಾಗ ಪ್ರತಿಷ್ಠಾಪನ ಎನ್ನುವ ಪ್ರಾಯಶ್ಚಿತ ಕರ್ಮದಿಂದ ಅವರಿಗೆ ಸಂತಾನ ಭಾಗ್ಯವೂ ನೆರವೇರುತ್ತದೆ . ಆಶ್ಲೇಷ ಬಲಿ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರಿಂದ ಸಪ್ತ ಜನ್ಮಗಳ ಸರ್ಪ ದೋಷಗಳು ನಿವಾರಣೆಯಾಗುತ್ತವೆ ಎಂದು ಪೂರ್ವದಿಂದ ಬಂದಿರುವಂತಹ ಪ್ರತೀತಿಯಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top