ತೆಲುಗು ಚಿತ್ರರಂಗದ ನಟ ವಿಶಾಲ್ ಅವರ ಬದುಕಿನಲ್ಲಿ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇದೆ. ಇತ್ತೀಚಿಗೆ ಒಂದು ಅವಘಡದಿಂದ ಪಾರಾದ ನಟ ಇದೀಗ ಮತ್ತೊಂದು ಅವಘಡದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸ್ವಲ್ಪ ಮಿಸ್ ಆಗಿದ್ದರು ಇವರ ಜೀವಕ್ಕೆ ಆಪತ್ತು ಉಂಟಾಗುತ್ತಿತ್ತು.
ಇತ್ತೀಚೆಗೆ ಚೆನ್ನೈನ ಸ್ಟುಡಿಯೋದರಲ್ಲಿ `ಮಾರ್ಕ್ ಆ್ಯಂಟನಿ’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಸುಮಾರು 100 ಸಾಹಸ ಕಲಾವಿದರು ಇರುವ ಸೆಟ್‌ನಲ್ಲಿ ಫೈಟಿಂಗ್ ಸೀನ್ ಚಿತ್ರೀಕರಣ ಮಾಡಲಾಗಿತ್ತು. ಈ ವೇಳೆ ಲಾರಿ ಚಾಲಕ ಟ್ರಕ್ ನಿಯಂತ್ರಣ ತಪ್ಪಿ ನಿಲ್ಲಬೇಕಾದ ಜಗಲದಲ್ಲಿ ನಿಲ್ಲದೆ ಮುಂದೆ ಸಾಗಿದೆ. ಅದೃಷ್ಟವಶಾತ್ ನೆಲದ ಮೇಲೆ ಮಲಗಿದ್ದ ವಿಶಾಲ್ ಮೇಲೆ ಹರಿಯದ ಟ್ರಕ್ ಇವರ ಪಕ್ಕ ಸಾಗಿದ್ದು, ಕೂಡಲೆಯ ಅಂತರದಲ್ಲಿ ವಿಶಾಲ್ ಪಾರಾಗಿದ್ದಾರೆ. ಈ ಕುರಿತು ಅವರು ಟ್ವೀಟ್ ಸಹ ಮಾಡಿದ್ದಾರೆ.
Jus missed my life in a matter of few seconds and few inches, Thanks to the Almighty
Numb to this incident back on my feet and back to shoot, GB pic.twitter.com/bL7sbc9dOu
— Vishal (@VishalKOfficial) February 22, 2023
‘ನಿಜಕ್ಕೂ ದೇವರಿಗೆ ಥ್ಯಾಂಕ್ಸ್ ಹೇಳಬೇಕು. ಅಪಘಾತ ಹೇಗಾಯ್ತು ಅಂತ ಗೊತ್ತಾಗುತ್ತಿಲ್ಲ, ಶೂಟಿಂಗ್ ಪ್ಲ್ಯಾನ್ ಮಾಡಿರುವ ಪ್ರಕಾರ ಟ್ರಕ್ ನೇರವಾಗಿ ಹೋಗಬೇಕಿತ್ತು ಆದರೆ ನಿಯಂತ್ರಣ ತಪ್ಪಿ ಪಕ್ಕಕ್ಕೆ ಹರಿದಿದೆ. ಒಂದ ವೇಳೆ ನೇರವಾಗಿ ಬಂದಿದ್ದರೆ ಖಂಡಿತಾ ವಿಶಾಲ್ ಮತ್ತು ನಾನು ಇಂದು ಈ ಘಟನೆ ಬಗ್ಗೆ ಟ್ವೀಟ್ ಮಾಡುತ್ತಿರಲಿಲ್ಲ. ದೇವರೇ ನಮ್ಮನ್ನು ಕಾಪಾಡಿರುವುದು’ ಎಂದು ಮಾರ್ಕ್ ಆಂಟನಿ ನಿರ್ದೇಶಕ ಎಸ್‌ಜೆ ಸೂರ್ಯ ಟ್ವೀಟ್ ಮಾಡಿದ್ದಾರೆ.
ಕೆಲವೇ ಸೆಕೆಂಡ್‌ಗಳಲ್ಲಿ ಕೆಲವೇ ಇಂಚ್‌ಗಳಲ್ಲಿ ನನ್ನ ಪ್ರಾಣ ಕಳೆದುಕೊಳ್ಳುತ್ತಿದೆ. ದೇವರ ದಯೇ ಕ್ಷೇಮವಾಗಿರುವೆ. ಈ ಘಟನೆಯಿಂದ ಕೊಂಚ ಶಾಕ್ ಆಗಿರುವೆ ಆದರೂ ಚಿತ್ರೀಕರಣ ಮತ್ತೆ ಶುರು ಮಾಡಿರುವೆ’ ಎಂದು ವಿಶಾಲ್ ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
