ಆಧ್ಯಾತ್ಮದ ವಿಚಾರದಲ್ಲಿ ಸ್ನಾನಕ್ಕೆ ಮಹತ್ವವಾದ ಸಂಪ್ರದಾಯವಿದೆ ಹಾಗೂ ಶಾಸ್ತ್ರನೀತಿ ಇದೆ.
ಸ್ನಾನದಲ್ಲಿ ಮೂರು ವಿಧ ಅದರಲ್ಲಿ ಮೊದಲನೇಯದಾಗಿ
ಶಿರಸ್ನಾನ : ಶಿರಸ್ನಾನ ಅಂದರೆ ತಲೆಯಿಂದ ಆರಂಭವನ್ನ ಮಾಡಿ ಜುಟ್ಟನ್ನ ತೊಳೆದು ಮಾಡುವ ಸ್ನಾನಕ್ಕೆ ಶಿರಸ್ನಾನ ಎನ್ನುತ್ತೆವೆ. ಎರಡನೇ ಸ್ನಾನ
ಮುಖಸ್ನಾನ: ಮುಖಸ್ನಾನ ಅಂದರೆ ಮುಖವನ್ನು ತೊಳೆದು ಸಂಪೂರ್ಣ ಮೈಯನ್ನು ತೊಳೆದುಕೊಳ್ಳುವುದಕ್ಕೆ ಮುಖಸ್ನಾನ ಎಂದು ಕರೆಯುತ್ತಾರೆ.
ಮೂರನೇಯ ಸ್ನಾನ
ಕಂಠ ಸ್ನಾನ: ಕಂಠ ಸ್ನಾನ ಅಂದರೆ ಕುತ್ತಿಗೆ ಭಾಗದಿಂದ ಆರಂಭವನ್ನು ಮಾಡಿ ಸಂಪೂರ್ಣ ಮೈಯನ್ನು ತೊಳೆಯುದಕ್ಕೆ ಕಂಠಸ್ನಾನ ಅಂತ ಕರೆಯುತ್ತಾರೆ.
7 ವಿಧದ ಆಧ್ಯಾತ್ಮಿಕ ಸ್ನಾನ
1 ಮಂತ್ರ ಸ್ನಾನ
2 ಭೌಮ ಸ್ನಾನ
3 ಆಗ್ನೇಯಸ್ನಾನ
4 ವಾಯುವ್ಯಸ್ನಾನ
5 ದಿವ್ಯ ಸ್ನಾನ
6 ವರುಣ ಸ್ನಾನ
7 ಮಾನಸ ಸ್ನಾನ
ನಿತ್ಯ ಸ್ನಾನ :
ಒಂದು ನದಿಯಲ್ಲಿ ಸ್ನಾನ ಮಾಡುವಾಗ ಬೇರೆ ನದಿಯ ಸ್ಮರಣೆ ಸಲ್ಲದು , ಹಾಗೂ ಕೆರೆ, ಹೊಳೆಗಳು ಇಲ್ಲದ ಪಕ್ಷದಲ್ಲಿ ಮನೆಯಲ್ಲಿ ಬಿಸಿನೀರಿನ ಸ್ನಾನ ಮಾಡಬೇಕು, ತಣ್ಣೀರಿನಿಂದ ಮಾಡಬಾರದು. ಶುರುವಿಗೆ ಒಂದು ಪಾತ್ರೆಯಲ್ಲಿ ತಣ್ಣೀರು ಹಿಡಿದು ಅದರ ಮೇಲೆ ಬಿಸಿನೀರು ಹಾಕಿ ಕೆಲವು ಮಂತ್ರಗಳಿಂದ ಅಭಿಮಂತ್ರಿಸಿ ಪಠಿಸುತ್ತ ಸ್ನಾನ ಮಾಡಬೇಕು. ಹೀಗೆ ಸ್ನಾನ ಮಾಡಲು ಉಪಯೋಗಿಸಿದ ವಸ್ತ್ರದಿಂದ ಅಥವಾ ಬರಿಗೈಯಿಂದ ಮೈಯನ್ನು ಒರೆಸಬಾರದು, ಒಣಗಿದ ಶುಭ್ರವಾದ ಹತ್ತಿಯ ಬಟ್ಟೆಯಿಂದ ಒರೆಸಬೇಕು. ಹೀಗೆ ನಿತ್ಯದ ಪ್ರಾತಃಕಾಲದಲ್ಲಿ ಸ್ನಾನ ಮಾಡಬೇಕು.
ನೈಮಿತ್ತಿಕ ಸ್ನಾನ
ಸೂತಕ, ಹಡೆದವಳು, ಶವ ಇತ್ಯಾದಿಗಳ ಸ್ಪರ್ಶವಾದರೆ ಸ್ನಾನಮಾಡಬೇಕು. ಈ ನೈಮಿತ್ತಿಕ ಸ್ನಾನವನ್ನು ರಾತ್ರಿಯಲ್ಲಾದರೂ ಸಹ ಮಾಡಬೇಕು. ಹಾಗೂ ನೈಮಿತ್ತಿಕಸ್ನಾನವನ್ನು ಬಿಸಿನೀರಿನಿಂದ ಮಾಡಬಾರದು ತಣ್ಣೀರಿಂದಲೇ ಮಾಡಬೇಕು.
ಕಾಮ್ಯಸ್ನಾನ :
ಅಮಾವಾಸ್ಯೆ, ವ್ಯತೀಪಾತ ಯೋಗ, ರಥಸಪ್ತಮಿ, ಮೊದಲಾದ ದಿನಗಳಲ್ಲಿ ಮಾಡುವ ಸ್ನಾನ ಹಾಗೂ ಕಾರ್ತಿಕ ಸ್ನಾನ, ಮಾಘ ಸ್ನಾನಾದಿಗಳು, ಪರ್ವಕಾಲದ ಸ್ನಾನಗಳಿಗೆ ಕಾಮ್ಯ ಸ್ನಾನವೆಂದು ಹೇಳಲಾಗುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
