ಕೆಲವೊಂದು ವಿಚಿತ್ರ ದೇವಾಲಯಗಳಿವೆ ಅದೂ ಕೂಡ ಭಾರತದಲ್ಲೇ ಇದೆ. ದೇವಸ್ಥಾನಗಳಲ್ಲಿ ಪ್ರಮುಖವಾಗಿ ಕಪ್ಪೆ, ಸೊಳ್ಳೆ, ಇಲಿ, ಬಾವಲಿಗಳನ್ನು ಪೂಜಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಬಾವಲಿ ಎಂದರೆ ಅಪಶಕುನದ ಸಂಕೇತ ಎನ್ನುವ ಭಾವನೆಯಿದೆ. ಆದರೆ ವಿಶ್ವದ ಹಲವಾರು ಪ್ರದೇಶಗಳಲ್ಲಿ ಬಾವಲಿಯನ್ನು ದೇವರೆಂದು ಪೂಜಿಸುತ್ತಾರೆಂದರೆ ನೀವು ನಂಬುತ್ತೀರಾ..?
ಬೆಟ್ ಕೇವ್ ನ್ನು ನಾವು ಬಲಿ ಎನ್ನುವ ಪ್ರದೇಶದಲ್ಲಿ ನೋಡಬಹುದು. ಇದು ಬಾವಲಿಗಳು ವಾಸಿಸುವ ಗುಹೆಯಾಗಿದೆ. ಇಲ್ಲಿ ಸಾವಿರಾರು ಬಾವಲಿಗಳಿವೆ. ಇಲ್ಲಿನ ಸ್ಥಳೀಯ ಜನರು ಹೇಳುವಂತೆ ಈ ಗುಹೆಯ ಕೆಳಗೆ ನದಿಯೊಂದು ಹರಿಯುತ್ತದೆಯಂತೆ. ಈ ನದಿಯ ನೀರನ್ನು ಗಾಯಗಳನ್ನು ಗುಣಪಡಿಸಲು ಉಪಯೋಗಿಸುತ್ತಾರಂತೆ. ಈ ಪ್ರದೇಶದಲ್ಲಿ ಬಾವಲಿಯನ್ನು ದೇವರಂತೆ ಪೂಜಿಸಲಾಗುತ್ತದೆ. ಇದೊಂದು ಪ್ರವಾಸಿಗರ ತಾಣ. ಯಾವಾಗಲೂ ಇಲ್ಲಿ ಪ್ರವಾಸಿಗಳು ಭೇಟಿ ನೀಡುತ್ತಿರುತ್ತಾರೆ. ಬಾವಲಿಗಳಿಗೆ ಹಗಲಿನಲ್ಲಿ ಕಣ್ಣು ಕಾಣಿಸದಿರುವ ಕಾರಣ ಈ ಬಾವಲಿಗಳು ಹಗಲಿನಲ್ಲಿ ಗುಹೆಯೊಳಗೆ ಇರುತ್ತದೆ ಆದರೆ ಇವುಗಳು ಸೂರ್ಯ ಮುಳುಗುತ್ತಿದ್ದಂತೆ ಗುಹೆಯಿಂದ ಹೊರಗೆ ಬಂದು ಸುತ್ತಮುತ್ತಲಿನ ಸ್ಥಳಗಳಲ್ಲಿ ಸಂಚಾರ ನಡೆಸುತ್ತವಂತೆ.
ಕೆಲವೆಡೆ ಬಾವಲಿಯನ್ನು ದುಷ್ಟಶಕ್ತಿಗಳಿಗೆ, ಹಲವವಾರು ರೋಗಗಳನ್ನುಂಟು ಮಾಡುವ ಅನಿಷ್ಟವೆಂದು ಪರಿಗಣಿಸಿದರೆ, ಪಾಟ್ನಾ ಮತ್ತು ಮುಝಾಫರ್ ಪುರದ ನಡುವೆ ಇರುವ ಬಿಹಾರದ ವೈಶಾಲಿ ಜಿಲ್ಲೆಯಲ್ಲಿನ ಜನರು ಬಾವಲಿಗಳಿಗಾಗಿ ದೇವಸ್ಥಾನವನ್ನು ನಿರ್ಮಿಸಿ ಅಲ್ಲಿ ಬಾವಲಿಗಳನ್ನು ಗ್ರಾಮ ದೇವತೆಯೆಂದು ಪೂಜಿಸಲಾಗುತ್ತಿದೆ. ಅಲ್ಲಿನ ಸ್ಥಳೀಯರ ಪ್ರಕಾರ ಬಾವಲಿಗಳು ವಾಸಿಸುವ ಸ್ಥಳದಲ್ಲಿ ಯಾವುದೇ ರೀತಿಯ ಸಮಸ್ಯೆ ಬಾರದೆಂದು ಅವರು ನಂಬುತ್ತಾರೆ. ಬಾವಲಿಗಳಿಂದ ಜನಪ್ರಿಯಗೊಂಡ ಈ ಪ್ರದೇಶವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ತನ್ನತ್ತ ಆಕರ್ಷಿತಗೊಳಿಸುತ್ತದೆ. ಇಂದಿಗೂ ಕೂಡ ಆ ಗ್ರಾಮದವರು ತಮ್ಮ ಗ್ರಾಮವನ್ನು ಬಾವಲಿಗಳೇ ರಕ್ಷಿಸುತ್ತಿದೆ ಎಂದು ನಂಬಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
