ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸುದ್ದಿ ಬಹಳ ವ್ಯಾಪಕವಾಗಿ ಹರಿದಾಡುತ್ತಿತ್ತು. ತೆಲುಗಿನ ಖ್ಯಾತ ನಟ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ ಯಾವ ದೇಶದಲ್ಲಿ ಆಗಲಿದೆ ಎಂಬುದರ ಕುರಿತು. ಅಮೇರಿಕಾದಲ್ಲಿ ಇವರ ಮೊದಲ ಮಗುವಿನ ಜನನವಾಗಲಿದೆ ಎಂಬ ಉಹಾಪೋಹಗಳಿತ್ತು. ಇದೀಗ ಇದಕ್ಕೆ ರಾಮ್ ಚರಣ್ ಪತ್ನಿ ಉಪಾಸನಾ ಉತ್ತರಿಸಿದ್ದಾರೆ.
ಈ ಕುರಿತು ಮಾತನಾಡಿದ ಉಪಾಸನಾ ” ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಈ ರೀತಿ ಯಾಕೆ ಹಬ್ಬಿತೋ ನನಗೆ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ ಭಾರತದಲ್ಲೇ ನಮ್ಮ ಮಗು ಜನಿಸಲಿದೆ ” ಎಂದು ಹೇಳಿದ್ದಾರೆ.
ಗೊಂದಲಕ್ಕೆ ಕಾರಣವೇನು?
ಇತ್ತೀಚಿಗೆ ಹಾಲಿವುಡ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ರಾಮ್ ಚರಣ್ ಅಮೆರಿಕಾಗೆ ಹೋಗಿದ್ದರು. ಈ ವೇಳೆ ಸಂದರ್ಶನ ನೀಡುವ ಸಂಧರ್ಭದಲ್ಲಿ ನನ್ನ ಪತ್ನಿಯ ಹೆರಿಗೆಗೆ ಸಿದ್ದ ಮಾಡಿಕೊಳ್ಳಿ ಎಂದು ಅಮೆರಿಕಾದ ವೈದ್ಯರೊಬ್ಬರಿಗೆ ಹೇಳಿದರು. ಹೀಗಾಗಿ ಉಪಾಸನಾ ಅಮೇರಿಕಾದಲ್ಲಿ ತಮ್ಮ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿತ್ತು. ಇದೀಗ ಇವೆಲ್ಲ ವದಂತಿಗಳಿಗೆ ಉಪಾಸನಾ ಪ್ರತಿಕ್ರಿಯೆ ನೀಡಿರುವುದರಿಂದ ಈ ವದಂತಿಗಳು ಇದೀಗ ತಣ್ಣಗಾಗಿದೆ ಎಂದು ಹೇಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
