ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಮಾಡಿದರು. ಇದಾದ ಬಳಿಕ ಕೆಲವು ದಿನಗಳ ನಂತರ ಟೋಲ್ ಸಂಗ್ರಹಿಸುವುದಾಗಿ ಹೇಳಿದ್ದರು. ನಂತರ ಅದರ ದಿನಾಂಕವನ್ನು ಮುಂದೂಡಿದರು. ಇದೀಗ ಇಂದಿನಿಂದ ಮತ್ತೆ ಟೋಲ್ ಸಂಗ್ರಹ ಪ್ರಾರಂಭವಾಗಿದ್ದು, ಮೊದಲ ದಿನವೇ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಮಂಗಳವಾರ ಕಣಮಿಣಕಿ ಟೋಲ್‌ನಲ್ಲಿ ಆರಂಭದಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಫಾಸ್ಟ್ ಟ್ಯಾಗ್ ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಬೂತ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅತ್ತ ಫಾಸ್ಟ್ ಟ್ಯಾಗ್ ಇಲ್ಲದೇ ಹೋದ ವಾಹನ ಸವಾರರು ಅದರ ದುಪ್ಪಟ್ಟು ದರವನ್ನು ಕಟ್ಟಬೇಕಾದ ಅನಿವಾರ್ಯ ಎದುರಾಗಿದೆ.
ಟೋಲ್ ಸಂಗ್ರಹದ ಮೊತ್ತ:
ಕಾರು, ಜೀಪ್, ವ್ಯಾನ್‌ಗಳಿಗೆ ಏಕಮುಖ ಸಂಚಾರಕ್ಕೆ 135 ರೂ, ದ್ವಿಮುಖ ಸಂಚಾರಕ್ಕೆ 205 ರೂ. ಸ್ಥಳೀಯ ವಾಹನಗಳಿಗೆ 70 ರೂ. ಹಾಗೂ ತಿಂಗಳ ಪಾಸ್ 4,525 ರೂ.
ಲಘು ವಾಹನ, ಮಿನಿಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 220 ರೂ, ದ್ವಿಮುಖ ಸಂಚಾರಕ್ಕೆ 330 ರೂ. ಸ್ಥಳೀಯ ವಾಹನಗಳಿಗೆ 110 ರೂ. ಇದ್ದು, ತಿಂಗಳ ಪಾಸ್ 7,315 ರೂ.
ಬಸ್ ಹಾಗೂ ಟ್ರಕ್‌ಗಳ ಏಕಮುಖ ಸಂಚಾರಕ್ಕೆ 460 ರೂ, ದ್ವಿಮುಖ ಸಂಚಾರಕ್ಕೆ 690 ರೂ. ಸ್ಥಳೀಯ ವಾಹನಗಳಿಗೆ 230 ರೂ. ಇದ್ದು, ಮಾಸಿಕ ಪಾಸ್ 15,325 ರೂ. ಇದೆ.
ಮೂರು ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 500ರೂ., ದ್ವಿಮುಖ ಸಂಚಾರಕ್ಕೆ 750 ರೂ. ಸ್ಥಳೀಯ ವಾಹನಗಳಿಗೆ 250 ರೂ. ಹಾಗೂ ತಿಂಗಳ ಪಾಸ್‌ಗೆ 16,715 ರೂ.
ಭಾರೀ ನಿರ್ಮಾಣ ವಾಹನಗಳಿಗೆ ಏಕಮುಖ ಸಂಚಾರಕ್ಕೆ 720 ರೂ. , ದ್ವಿಮುಖ ಸಂಚಾರಕ್ಕೆ 1,080 ಇದೆ. ಸ್ಥಳೀಯ ವಾಹನಗಳಿಗೆ 360 ರೂ. ಹಾಗೂ ತಿಂಗಳ ಪಾಸ್‌ಗೆ 24,030 ರೂ. ಇದೆ.
ಅತಿ ಗಾತ್ರದ ವಾಹನಗಳ ಏಕಮುಖ ಸಂಚಾರಕ್ಕೆ 880 ರೂ., ದ್ವಿಮುಖ ಸಂಚಾರಕ್ಕೆ 1,315 ರೂ, ಸ್ಥಳೀಯ ವಾಹನಗಳಿಗೆ 440 ರೂ. ಹಾಗೂ ತಿಂಗಳ ಪಾಸ್‌ಗೆ 29,255 ರೂ ಇದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
