ದೇಹವನ್ನು ಹೈಡ್ರೇಟ್ ಆಗಿರಿಸಲು ಪದೇ ಪದೇ ನೀರು ಕುಡಿಬೇಕು ಎನ್ನುವುದು ಸತ್ಯ ಆದರೆ ಊಟದ ಮಧ್ಯೆ ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಊಟದ ಮಧ್ಯ ನೀರು ಕುಡಿಯುವವರು ತಪ್ಪದೆ ಈ ಮಾಹಿತಿ ನೋಡಿ
ಊಟದ ಮಧ್ಯೆ ನೀರು ಕುಡಿಯುವುದರಿಂದ ಕೆಲವರಿಗೆ ದೇಹದಲ್ಲಿ ತೂಕ ಹೆಚ್ಚಾಗಬಹುದು ಎಂದು ಹೇಳುತ್ತಾರೆ. ಅದು ನಿಜ ಕೂಡ. ಯಾಕೆಂದರೆ ಮೊದಲೇ ಹೇಳಿದಂತೆ ಕೊಬ್ಬಿನ ಅಂಶಗಳು ಜೀವ ಕೋಶಗಳಲ್ಲಿ ಶೇಖರಣೆ ಆಗುತ್ತಾ ಹೋಗುತ್ತದೆ.
ಆಹಾರ ಸೇವನೆ ವೇಳೆ ನೀರು ಕುಡಿದರೆ ಆಗ ಹೊಟ್ಟೆಯ ಅಗ್ನಿಯು ಮಂದವಾಗುವುದು ಮತ್ತು ಸಂಪೂರ್ಣ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಇದರ ಪರಿಣಾಮವಾಗಿ ಕರುಳಿನ ಗೋಡೆಗಳಲ್ಲಿ ಸೆಳೆತವು ಕಂಡುಬರುವುದು.
ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಲಿದ್ದರೆ ಆಗ ನೀವು ಊಟದ ಮಧ್ಯೆ ನೀರು ಕುಡಿಯುವುದನ್ನು ಕಡಿಮೆ ಮಾಡಬೇಕು. ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು. ಹೊಟ್ಟೆಯು ನೀರನ್ನು ಪೂರ್ತಿ ಆರ್ದ್ರವಾಗುವ ತನಕ ಹೀರಿಕೊಳ್ಳುವುದು
ಊಟದ ವೇಳೆ ನೀರು ಸೇವನೆ ಮಾಡಿದರೆ, ಅದರಿಂದ ಇನ್ಸುಲಿನ್ ಮಟ್ಟವು ಹೆಚ್ಚಾಗುವುದು. ಆಹಾರವನ್ನು ಸರಿಯಾಗಿ ಜೀರ್ಣಗೊಳಿಸಿ, ಅದರಿಂದ ಗ್ಲುಕೋಸ್ ಉತ್ಪತ್ತಿ ಮಾಡಲು ಹೊಟ್ಟೆಗೆ ಸಾಧ್ಯವಾಗದೆ ಇರುವ ಪರಿಣಾಮವಾಗಿ ಹೀಗೆ ಆಗುವುದು. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಕ್ಕೆ ತರಲು ಇನ್ಸುಲಿನ್ ಏರಿಕೆ ಆಗುವುದು
ಊಟಕ್ಕೆ ಅರ್ಧ ಗಂಟೆ ಮುಂಚೆ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದಲ್ಲಿ ತಾಪಮಾನವನ್ನು ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ. ಜೊತೆಗೆ ನಿಮ್ಮ ದೇಹದ ತೂಕ ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಆಗಬಲ್ಲದು. ಆರೋಗ್ಯಕರವಾದ ಮೆಟಬೋಲಿಸಂ ನಿಮ್ಮ ದಾಗುತ್ತದೆ. ಊಟದ ಮಧ್ಯೆ ಆಗಾಗ ನೀರು ಕುಡಿಯುವ ಅಭ್ಯಾಸವನ್ನು ಇದು ತಪ್ಪಿಸುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
