fbpx
ಸಮಾಚಾರ

IPL 2023 ಆರಂಭಕ್ಕೂ ಮುನ್ನ RCB ತಂಡಕ್ಕೆ ಬಿಗ್ ಶಾಕ್! ಈ ಸೀಸನ್ ನಲ್ಲಿ ಡುಪ್ಲೆಸ್ಸಿ ಆಡುವುದು ಅನುಮಾನ

ಐಪಿಎಲ್ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಮೊದಲ ಆವೃತ್ತಿಯ ಮಹಿಳೆಯರ ಐಪಿಎಲ್ ನಡೆಯುತ್ತಿದೆ. ಇದೆ ತಿಂಗಳು ಮಾರ್ಚ್ 31 ರಿಂದ ಪುರುಷರ ಐಪಿಎಲ್ ಶುರುವಾಗಲಿದೆ. ಈ ವೇಳೆ RCB ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ.

ಈ ಬಾರಿಯೂ ಸಹ RCB ತಂಡಕ್ಕೆ ನೂತನ ಕ್ಯಾಪ್ಟನ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಈಗಿರುವ ಮಾಹಿತಿಯ ಪ್ರಕಾರ RCB ತಂಡದ ನಾಯಕ ಡುಪ್ಲೆಸ್ಸಿ ಈ ಸೀಸನ್ ನಲ್ಲಿ ವೈಯಕ್ತಿಕ ಕಾರಣಗಳಿಂದ ಹೊರಗುಳಿಯಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಇದೇನಾದರು ನಿಜವಾದರೆ RCB ತಂಡಕ್ಕೆ ದೊಡ್ಡ ಹೊಡೆತ ಬೀಳುವುದು ಪಕ್ಕ ಎಂದು ಹೇಳಬಹುದು.

RCB ತಂಡವನ್ನು ಕೊಹ್ಲಿ ಹಲವಾರು ವರ್ಷಗಳಿಂದ ಮುನ್ನೆಡೆಸಿದ್ದರು. 2013 ರಿಂದ 2021 ರ ವರೆಗೂ ಕೊಹ್ಲಿ RCB ತಂಡದ ನಾಯಕತ್ವದ ಜವಬ್ದಾರಿಯನ್ನು ಹೊತ್ತಿದ್ದರು. ಈ ಸಂಧರ್ಭದಲ್ಲಿ RCB ಉತ್ತಮ ಪ್ರದರ್ಶನ ತೋರಿದರು ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಕಳೆದ ಸೀಸನ್ ನಲ್ಲಿ ಡುಪ್ಲೆಸ್ಸಿ ಅವರನ್ನು ನಾಯಕರನ್ನಾಗಿ ಆಯ್ಕೆಮಾಡಲಾಗಿತ್ತು. ಇದೀಗ ಒಂದು ವೇಳೆ ಡುಪ್ಲೆಸ್ಸಿ ಈ ಸೀಸನ್ ನಲ್ಲಿ ಅಲಭ್ಯವಾದರೆ ಮ್ಯಾಕ್ಸ್ವೆಲ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡುವ ಸಾದ್ಯತೆಯಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top