ಪಾಪ್ ಕಾರ್ನ್ ಎಂದರೆ ಹಲವರಿಗೆ ಅಚ್ಚು ಮೆಚ್ಚು . ಸಿನಿಮಾ ನೋಡುವಾಗ ಟಾಕೀಸ್ ಗಳಲ್ಲಿ ಕೈಯಲ್ಲಿ ಪಾಪ್ ಕಾರ್ನ್ ಇದ್ದರೆ ಏನೋ ಖುಷಿ. ಆದರೆ ಇತ್ತೀಚಿನ ದಿನಗಳಲ್ಲಿ ಮಲ್ಟಿಫ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ ದರಕ್ಕಿಂತ ಅಲ್ಲಿ ಸಿಗುವ ತಿನಿಸುಗಳ ಬೆಲೆಯೇ ಹೆಚ್ಚಾಗಿರುತ್ತದೆ. ಟಿಕೇಟ್ ದರಕ್ಕಿಂತ ಪಾಪ್ ಕಾರ್ನ್ ದರ ಏಕೆ ಹೆಚ್ಚಿರುತ್ತದೆ ಅದು ಮಲ್ಟಿಪ್ಲೆಕ್ಸ್ ಗಳಲ್ಲಿ ? ಇಲ್ಲಿದೆ ಉತ್ತರ
ಈ ವಿಚಾರದ ಬಗ್ಗೆ ಇದೀಗ ಪಿವಿಆರ್ ಮುಖ್ಯಸ್ಥ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಬಿಜ್ಲಿ ಅವರು ಮಾತನಾಡಿದ್ದು, ಚಿತ್ರಮಂದಿರಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆ ವಿರುದ್ಧ ಮಾತನಾಡುವ ಗ್ರಾಹಕರ ಆಕ್ರೋಶ ತಪ್ಪಲ್ಲ ಎಂದು ಒಪ್ಪಿಕೊಂಡರು. ಹಾಗು ಬೆಲೆ ಏರಿಕೆಯ ಕಾರಣವನ್ನು ತಿಳಿಸಿದರು.
ಸಿನಿಮಾ ಹಾಲ್ ಸಂಪೂರ್ಣ ಎಸಿ ಆಗಿರುವುದರಿಂದ ಹವಾನಿಯಂತ್ರಣದ ಅವಶ್ಯಕತೆಯೂ ಹೆಚ್ಚಾಗಿದೆ. ಮಲ್ಟಿಪ್ಲೆಕ್ಸ್‌ಗಳು ಹೆಚ್ಚಿನ ಪರದೆಗಳನ್ನು ಹೊಂದಿರುವುದರಿಂದ, ಬಹು ಪ್ರೊಜೆಕ್ಷನ್ ಕೊಠಡಿಗಳು ಮತ್ತು ಧ್ವನಿ ವ್ಯವಸ್ಥೆಗಳ ಅಗತ್ಯತೆಯಿಂದಾಗಿ ವೆಚ್ಚವು ‘4 ರಿಂದ 6 ಪಟ್ಟು’ ಹೆಚ್ಚಾಗುತ್ತದೆ ಎಂದು ಬಿಜ್ಲಿ ಹೇಳಿದರು.
ಕಾರ್ಯಾಚರಣೆಯ ವೆಚ್ಚವನ್ನು ಭರಿಸುವ ಸಲುವಾಗಿ, ಮಲ್ಟಿಪ್ಲೆಕ್ಸ್‌ನಲ್ಲಿ ತಿಂಡಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುವುದು. ಅಲ್ಲದೆ, ಆಹಾರ ಮತ್ತು ತಂಪು ಪಾನೀಯ ವ್ಯವಹಾರವು ಈಗ ದೇಶದಲ್ಲಿ 1,500 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಇದೇ ಸಂದರ್ಭದಲ್ಲಿ ಪಿವಿಆರ್ ಮುಖ್ಯಸ್ಥ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಬಿಜ್ಲಿ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
