ಬೇಸಿಗೆ ಬರುತ್ತಿದ್ದಂತೆ ಸೊಳ್ಳೆಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ಅವುಗಳನ್ನು ಮುಂಚಿತವಾಗಿ ಎದುರಿಸಲು ಸಿದ್ಧರಾಗಿರಬೇಕು. ಈ ದಿನಗಳಲ್ಲಿ ನೀವು ಬಳಸಬಹುದಾದ ಹಲವಾರು ವಿಧದ ಸೊಳ್ಳೆ ನಿವಾರಕಗಳನ್ನು ಹುಡುಕುತ್ತಿದ್ದೇರೆ ? ಬಾವಲಿಯಿಂದ ಸೊಳ್ಳೆ ನಾಶವಾಗುತ್ತದೆ ! ಇಲ್ಲಿದೆ ಒಂದು ರೋಚಕ ವಿಷಯ
ದೊಡ್ಡ ಬಾವಲಿಗಳು ಹಣ್ಣು ಹಾಗೂ ಹೂವಲ್ಲಿನ ಮಕರಂದ ಹೀರಿ ಜೀವಿಸುತ್ತವೆ. ಗಾತ್ರದಲ್ಲಿ ಚಿಕ್ಕದಾಗಿರುವ ಬಾವಲಿಗಳು ಕ್ರಿಮಿಕೀಟ ಹಾಗೂ ಹುಳುಗಳನ್ನು ತಿಂದು ಜೀವಿಸುತ್ತವೆ. ಗಂಟೆಗೆ ಒಂದು ಸಾವಿರದಿಂದ ಎರಡು ಸಾವಿರ ಸೊಳ್ಳೆಗಳನ್ನು ತಿನ್ನುತ್ತದೆ. ತೊಲೆಹಕ್ಕಿ, ಕಂಬಳಿ ಹುಳು ಸೇರಿದಂತೆ ಇತರೆ ಕೀಟಗಳನ್ನು ತಿನ್ನುತ್ತದೆ.
ಕೀಟಗಳನ್ನು ತಿನ್ನುವ ಸಣ್ಣ ಗಾತ್ರದ ಬಾವಲಿಗಳು ಒಂದು ಗಂಟೆಗೆ ಸುಮಾರು ಸಾವಿರ ಸೊಳ್ಳೆ ಹಾಗೂ ಇತರೆ ಕೀಟಗಳನ್ನು ತಿನ್ನುತ್ತವೆ. ಇದರಿಂದ ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳಿಂದ ಬರುವ ರೋಗಗಳೂ ನಿಯಂತ್ರಣದಲ್ಲಿರುತ್ತವೆ. ರೈತನ ಬೆಳೆಗೆ ಕಾಡುವ ಕೊರಕು ಹುಳು, ರಾತ್ರಿ ವೇಳೆ ಸಂಚರಿಸುವ ಚಿಟ್ಟೆ ಅಥವಾ ಇನ್ನೂ ಲಾರ್ವಾ ಹಂತದಲ್ಲಿರುವ ಚಿಟ್ಟೆಗಳನ್ನು ಕೊಂದು ರೈತನ ಬೆಳೆಗೆ ಆಗುವ ಹಾನಿಯನ್ನು ತಪ್ಪಿಸುತ್ತವೆ.
ನಿತ್ಯ ಸಂಜೆ 6ರಿಂದ 8 ಗಂಟೆ ಒಳಗೆ ಆಹಾರಕ್ಕೆ ಗೂಡಿನಿಂದ ಹೊರಡುವ ಬಾವಲಿಗಳು ರಾತ್ರಿ 12ರವರೆಗೆ ಹಣ್ಣು ತಿನ್ನುತ್ತವೆ. ನಂತರ ವಿಶ್ರಾಂತಿ ಮಾಡಿ ಮತ್ತೆ 3 ಗಂಟೆಗೆ ಹುಡುಕಾಟ ಆರಂಭಿಸಿ ಬೆಳಿಗ್ಗೆ ಸುಮಾರು ಆರು ಗಂಟೆಗೆ ಗೂಡು ಸೇರುತ್ತವೆ.
ಸಾಮಾನ್ಯವಾಗಿ ಚಿಕ್ಕ ಬಾವಲಿಗಳು ಅಂದಾಜು 8 ರಿಂದ 10 ವರ್ಷ ಬದುಕಿದರೆ, ದೊಡ್ಡ ಬಾವಲಿಗಳು 30–40 ವರ್ಷ ಬದುಕಿರುವ ನಿದರ್ಶನಗಳಿವೆ. ಬಂಡೆ, ಪಾಳು ಬಿದ್ದ ಕೋಟೆ, ಮನೆಗಳಲ್ಲಿ ಕೀಟಗಳನ್ನು ತಿನ್ನುವ ಬಾವಲಿಗಳು ಜೀವಿಸುತ್ತವೆ.
ಸೂರ್ಯ ಮುಳುಗುವ ಸಮಯ. ವಿಶ್ರಾಂತಿ ಮುಗಿಸಿ ವಾಸಸ್ಥಾನದಿಂದ ಹೊರ ಬೀಳುವ ಬಾವಲಿಗಳು. ಮುಸ್ಸಂಜೆ ಆಗುವುದನ್ನೇ ಕಾಯುವ ಈ ಹಾರುವ ಸಸ್ತನಿಗಳು ತಮ್ಮ ಗುಂಪಿನೊಂದಿಗೆ ತುತ್ತಿನ ಬುತ್ತಿ ತುಂಬಿಕೊಳ್ಳಲು ಹೊರಟೇ ಬಿಡುತ್ತವೆ. ಬಾವಲಿಗಳು ಸದಾ ಗುಂಪಿನಲ್ಲಿ ವಾಸಿಸುತ್ತವೆ. ಪಾಳುಬಿದ್ದ ಮನೆ, ಗುಹೆ, ಹಳೇ ಕೋಟೆ, ಕಲ್ಲುಬಂಡೆಗಳು, ಬಂಡೆಗಳ ನಡುವಿನ ಕೊರಕಲು ಪ್ರದೇಶ, ಗೋಡೆಗಳ ನಡುವಿನ ಕಿರಿದಾದ ಸ್ಥಳಗಳು, ಪೊಟರೆ, ಒಣಗಿದ ಮರಗಳೇ ಇವುಗಳ ವಾಸಸ್ಥಾನ.
ಬಾವಲಿಗಳು ವರ್ಷಕ್ಕೆ ಒಂದು ಬಾರಿ ಮಾತ್ರ ಮರಿ ಹಾಕುತ್ತವೆ. ಅದರಲ್ಲೂ ಒಂದೇ ಮರಿಗೆ ಜನ್ಮ ನೀಡಿ, ಅದು ಭಾರವೆನಿಸುವವರೆಗೂ ಅದನ್ನು ಅಪ್ಪಿಕೊಂಡೇ ಜೀವನ ಸಾಗಿಸುತ್ತವೆ. ಆಹಾರ ಹುಡುಕಲು ಹೊರಟಾಗಲೂ ಅದನ್ನು ಎತ್ತಿಕೊಂಡೇ ಹೋಗುತ್ತದೆ.
ಒಮ್ಮೆ ಮರಿ ಭಾರವೆನಿಸಿದಾಗ ತಮ್ಮ ಗುಂಪಿನಲ್ಲೇ ಇರುವ ಮರಿಗಳನ್ನು ಒಂದೆಡೆ ಸೇರಿಸಿ ನೋಡಿಕೊಳ್ಳುತ್ತವೆ. ಇಲ್ಲಿಯೂ ಗಂಡು ಬಾವಲಿ ಬೆದೆಗೆ ಬಂದಾಗ ಹೆಣ್ಣನ್ನು ಆಕರ್ಷಿಸಲು ನಾನಾ ರೀತಿಯ ಕಸರತ್ತನ್ನು ಮಾಡುತ್ತದೆ. ಕೆಲವೊಂದು ಪ್ರಭೇದಗಳಲ್ಲಿ ಬೆದೆಗೆ ಬಂದಾಗ ಗಂಡು ಮತ್ತು ಹೆಣ್ಣು ಬಾವಲಿಗಳೆರಡರ ದೇಹದ ಬಣ್ಣ ಬದಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
