ಇತ್ತೀಚಿನ ದಿನಗಳಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರ ಹೆಚ್ಚಿನ ಜನರು ಇನ್ಸ್ಟಾಗ್ರಾಮ್ ಬಳಸುತ್ತಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ಗಳಲ್ಲಿ ರೀಲ್ಸ್ ಅಪ್ಲೋಡ್ ಮಾಡುವ ಮೂಲಕ ಹೆಚ್ಚಿನ ಫಾಲೋವರ್ಸ್ ಗಳನ್ನೂ ಸಹ ಸಂಪಾದಿಸುತ್ತಿದ್ದಾರೆ. ಇದೀಗ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿ ಫೇಮಸ್ ಆದ ಒಬ್ಬ ವ್ಯಕ್ತಿ ಅಂದರೆ ಅದು ದೀಪಕ್ ಗೌಡ.
ಈತ ಇನ್ಸ್ಟಾಗ್ರಾಮ್ ನಲ್ಲಿ ಸಾವಿರಾರು ಫಾಲೋವರ್ಸ್ ಗಳನ್ನೂ ಹೊಂದಿದ್ದಾನೆ. ಪಟಪಟನೆ ಮಾತನಾಡುತ್ತಾ, ತಾನು ಮಾಡುವ ಪ್ರತಿಯೊಂದು ಕೆಲಸವನ್ನು ಹುಚ್ಚನಂತೆ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಾನೆ. ಹೀಗಾಗಿ ಈತನಿಗೆ ಹಲವಾರು ಜನ ಫಾಲೋವರ್ಸ್ ಗಳಿದ್ದಾರೆ ಮತ್ತು ಈತನ ಹುಚ್ಚಾಟಕ್ಕೆ ನಕ್ಕಿ ನೆಗೆಟಿವ್ ಕಾಮೆಂಟ್ ಕೊಟ್ಟಿರುವುದು ಉಂಟು.
ಆದರೆ ಇದೀಗ ಬಂದಿರುವ ಒಂದು ಸುದ್ದಿ ಎಂದರೆ ಇದೀಗ ದೀಪಕ್ ಗೌಡ ಪೋಲೀಸರ ಅತಿಥಿಯಾಗಿದ್ದಾನೆ. ಅದು ಕೂಡ ಈತ ಮಾಡಿದ ಒಂದು ರೀಲ್ಸ್ ಗಾಗಿ. ಇತ್ತೀಚಿಗೆ ದೀಪಕ್ ಗೌಡ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಮೇಲೆ ನೃತ್ಯ ಮಾಡಿದ್ದ. ಇದರ ಕುರಿತು ಈತ ವಿಡಿಯೋವನ್ನು ಸಹ ಹಂಚಿಕೊಂಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು.
#Hampi police are looking for a youth (in video) for violating norms of #ASI and #WorldHeritageSite Case booked against the youth. Locals demand additional security personnel @NewIndianXpress @XpressBengaluru @KannadaPrabha @KiranTNIE1 @NammaBengaluroo @NammaKalyana pic.twitter.com/RLFg5DxgQT
— Amit Upadhye (@Amitsen_TNIE) February 27, 2023
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೀಪಕ್ ಗೌಡ ವಿರುದ್ಧ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ದೀಪಕ್ ಗೌಡ ಬಂಧನವಾಗಿದೆ.
ಹಂಪಿ ವಿಶ್ವಪರಂಪರೆ ತಾಣವಾಗಿದೆ. ಪ್ರವಾಸಿಗರು ಈ ಸ್ಮಾರಕಗಳನ್ನು ಹಾನಿಗೊಳಿಸುವುದು, ದುರುಪಯೋಗಪಡಿಸಿಕೊಳ್ಳುವುದು ಅಪರಾಧವಾಗಿದೆ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಂರಕ್ಷಿತ ಸ್ಮಾರಕಗಳ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ 2 ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
