ಇತ್ತೀಚಿನ ದಿನಗಳಲ್ಲಿ ಪರಿವಾಳಗ ಕಾಟ ಹೆಚ್ಚಾಗಿದೆ. ಎಲ್ಲಂದರಲ್ಲಿ ಅವುಗಳು ಗಲೀಜು ಮಾಡುತ್ತಿರುತ್ತದೆ. ಆದರೆ ಇದೀಗ ಈ ಪಾರಿವಾಳದ ಕುರಿತು ಒಂದು ಅಪಾಯಕಾರಿ ಸಂಗತಿ ಹೊರಬಂದಿದ್ದು, ಇದರಿಂದ ಪ್ರತಿಯೊಬ್ಬರೂ ಸಹ ಜಾಗೃತರಾಗಬೇಕಾಗುವ ಅವಶ್ಯಕತೆ ಹೆಚ್ಚಾಗಿದೆ.
ಕಳೆದ ವರ್ಷ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿಧನರಾಗಿದ್ದರು. ಇವರ ನಿಧನಕ್ಕೆ ಪ್ರಮುಖ ಕಾರಣ ಪಾರಿವಾಳದ ಹಿಕ್ಕೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಕುರಿತು ವೈದ್ಯರಾಗಲೀ ನಟಿ ಮೀನಾ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಮಹಾರಾಷ್ಟ್ರದ ಥಾಣೆ ನಗರಪಾಲಿಕೆ ಪಾರಿವಾಳದ ಹಿಕ್ಕೆಯಿಂದ ಉಂಟಾಗುವ ಅಪಾಯವನ್ನು ಅರಿತಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ಹೈಪರ್‌ಸೆನ್ಸಿಟಿವ್ ನ್ಯುಮೋನಿಯಾ ಅಥವಾ ಅತಿಸೂಕ್ಷ್ಮ ಜ್ವರದ ಕೇಸ್‌ಗಳ ಸಂಖ್ಯೆಗಳಲ್ಲಿ ಭಾರೀ ಏರಿಕೆಯಾಗುತ್ತಿದೆ. ಇದು ಒಂದು ಮಾದರಿಯ ಶ್ವಾಸಕೋಶದ ಸೋಂಕು ಆಗಿದ್ದು, ಇದಕ್ಕೆ ಪಾರಿವಾಳದ ಹಿಕ್ಕೆಯ ವಾಸನೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಹಕ್ಕಿ ಹಿಕ್ಕೆಗಳು ಮತ್ತು ಗರಿಗಳ ಮೂಲಕ ಹರಡುವ ರೋಗವು ಶ್ವಾಸಕೋಶವನ್ನು ಸಂಪೂರ್ಣವಾಗಿ ಹಾನಿ ಮಾಡುತ್ತದೆ. ಈ ಕುರಿತು ಜಾಗೃತಿ ಮೂಡಿಸಲು ಮಹಾರಾಷ್ಟ್ರದ ಥಾಣೆ ನಗರದಲ್ಲಿ ಪೋಸ್ಟರ್ ಗಳನ್ನೂ ಅಂಟಿಸುತ್ತಿದ್ದಾರೆ.
ಯಾರಾದರೂ ಪಾರಿವಾಳಕ್ಕೆ ಆಹಾರ ಹಾಕಿದಲ್ಲಿ ಅವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಎಲ್ಲಡೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಪಾರಿವಾಳಗಳ ಹಿಕ್ಕೆಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಇತರ ಅಂಶಗಳಿಂದ ಕೆಟ್ಟ ವಾಸನೆ ಉಂಟಾಗುತ್ತದೆ. ಇದನ್ನು ಉಸಿರಾಡಿದರೆ, ಶ್ವಾಸಕೋಶದ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಲಾಗಿದೆ. ಇದಲ್ಲದೆ ಇದು ಬ್ಯಾಕ್ಟೀರಿಯಾ ದಿಂದ ಉಂಟಾಗುವ ಸೋಂಕಾಗಿದ್ದು, ಸರಿಯಾದ ಚಿಕಿತ್ಸೆ ನೀಡದಿದ್ದರೆ 15 ಪ್ರತಿಶತದಷ್ಟು ಜನರು ಸಾವಿಗೆ ಕಾರಣವಾಗಬಹುದು ಎಂಬ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
