ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೈವೇ ನಲ್ಲಿ ಇನ್ನುಮುಂದೆ ಟೋಲ್ ಸಂಗ್ರಹಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ತಿಳಿಸಿದ್ದರು. ಆದರೆ ಇದೀಗ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣವಾಗುವವರೆಗೆ ಟೋಲ್ ವಸೂಲಾತಿಯನ್ನು ಮುಂದೂಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಈ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಾಮಾಜಿಕ ಜಾಲತಾಣದಲ್ಲಿ ಸರ್ವಿಸ್ ರಸ್ತೆ ಪೂರ್ಣಗೊಳ್ಳುವರೆಗೂ ಟೋಲ್ ಸಂಗ್ರಹಣೆ ಸ್ವೀಕರಿಸುವುದಿಲ್ಲ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
Toll collection, Deferred till the completion of service roads. pic.twitter.com/kDWIMvt5y9
— Pratap Simha (@mepratap) February 27, 2023
ಇತ್ತೀಚಿಗೆ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣವಾಗದಿದ್ದರು ಟೋಲ್ ಸಂಗ್ರಹಣೆ ಮಾಡುತ್ತೇವೆ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಇದಕ್ಕೆ ಜನರು ತಮ್ಮ ಆಕ್ರೋಶನವನ್ನು ಹೊರಹಾಕುತ್ತಿದ್ದರು. ಆದರೆ ಇದೀಗ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಟೋಲ್ ಸ್ವೀಕರಿಸುವುದಿಲ್ಲ ಎಂದು ಹೇಳಿರುವುದುರರಿಂದ ಜನರು ಯಾವುದೇ ಟೋಲ್ ಪಾವತಿಸದೇ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೈವೇ ನಲ್ಲಿ ಓಡಾಡಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
