fbpx
ಸಮಾಚಾರ

ಭಾರತದ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ ಯಾಕೆ ಗೊತ್ತಾ..?

ಭಾರತದಲ್ಲಿ ಶಬರಿಮಲೆಯನಂತಹ ದೇವಸ್ಥಾನ ಮಹಿಳೆಯರ ಪ್ರವೇಶ ನಿಷಿದ್ಧವಾಗಿರೋದು ಎಲ್ಲರಿಗೂ ತಿಳಿದಿರುವ ವಿಚಾರ.. ಆದರೆ ದೇಶದಲ್ಲಿ ಪುರುಷರಿಗೂ ಪ್ರವೇಶವಿರದ ದೇವಾಲಯಗಳು ಇವೆ ಎಂಬುವುದು ಗೊತ್ತೆ ? ಪುರುಷರಿಗೆ ನಿಷೇಧವಿರುವ ದೇವಾಲಯಗಳು ಇವು

ಕಾಮಾಕ್ಯ ದೇವಸ್ಥಾನ ಅಸ್ಸಾಂ: ದೇಶದ 51 ಶಕ್ತಿಪೀಠಗಳಲ್ಲಿ ಒಂದಾದ ಗುವಾಹಟಿಯ ಕಾಮಾಕ್ಯ ದೇವಸ್ಥಾನದ ಸಂಪ್ರದಾಯಗಳಿಗೆ ವಿಶಿಷ್ಟವಾಗಿದೆ. ಆಷಾಢ ಮಾಸದ ಮೂರು ದಿನ ದೇವಾಲಯ ಮುಚ್ಚಿರುತ್ತದೆ. ಈ ಸಮಯದಲ್ಲಿ ದೇವತೆ ಋತುಮತಿಯಾಗುತ್ತಾಳೆ ಎಂಬ ನಂಬಿಕೆಯಿಂದ ಆಷಾಢ ತಿಂಗಳಲ್ಲಿ ಮೂರು ದಿನ ಮುಚ್ಚಲಾಗುತ್ತದೆಯಂತೆ. ಆಗ ಪುರುಷರಿಗೆ ಪ್ರವೇಶ ನೀಡುವುದಿಲ್ಲ. ಈ ದೇವಾಲಯಕ್ಕೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಕೂಡ ಹೋಗಬಹುದು ಎಂಬುದು ಇನ್ನೊಂದು ವಿಶೇಷವಾಗಿದೆ.

ಮಾತಾ ದೇವಸ್ಥಾನ, ಬಿಹಾರ: ಬಿಹಾರದ ಮುಜಾಫರ್ಪುರ್ ದಲ್ಲಿರುವ ಈ ದೇವಸ್ಥಾನದಲ್ಲಿ ವಿಶೇಷ ಅವಧಿಯ ಸಂದರ್ಭ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ಅವಕಾಶ ಇದೆ.ಈ ಸಮಯದಲ್ಲಿ ದೇವಸ್ತಾನದ ಅರ್ಚಕರು ಸಹ ದೇವಸ್ಥಾನದ ಆವರಣವನ್ನು ಪ್ರವೇಶಿಸುವಂತಿಲ್ಲ.

ಕನ್ಯಾಕುಮಾರಿ ದೇವಾಲಯ: ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಸ್ಥಾನದಲ್ಲಿ ಭಗವತಿ ದುರ್ಗೆಯ ಗುಡಿಯಿದೆ. ದೇವಸ್ಥಾನದ ಗೇಟ್ ವರೆಗೆ ಅವಿವಾಹಿತ ಪುರುಷರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ದೇವಸ್ಥಾನದ ಆವರಣಕ್ಕೆ ವಿವಾಹಿತ ಪುರುಷರು ಹೋಗಬಾರದು. ಪಾರ್ವತಿ ತನ್ನ ಗಂಡ ಶಿವನನ್ನು ಪಡೆಯಲು ಇದೇ ಸ್ಥಳದಲ್ಲಿ ಕುಳಿತು ಘೋರ ತಪಸ್ಸು ಮಾಡಿದಳು ಎಂಬ ಪ್ರತೀತಿಯಿದೆ.

ಅಟ್ಟುಕಾಲು ಭಗವತಿ ದೇವಸ್ಥಾನ, ಕೇರಳ: ದೇವಸ್ಥಾನದಲ್ಲಿ  ಪೊಂಗಲ್ ಹಬ್ಬದ ಸಂದರ್ಭದಲ್ಲಿ  ಲಕ್ಷಾಂತರ ಮಹಿಳೆಯರು  ಇಲ್ಲಿ ಬಂದು ಸೇರುತ್ತಾರೆ. ಇದು ಧಾರ್ಮಿಕ ಚಟುವಟಿಕೆಗಾಗಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಮಾವೇಶವೊಂದನ್ನು ಗಿನ್ನಿಸ ದಾಖಲೆಯ ಪುಸ್ತಕದಲ್ಲಿ ಸೇರಿಗೆ.ಇದು  10 ದಿನಗಳ ಕಾಲ ನೆಡೆಯಲಿರುವ  ಈ ಉತ್ಸವದ ಅವಧಿಯಲ್ಲಿ ಪುರುಷರಿಗೆ ದೇವಸ್ಥಾನದ  ಒಳಗಡೆ ಪ್ರವೇಶವನ್ನು ನಿಷೇಧಿಸಲಾಗಿದೆ.

ವಿಶಾಖಪಟ್ನಂ ನ ಕಾಮಾಕ್ಯ ದೇವಾಲಯ: ವಿಶಾಖಪಟ್ಟಣದ ಕಾಮಾಕ್ಯ ಪೀಠ ಕೂಡ ತಿಂಗಳಲ್ಲಿ ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನೀಡುವುದಿಲ್ಲ. ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅವರ ಮನೆಯ ಪುರುಷರು ಈ ದೇವಾಲಯವನ್ನು ಪ್ರವೇಶಿಸಬಾರದು ಎಂಬ ಸಾಂಪ್ರದಾಯಿಕ ನಿಯಮವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top