ಎಷ್ಟೋ ಜನರು ಸ್ಮಾರ್ಟ್ಫೋನ್ಗಳನ್ನು ಕಳೆದುಬಿಡುತ್ತಾರೆ. ಇನ್ನೂ ಕೆಲವರ ಸ್ಮಾರ್ಟ್ಫೋನ್ಗಳು ಕಳ್ಳತನವಾಗುತ್ತದೆ. ಈ ಸಂದರ್ಭದಲ್ಲಿ ತಕ್ಷಣ ಏನು ಮಾಡುವುದೆಂದು ಗೊತ್ತೇ? ಈ ಟ್ರಿಕ್ ಮೂಲಕ ಕಳೆದ ಹೋದ ಮೊಬೈಲ್ ಅನ್ನು ಮತ್ತೆ ಮರು ಪಡೆಯಬಹುದು.
ಕಳೆದು ಹೋದ ಮೊಬೈಲ್ಗಳನ್ನು ಪತ್ತೆಹಚ್ಚಲು ಹೊಸ ಆನ್ಲೈನ್ ಪೋರ್ಟಲ್ (Online Portal) ಅನ್ನು ಪೊಲೀಸ್ ಇಲಾಖೆ ಪರಿಚಯಿಸಿದೆ. ಈ ಟ್ರಿಕ್ ಮೂಲಕ ಕಳೆದ ಹೋದ ಮೊಬೈಲ್ ಅನ್ನು ಮತ್ತೆ ಮರು ಪಡೆಯಬಹುದು. ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈ ಮೂಲಕ ಸುಮಾರು 30 ಫೋನ್‌ಗಳನ್ನು ಪೊಲೀಸ್‌ರು ಪತ್ತೆ ಮಾಡಿದ್ದಾರೆ
ಮೊಬೈಲ್ ಕಳೆದು ಹೋದಾಗ ತಕ್ಷಣ ಈ ಕ್ರಮ ಅನುಸರಿಸಿ
• ಮೊದಲಿಗೆ ನಿಮ್ಮ ಅಕ್ಕಪಕ್ಕದಲ್ಲಿರುವ ಯಾರದ್ದಾದರೂ ಅಥವಾ ಮನೆಗೆ ಹೋಗಿ 8277952828 ಈ ನಂಬರ್‌ಗೆ ವಾಟ್ಸಾಪ್‌ನಲ್ಲಿ Hi ಎಂದು ಮೆಸೇಜ್ ಮಾಡಿ.
• ನೀವು ಮೆಸೇಜ್ ಕಳುಹಿಸಿದ ವಾಟ್ಸಾಪ್ ನಂಬರ್‌ಗೆ ಒಂದು ಲಿಂಕ್ ಬರುತ್ತದೆ.
• ಇಲ್ಲಿ ನಿಮಗೆ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
• ನೀವು ಈ ಎಲ್ಲಾ ವಿಷಯಗಳನ್ನು ಭರ್ತಿ ಮಾಡಿದ ನಂತರ ಕಳೆದುಹೋದ ಫೋನ್ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು.
• ಇನ್ನು ಪತ್ತೆಯಾಗದ ಫೋನ್‌ಗಳನ್ನು ಬ್ಲಾಕ್ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
